“ಸರಳ ಸುಬ್ಬರಾಯರ ಪ್ರಣಯ ಪ್ರೇಮ ಕಾವ್ಯ”
ಚಿತ್ರ – ಸರಳ ಸುಬ್ಬರಾವ್
ನಿರ್ಮಾಪಕರು –
ನಿರ್ದೇಶನ – ಮಂಜು ಸ್ವರಾಜ್
ಛಾಯಾಗ್ರಹಣ –
ಸಂಗೀತ – ಅಜನೀಶ್ ಲೋಕನಾಥ್
ಸಂಕಲನ –
Rating -3.5/5
Sarala Subbarao Review:
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
“ಸರಳ ಸುಬ್ಬರಾಯರ ಪ್ರಣಯ ಪ್ರೇಮ ಕಾವ್ಯ”
ತಾರಾಗಣ – ಅಜಯ್ ರಾವ್, ಮಿಶಾ ನಾರಂಗ್, ರಂಗಾಯಣ ರಘು, ಪ್ರೊ. ಕೃಷ್ಣೇಗೌಡ, ಚಿತ್ಕಲ ಬಿರಾದರ್, ವಿಜಯ್ ಚೆಂಡೂರು, ರಘು ರಾಮನಕೊಪ್ಪ, ರಾಮಕೃಷ್ಣ, ಮುಂತಾದವರು.
Sarala Subbarao Review:
ತ್ರಿವೇಣಿ ಅವರ ‘ವಸಂತ ಗಾನ’ ಕಾದಂಬರಿಯನ್ನು ನಿರ್ದೇಶಕ ಮಂಜು ಸ್ವರಾಜ್ ಕಥೆಗೆ ಮತ್ತು ಕಥೆಯಲ್ಲಿನ ಪಾತ್ರಗಳಿಗೆ ಎಲ್ಲೂ ಲೋಪವಾಗದಂತೆ ಚಿತ್ರಕಥೆಯನ್ನು ಮಾಡಿಕೊಂಡಿದ್ದಾರೆ.
‘ಸರಳ ಸುಬ್ಬರಾವ್’ ಚಿತ್ರವು 70ರ ದಶಕದಲ್ಲಿ ನಡೆವ ಒಂದು ಸುಂದರವಾದ ದಾಂಪತ್ಯ ಜೀವನದ ಕಥೆಯಾಗಿದೆ. ನಿರ್ದೇಶಕರು ಈ ಚಿತ್ರವನ್ನು ಅಷ್ಟೇ ರೊಮ್ಯಾಂಟಿಕ್ ಆಗಿ ಚಿತ್ರಿಸಿದ್ದಾರೆ.
ಈ ಚಿತ್ರದಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿ ಅಜಯ್ ರಾವ್ ಹಾಗೂ ಸರಳ ಪಾತ್ರದಲ್ಲಿ ಮಿಶಾ ನಾರಂಗ್ ಅಭಿನಯಿಸಿದ್ದಾರೆ.
ಅದು 1971ರ ಕಾಲಘಟ್ಟ ಆಗ ಭಾರತ ಮತ್ತು ಪಾಕಿಸ್ಥಾನದ ಯುದ್ಧದ ಸಮಯ. ಆ ಸಮಯದಲ್ಲಿ ಸರಳ ಮತ್ತು ಸುಬ್ಬರಾಯರ ಪ್ರೇಮ ಪ್ರಸಂಗ ನಡೆಯುತ್ತದೆ.
ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿರುವ ಸುಬ್ಬರಾವ್‌ಗೆ ಸರಳ (ಮಿಶಾ) ಮೇಲೆ ಮೊದಲ ನೋಟದಲ್ಲೇ ಪ್ರೇಮಾಂಕುರವಾಗುತ್ತದೆ.
ಆಕೆ ಸರಳ, ಮಗುವಿನಂತ ಮನಸ್ಸಿನ ಮುಗ್ದತೆಯ ತುಂಟತನದ ಹುಡುಗಿ.
ಅವಳ ನಿಶ್ಕಲ್ಮಶತೆಯ ಮನಸ್ಸಿಗೆ
ಸುಬ್ಬರಾವ್ ಶರಣಾಗಿ ಅವಳನ್ನು ಪ್ರೀತಿಸಲು ಶುರು ಮಾಡುತ್ತಾನೆ.
ಇಲ್ಲಿಂದ ಶುರುವಾಗೋದೆ ಸರಳ ಸುಬ್ಬರಾವ್ ಪ್ರೇಮ ಕಥೆ.
ಮೊದಲ ನೋಟದಲ್ಲೇ ಅರಳಿದ ಪ್ರೀತಿ, ನಂತರ, ಸ್ನೇಹ, ಪರಿಚಯ, ನಂತರ ಮದುವೆಯಲ್ಲಿ ಇಬ್ಬರ bachelor ಜೀವನಕ್ಕೆ ತಿಲಾಂಜಲಿ ಇಡಲಾಗುತ್ತದೆ.
ಯಾವುದೇ ಅಡಚಣೆ ಇಲ್ಲದೇ ಎರಡೂ ಕುಟುಂಬಗಳು ಖುಷಿ ಖುಷಿಯಿಂದಲೇ ಇಬ್ಬರ ಮದುವೆಗೆ ಅಕ್ಷತೆ ಹಾಕಿ ಹರಸಿ ದಾಂಪತ್ಯ ಜೀವನಕ್ಕೆ ರಹದಾರಿ ನೀಡುತ್ತಾರೆ.
ಮುಂದಿನ ಇವರ ಪ್ರಣಯದ ಶೃಂಗಾರ ರಸ ನಿಮಿಷಗಳನ್ನು ನಿರ್ದೇಶಕರು ಬಹಳ ಚನ್ನಾಗಿ ಕಟ್ಟಿಕೊಟ್ಟಿದ್ದಾರೆ.
ಎಲ್ಲವೂ ಸರಿ ಇದೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಷ್ಟರಲ್ಲಿ ಬಂದೊದಗುವ ಕೆಲವುಬದುಕಿನ ತಿರುವುಗಳ ತೀರ್ವತೆಯನ್ನು ನಿಭಾಯಿಸುವ ಪ್ರಸಂಗಗಳನ್ನು ಚನ್ನಾಗಿ ಕಟ್ಟಿಕೊಡಲಾಗಿದೆ.
ಜೊತೆಗೆ 1971ರಲ್ಲಿ ನಡೆವ ಭಾರತ – ಪಾಕ್ ನಡುವಿನ ಯುದ್ಧ ಹೇಗೆ ಸರಳ ಸುಬ್ಬರಾವ್ ಕುಟುಂಬಕ್ಕೆ ಕನೆಕ್ಟ್ ಆಗುತ್ತದೆ. ಯುದ್ಧಕ್ಕೂ ಈ ಪ್ರೇಮಿಗಳಿಗೂ ಎಲ್ಲಿಯ ಸಂಬಂಧ, ಒಂದು ಸುಂದರ ಕಾದಂಬರಿಯನ್ನು ಇಂದಿನ ಕಾಲಘಟ್ಟದ ಯುವ ಜನತೆಗೆ ಹೇಗೆ ಅರ್ಥ ಪಡಿಸಿದ್ದಾರೆ, ಸುಖಾ ಸುಮ್ಮನೆ ಬಿಲ್ಡಪ್ ಸೀನುಗಳಿಲ್ಲದೇ, ಬೇಕಂತಲೇ ಅಸಂಬದ್ಧ ದೃಶ್ಯಗಳನ್ನು ತುರುಕದೇ, ಕೆಟ್ಟ ಸಂಭಾಷಣೆಗಳಿಲ್ಲದೇ ಸಿನಿಮಾವನ್ನು ಕಟ್ಟಿಕೊಟ್ಟಿರುವ ಪರಿಯನ್ನು ಸವಿಯಲು ಪ್ರೇಕ್ಷಕರು ಚಿತ್ರ ಮಂದಿರದಲ್ಲಿ ಸಿನಿಮಾ ನೋಡಲೇ ಬೇಕು.
ಅಜನೀಶ್ ಲೋಕನಾಥ್ ಅವರ ಸಂಗೀತ ಚಿತ್ರದ ಶೃಂಗಾರಕ್ಕೆ ದೃಷ್ಠಿ ಬೊಟ್ಟು ಇಟ್ಟಂತಿದೆ. ಜೊತೆಗೆ ಹಿನ್ನೆಲೆ ಸಂಗೀತ ಕಥೆಯೊಂದಿಗೆ ಸರಳವಾಗಿ ಸಾಗುತ್ತಾ, ಒಳ್ಳೆಯ ಪ್ರೇಮ ಪರಿಕಲ್ಪನೆಗೆ ಸಾಥ್ ನೀಡಿದೆ.
ನಟ ಅಜಯ್ ರಾವ್ ಅವರು ಸುಬ್ಬರಾವ್ ಆಗಿ ಇಷ್ಟವಾಗುತ್ತಾರೆ. ಇಂಗ್ಲಿಷ್ ಪ್ರೊಫೆಸರ್ ಆಗಿ, ರೆಟ್ರೋ ಶೈಲಿಯಲ್ಲಿ 70ರ ದಶಕವನ್ನು ಕಣ್ಮುಂದೆ ಬರುವಂತೆ ಅವರ ಮ್ಯನರಿಸಂ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.
ಒಳ್ಳೆಯ ಪ್ರೇಮಿಯಾಗಿ, ಒಳ್ಳೆಯ ಮಗನಾಗಿ, ಸುಂದರಿ ಸರಳಾಗೆ ಮುದ್ದಿನ ಗಂಡನಾಗಿ, ತನ್ನ ವಂಶದ ಕುಡಿಯನ್ನು ಕಾಯುವ ಒಬ್ಬ ಜವಾಬ್ಧಾರಿಯುತವಾದ ತಂದೆಯಾಗಿ ಪಾತ್ರವನ್ನು ಬಹಳ ಚನ್ನಾಗಿ ನಿಭಾಯಿಸಿದ್ದಾರೆ.
ಕ್ಲೈಮ್ಯಾಕ್ಸ್ ಸೀನ್‌ನಲ್ಲಿ ಅಕ್ಷರಶಃ ಪ್ರೇಕ್ಷಕರನ್ನು ಅಳಿಸುತ್ತಾರೆ
ಸರಳ ಪಾತ್ರದಲ್ಲಿ ಮಿಶಾ ಜೀವಿಸಿದ್ದಾರೆ, ಪಾತ್ರಕ್ಕೆ ನೈಜತೆಯನ್ನು ತುಂಬುವಲ್ಲಿ ಮಿಶಾ ಯಶಸ್ವಿಯಾಗಿದ್ದಾರೆ.
ಮುದ್ದಾಗಿ ಕಾಣಿಸುವುದರ ಜೊತೆಗೆ ಆ ಪಾತ್ರವನ್ನು ಅಷ್ಟೇ ಮುದ್ದಾಗಿಸಿದ್ದಾರೆ. ಈ ಚಿತ್ರದ ಜಾಹುಇ ಚಿತ್ರ ಕಥೆಯ ಮ
ಇನ್ನು ಚಿತ್ರದಲ್ಲಿ
ರಂಗಾಯಣ ರಘು ಮತ್ತು ವೀಣಾ ಸುಂದರ್ ಅವರ ಕಾಂಭಿನೇಷನ್ ಚನ್ನಾಗಿ ಮೂಡಿಬಂದಿದೆ. ನಟ
ರಾಮಕೃಷ್ಣ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅತಿಥಿ ಪಾತ್ರದಲ್ಲಿ ನಟ ಶ್ರೀ ಮಹಾದೇವ್ ಇದ್ದಾರೆ.
ರಘು ರಾಮನಕೊಪ್ಪ, ವಿಜಯ್ ಚೆಂಡೂರ್ ಹಾಸ್ಯ ಕಲಾವಿದರಾಗಿ ಪ್ರೇಕ್ಷಕರನ್ನು ರಂಜಿಸುವ ಪ್ರಯನ್ನ ಮಾಡಿದ್ದಾರೆ.
ಆದರೆ ನಿರ್ದೇಶಕರು ಚಿತ್ರದಲ್ಲಿ ಹಾಸ್ಯಕ್ಕೆ ಇನ್ನಷ್ಟು ಒತ್ತು ಕೊಡಬಹುದಿತ್ತು.











