“ಹಚ್ಚೆ” ಚಿತ್ರದ ವಿಮರ್ಶೆ. ಗತಕಾಲದ ಇತಿಹಾಸಕ್ಕೆ ಸಾಕ್ಷಿಯಾದ “ಹಚ್ಚೆ”
ಚಿತ್ರ ವಿಮರ್ಶೆ
ಚಿತ್ರ – ಹಚ್ಚೆ
ನಿರ್ಮಾಪಕರು – ಯಶೋಧರ
ನಿರ್ದೇಶನ – ಯಶೋಧರ
ಛಾಯಾಗ್ರಹಣ – ಯಾಸಿನ್
ಸಂಗೀತ – ವಿವೇಕ್ ಚಕ್ರವರ್ತಿ
Rating – 3/5
ವಿಮರ್ಶೆ – ಮಂಜುರಾಜ್ ಸೂರ್ಯ
ಕಲಾವಿದರು -ಅಭಿಮನ್ಯು, ಆದ್ಯಪ್ರಿಯ, ಗುರುರಾಜ ಹೊಸಕೋಟೆ, ಅನುಪ್ರೇಮ, ದುಷ್ಯಂತ್, ಶ್ರೀಮಂತ್ ಸುರೇಶ್, ಚಂದ್ರು ಬಂಡೆ ಮುಂತಾದವರು.
ಚಿತ್ರದ ಹೆಸರು ಹಚ್ಚೆ ಹೆಸರಿಗೆ ತಕ್ಕಂತೆ ಈಡೀ ಸಿನಿಮಾ ಹಚ್ಚೆಯ ಹೆಜೆಯ ಜಾಡನ್ನು ಹುಡುಕುವ ಖಳನಟ.
ಎದೆಯ ಮೇಲೆ ಹಚ್ಚೆಯ ಗುರುತುಇರುವ ವ್ಯಕ್ತಿಯೇ ತನ್ನ ಎದೆ ಬಗೆಯುತ್ತಾನೆ ಎಂಬ ಮಾಂತ್ರಿಕನ ಭವಿಷ್ಯವನ್ನು ಅರಸಿ ಹಚ್ಚೆ ಇರುವ ವ್ಯಕ್ತಿಯ ಹುಡುಕಾಟ, ಧಾವಂತ, ಆತಂಕ, ಭಯ ಮತ್ತು ದುಷ್ಟತನದ ಅಟ್ಟಹಾಸದಲ್ಲಿ ಖಳನಟನಿದ್ದರೆ,
ಮ್ಯಕಾನಿಕ್ ಸೂರ್ಯ ಈ ಖಳನಟನ ಡ್ರಗ್ ಮಾಫಿಯಾ, ಹೆಣ್ಣು ಮಕ್ಕಳ ಕಳ್ಳಸಾಗಣೆಯಂತಹ ಕೃತ್ಯಗಳ ಸಾಮ್ರಾಜ್ಯಕ್ಕೆ ಮಾರಕವಾಗುತ್ತಾನೆ.

ನಿರ್ದೇಶಕ ಯಶೋಧರ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ಧಾರಿಯನ್ನು ಹೊತ್ತಿದ್ದಾರೆ, ಇದೊಂದು ವಿಭಿನ್ನ ಜಾನರ್ ಕಥೆ.
ನಾಯಕ ನಟ ಸೂರ್ಯನ ಎದೆಯ ಮೇಲಿನ ಹಚ್ಚೆಗೂ ವಿಜಯನಗರ ಸಾಮ್ರಾಜ್ಯಕ್ಕೂ ಒಂದು ಲಿಂಕ್ ಇದೆ. ಆ ಕೊಂಡಿಗೂ ಹಚ್ಚೆಗೂ ಏನು ಸಂಭಂದ, ನಾಯಕನ ಎದೆ ಮೇಲೆ ಹಚ್ಚೆ ಮೂಡಿದ್ದು ಹೇಗೆ, ನಾಯಕನಿಗೂ ಖಳನಟನಿಗೂ ಏನು ಸಂಭಂದ ಇದೆಲ್ಲಾ ತಿಳಿಯಲು ಹಚ್ಚೆ ಚಿತ್ರದ ಎರಡನೇ ಭಾಗದಲ್ಲಿ ನಿರ್ದೇಶಕರು ಪ್ರೇಕ್ಷಕರಿಗೆ ತೋರುಸುತ್ತಾರಂತೆ ಅದರ ಮೂಲವಾಗಿ ಚಿತ್ರದ ಕೊನೆಗೆ ಎರಡನೇ ಭಾಗ ಸಿನಿಮಾ ಬರುತ್ತದೆ ಎಂಬ ಕುರುಹನ್ನು ಬಿಟ್ಟುಕೊಟ್ಟಿದ್ದಾರೆ.
ಚಿತ್ರದಲ್ಲಿ ಪ್ರೀತಿ ಪ್ರೇಮ, ಸ್ನೇಹ, ಸೆಂಟಿಮೆಂಟ್ ಗಳ ಜೊತೆಗೆ, ಐತಿಹಾಸಿಕ, ಮಾಟ, ಮಂತ್ರ, ತಂತ್ರ, ಎಲ್ಲವೂ ಅಡಗಿದೆ.

ಅಭಿಮನ್ಯು ಈಗಾಗಲೆ ಕೆಲವು ಪಾತ್ರಗಳಿಗೆ, ಕೆಲವು ಚಿತ್ರಗಳಲ್ಲಿ ಬಣ್ಣ ಹಚ್ಚಿ ನಟಿಸಿದ್ದಾರೆ. ಈಗ ಹಚ್ಚೆಯ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಚಿತ್ರ ನಿರ್ದೇಶನದ ಜೊತೆಗೆ ನಿರ್ಮಾಣವನ್ನು ಮಾಡಿದ್ದಾರೆ.
ನಟನೆಯಲ್ಲೂ ಆಕ್ಷನ್ ಹೀರೋ ಆಗುವ ಲಕ್ಷಣ ಕಾಣುತ್ತಿದೆ.
ಚಿತ್ರದಲ್ಲಿ ಇತರ ಕಲಾವಿದರಾದ ಆದ್ಯಪ್ರಿಯಾ, ಅನುಪ್ರೇಮ ನಾಯಕಿಯರಾಗಿ ಅಭಿಮನ್ಯುಗೆ ಸಾಥ್ ನೀಡಿದ್ದಾರೆ.

ಹಿರಿಯ ನಟ, ಜನಪದ ಹಾಡುಗಾರ ಗುರುರಾಜ್ ಹೊಸಕೊಟೆ ಚಿತ್ರಕ್ಕೆ ಹಿರಿಯತನವನ್ನು ತುಂಬಿದ್ದಾರೆ.
ಉಳಿದ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ವಿವೇಕ್ ಚಕ್ರವರ್ತಿ ಸಂಗೀತ ಗಮನ ಸೆಳೆಯುತ್ತದೆ.
ಹಾಗೆಯೇ ಯಾಸಿನ್ ಸುಂದರ ತಾಣಗಳಲ್ಲಿ ಚಿತ್ರೀಕರಿಸಿರುವ ದೃಷ್ಯಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.
ಒಟ್ಟಿನಲ್ಲಿ ಹಚ್ಚೆ ಭಾಗ 2 ಬರುವ ನಿರೀಕ್ಷೆ ಇದೆ. ಈಗ ತೆರೆ ಕಂಡಿರುವ ಮೊದಲ ಭಾಗದ ಹಚ್ಚೆಯನ್ನು ಪ್ರೇಕ್ಷಕರ ಕೈ ಹಿಡಿಯಬೇಕು.











