ಲವ್ OTP ಚಿತ್ರ ವಿಮರ್ಶೆ. ಆರ್ಗ್ಯಾನಿಕ್, ಹಾರ್ಪಿಕ್ ಲವ್ ಸ್ಟೋರಿ.
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಚಿತ್ರ – ಲವ್ OTP
ನಿರ್ಮಾಪಕರು – ವಿಜಯ್ M.ರೆಡ್ಡಿ
ನಿರ್ದೇಶನ – ಅನೀಶ್ ತೇಜೇಶ್ವರ್
ಛಾಯಾಗ್ರಹಣ – ಹರ್ಷವರ್ಧನ K.
ಸಂಗೀತ – ಆನಂದ್ ರಾಜವಿಕ್ರಮ
ಸಂಕಲನ – C. ಶರತ್ ಕುಮಾರ್
Rating -3.5/5
ಕಲಾವಿದರು :- ಅನೀಶ್ ತೇಜೇಶ್ವರ್, ತುಳಸಿ ಶಿವಮಣಿ, ರಾಜೀವ್ ಕನಕಲ, ಸ್ವರೂಪಿಣಿ, ಜಾನ್ವಿಕಾ ಕಲಕೇರಿ, ಪ್ರಮೋದಿನಿ, ನಾಟ್ಯ ರಂಗ, ಚೇತನ್ ಗಂಧರ್ವ ಮುಂತಾದವರು.

ಅವನಿಗೆ ಕ್ರಿಕೆಟ್ ಅಂದ್ರೆ ಪ್ರಾಣ ಹಾಗೇ ಅಪ್ಪ ಅಮ್ಮನಿಗೆ ಮಗ ಅಂದ್ರೆ ಪ್ರಾಣ.
ಅವನಿಗೆ ಲವ್ ಮಾಡೋಕೆ ಇಷ್ಟ ಆದ್ರೆ ಅಪ್ಪ ಹೊಡಿತಾರೆ ಅನ್ನೋ ಭಯ, ಅಪ್ಪನಿಗೆ ಮಗ ಅಂದ್ರೆ ಇಷ್ಟ ಆದ್ರೆ ಲವ್ ಅಂತ ಹುಡುಗಿ ಹಿಂದೆ ಬಿದ್ರೆ ಅಂತ ಭಯ.
ಈ ಇಷ್ಟ ಭಯಗಳ ನಡುವೆ ನಾಯಕನ ಬದುಕಿಗೆ ಇಬ್ಬರು ಹುಡುಗಿಯರು ಬರುತ್ತಾರೆ
ಇಬ್ಬರಲ್ಲಿ ಯಾರು ಜೋಡಿ ಆಗ್ತಾರೆ, ಯಾರು Exit ಆಗ್ತಾರೆ, ಅಥವಾ ಟ್ಯ್ರಾಂಗಲ್ ಲವ್ ಸ್ಟೋರಿನಾ ಅಂತ ಅನ್ನಿಸುತ್ತೆ.
ಆದ್ರೆ ಇದೊಂದು ಹೊಸ ತರದ ಕಥೆ ಎನ್ನಬಹುದು.
ಹೌದು ಇದೊಂತರ ಹೊಸ ಕಥೆಯೇ ನಾಯಕನಾಗಿ ಜೊತೆಗೆ ಅನೀಶ್ ತೇಜೇಶ್ವರ್ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ನಿರ್ದೇಶಕರ ಸಾಲಿಗೆ ಸೇರಿದ್ದಾರೆ.
ಅನೀಶ್ ಬಹಳ ಅಚ್ಚುಕಟ್ಟಾಗಿ ನಿರ್ದೇಶನದ ಹಾಗೂ ಅಭಿನಯದ ಜವಾಬ್ಧಾರಿಯನ್ನು ನಿಭಾಯಿಸಿದ್ದಾರೆ.
ಸಿನಿಮಾ ಪ್ರಾರಂಭದಲ್ಲಿ ಜೈಲಿನಲ್ಲಿ ನಾಯಕನನ್ನು ಪೋಲೀಸ್ ಇನ್ಸ್ಪೆಕ್ಟರ್ ಆದ ಅವರಪ್ಪ ( ರಾಜೀವ್ ಕನಕಲ ) ಪೋಲೀಸರಿಂದ ಒಡೆಸುತ್ತಿರುತ್ತಾರೆ. ಕಾರಣ ಅವನು ಹೊಡೆದಾಡಿ ಗಲಾಟೆ ಮಾಡಿದ್ದಾನೆ ಅಂತ. ಆದ್ರೆ ಅಲ್ಲಿಂದ ಒಬ್ಬ ಹುಡುಗಿಗೆ ಅವನ ಮೇಲೆ ಲವ್ ಆಗುತ್ತೆ. ಆದರೆ ನಾಯಕನಿಗೆ ಅಪ್ಪನ ಭಯ ಒಳಗೆ ಆಸೆ. ಸ್ನೇಹಿತ ಬೇಡ ಅಂದ್ರು ಬರೀ ಫ್ರೆಂಡ್ ಷಿಪ್ ಅಂತ ಹೇಳುತ್ತಲೇ ಕಾಂಡೂಮ್ ಕರೀದಿಸಿ ಮದುವೆಗೆ ಮುಂಚೇನೆ ಒಂದು ಹುಡುಗಿಯೊಂದಿಗೆ ಆಟ ಆಡುತ್ತಾನೆ. ನಂತರ ಅವಳು ಯಾವಾಗಲೂ ಅಲ್ಲಿ ಬಾ, ಇಲ್ಲಿ ಬಾ, ನಾನು ನಿನ್ನ ತುಂಬಾ ಪ್ರೀತಿ ಮಾಡ್ತೀನಿ ಅಂತ ಹಿಂದೆ ಬೀಳುತ್ತಾಳೆ ನೀನು ಬರದಿದ್ರೆ ಹಾರ್ಪಿಕ್ ಕುಡಿದು ಸಾಯ್ತೀನಿ ಅಂತ ಎಮೋಷನಲ್ ಬ್ಲಾಕ್ ಮೇಲ್ ಮಾಡ್ತಾಳೆ ಅವಳು ಕಥೆಯ ಮೊದಲ ನಾಯಕಿ. (ಸ್ವರೂಪಿಣಿ) ಇದು ಕಥಾನಾಯಕನಿಗೆ ಕಿರಿಕಿರಿ ಅನ್ನಿಸುತ್ತದೆ. ಅವಳನ್ನು ದೂರವಿಡಲು ಪ್ರಯತ್ನಿಸುತ್ತಾನೆ. ಅಷ್ಟರಲ್ಲಿ ಅವನ ಬದುಕಿಗೆ ಮತ್ತೊಬ್ಬ ಹುಡುಗಿಯ ಆಗಮನ ಇವಳು ಎರಡನೇ ನಾಯಕಿ. (ಜಾನ್ವಿಕ ಕಲಕೇರಿ)
ನಾಯಕ ನಾನು ನಿನ್ನ ಪ್ರೀತಿ ಮಾಡ್ತೀನಿ ಅಂತ ನೇರವಾಗಿ ಹೇಳಿ ಬಿಡುತ್ತಾನೆ. ಅಷ್ಟೇ ಪ್ರಾಮಾಣಿಕವಾಗಿ
ನನಗೊಬ್ಬಳು ಗರ್ಲ್ ಫ್ರೆಂಡ್ ಇದ್ದಾಳೆ ಅವಳದ್ದು ಒನ್ ಸೈಡ್ ಲವ್ ನನಗೆ ಬ್ಲಾಕ್ ಮಾಡಿ ನನ್ನಿಂದೆ ಬಿದ್ದಿದ್ದಾಳೆ ಅಂತ ಈ ಹುಡುಗಿಗೆ ಮನವರಿಕೆ ಮಾಡಿ ಮತ್ತೆ ಪ್ರೀತಿಗೆ ಜಾರುತ್ತಾನೆ.
ಮೊದಲೇ ಹೇಳಿದಂತೆ ಇದು ಹೊಸ ತರ ಕಥೆ..? ನಾಯಕ ನಟ ಒಂದು ಹುಡುಗಿಯನ್ನು ಅನುಭವಿಸಿ ನಂತರ ಬೇಡ ಅಂತ ಬೇರೆಯವಳನ್ನು ಕಾಡಿ ಬೇಡಿ ಪ್ರೀತಿಸೋದು ಹೊಸದೇ ಅಂತ ಅನ್ನಿಸುತ್ತದೆ.
ನಾಯಕ ಯಾರನ್ನು ಪ್ರೀತಿಸುತ್ತಾನೆ, ಯಾರೊಂದಿಗೆ ಮದುವೆ ಆಗುತ್ತಾನೆ, ಲವ್ ಅಂದ್ರೆ ಉರಿದು ಬೀಳೋ ಅಪ್ಪ ಇವರ ಪ್ರೀತಿಯನ್ನು ಒಪ್ಪುತ್ತಾರಾ.
ಚಿತ್ರದ ಕೊನೆಗೆ ಟ್ರಾಜಿಡಿ ಎಂಡಿಂಗಾ ಅಥವಾ ಕಾಮಿಡಿ ಎಂಡಿಂಗಾ ಅಂತ ತಿಳಿಬೇಕಾದ್ರೆ ಸಿನಿಮಾ ನೋಡಲೇ ಬೇಕು.
ಚಿತ್ರದಲ್ಲಿ ಎಲ್ಲಾ ಕಲಾವಿದರು ಚನ್ನಾಗಿ ಪಾತ್ರ ನಿರ್ವಹಿಸಿದ್ದಾರೆ.
ಚಿತ್ರದ ಮೇಕಿಂಗ್, ಸಂಗೀತ, ಛಾಯಾಗ್ರಹಣ ಎಲ್ಲವೂ ಚನ್ನಾಗಿ ಮೂಡಿಬಂದಿದೆ.
ತುಂಬಾ ಅಪ್ಡೇಟೆಡ್ ಕಥೆ ಇದಾಗಿದೆ. ಚಿತ್ರದ ಹಾಡುಗಳು, ಚಿತ್ರೀಕರಿಸಿರುವ ಲೊಕೇಷನ್ ಗಳು ಎಲ್ಲವೂ ಚನ್ನಾಗಿ ಮೂಡಿಬಂದಿದೆ.
ತೆಲುಗಿನ ಮೂಲದ ರಾಜೀವ್ ಕನಕಲ ಕನ್ನಡ ಬರದಿದ್ದರೂ ಜನರಿಗೆ ಇಷ್ಟವಾಗುವಂತೆ ಅಭಿನಯಿಸಿದ್ದಾರೆ.
ಸ್ವರೂಪಿಣಿ, ಜಾನ್ವಿಕಾ ಕಲಕೇರಿ ಇಬ್ಬರೂ ಕಥಾ ನಾಯಕಿಯರಾಗಿ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಪ್ರಮೋದಿನಿ ಮೊದಲಬಾರಿಗೆ ಅನೀಶ್ ಅಮ್ಮನಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ.
ಹಾಗೂ ನಾಟ್ಯರಂಗ ನಾಯಕನ ಗೆಳೆಯನಾಗಿ ಹಾಸ್ಯದೊಂದಿಗೆ ಎಲ್ಲರ ಗಮನ ಸೆಳೆಯುತ್ತಾರೆ.
ಅನೀಶ್ ಕ್ರಿಕೆಟ್ ಪ್ರೇಮಿಯಾಗಿ ಮತ್ತು ಒಬ್ಬ ಕ್ರಿಕೇಟ್ ಪಟು ಆಗಬೇಕೆಂಬ ಕನಸು ಹೊತ್ತ ಹುಡುಗನಾಗಿ ಲವಲವಿಕೆಯಿಂದ ಕಾಣಿಸುತ್ತಾರೆ.
ಒಟ್ಟಿನಲ್ಲಿ ಲವ್ OTP ಯಲ್ಲಿ ಮನರಂಜನೆಗೆ ಕೊರತೆಯಿಲ್ಲ ಎನ್ನಬಹುದು. ಅನೀಶ್ ಮತ್ತು ಅವರ ತಂಡ ಬಹಳ ಕಷ್ಟ ಪಟ್ಟು ಒಳ್ಳೆಯ ಚಿತ್ರವನ್ನು ನೀಡುವ ಪ್ರಯತ್ನ ಮಾಡಿದ್ದಾರೆ. ಇನ್ನು ಪ್ರೇಕ್ಷಕರು ಕೈ ಹಿಡಿದು ಕನ್ನಡ ಸಿನಿಮಾಗಳನ್ನು ಗೆಲ್ಲಿಸಬೇಕಷ್ಟೆ.











