818 ಕೋಟಿಗಳ ಗಡಿ ದಾಟಿದ ಕಾಂತಾರ ಅಧ್ಯಾಯ 1
ಕನ್ನಡದ ಹೆಮ್ಮೆಯ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್ ನಿರ್ಮಾಣದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶನದ ಹಾಗೂ ಅಭಿನಯದ ಕಾಂತಾರ ಅಧ್ಯಾಯ 1 ವಿಶ್ವದಾದ್ಯಂತ ಬಾರಿ ಪ್ರಶಂಸೆಯನ್ನು ಪಡೆದು, ಗಳಿಕೆಯಲ್ಲಿ 818 ಕೋಟಿಗಳನ್ನು ಗಳಿಸಿ ಮುನ್ನುಗ್ಗುತ್ತಿದೆ. ಇದು ಕನ್ನಡ ಸಿನಿಮಾ ವಿಶ್ವದಾದ್ಯಂತ ಹೆಸರು ಪಡೆದು, ಕನ್ನಡ ಚಿತ್ರರಂಗದ ಕೀರ್ತಿಯನ್ನು ಹೆಚ್ಚಿಸಿರುವುದು ಹೆಮ್ಮೆಯ ವಿಷಯ ಎನ್ನಬಹುದು.











