ಲವ್ ಸಾಕಾದ್ರೆ ಖರ್ಚು ಮಾಡಿದ ಹಣ, ಗಿಫ್ಟ್ ವಾಪಸ್ ಕೊಡಿ

ಚಿತ್ರ –  ಅಮೃತ ಅಂಜನ್
ನಿರ್ಮಾಪಕರು – ವಿಜಯ್ ಕುಮಾರ್
ನಿರ್ದೇಶನ –  ಜ್ಯೋತಿರಾವ್ ಮೋಹಿತ್
ಛಾಯಾಗ್ರಹಣ – ಸುಮಂತ್ ಆಚಾರ್ಯ
ಸಂಗೀತ – ರೋಹಿತ್ ಸೋವೆರ್
ಸಂಕಲನ – ಕಿರಣ್ ಕುಮಾರ್

Rating -3.5/5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು : ಸುಧಾಕರ್ ಗೌಡ, ಪಾಯಲ್ ಚಂಗಪ್ಪ, ಗೌರವ್ ಶೆಟ್ಟಿ, ಶ್ರೀ ಭವ್ಯ, ಪಲ್ಲವಿ ಪರ್ವ, ಕಾರ್ತಿಕ್ ಮುಂತಾದವರು.

ಲವ್ ಮಾಡ್ತೀವಿ ಬ್ರೇಕಪ್ ಮಾಡಿ ಬಿಟ್ಟು ಹೋಗಬೇಕಾದರೆ ನಾವು ನಿಮಗಾಗಿ ಖರ್ಚು ಮಾಡಿದ ಹಣ ವಾಪಸ್ ಕೊಟ್ಟು ಹೋಗಿ ಅನ್ನೋದು ಅಮೃತ ಅಂಜನ್ ಚಿತ್ರದ ಪ್ರೇಮಿಗಳ ಹೊಸ ಅಜಂಡಾ.
ಹೌದು ಹುಡುಗೀರು ಲವ್ ಹೆಸರಲ್ಲಿ ಬಾಯ್ ಫ್ರೆಂಡ್ ಹತ್ತಿರ ಅದು ಬೇಕು ಇದು ಬೇಕು ಅಂತ ಕಾಸ್ಲಿ ಗಿಫ್ಟ್ ಗಳು ತೆಗೆಸಿಕೊಂಡು, ಹೋಟೆಲ್ ಪಬ್ ಅಂತ ಚನ್ನಾಗಿ  ಹಣ ಖಾಲಿ ಮಾಡಿ ನಂತರ ಸಣ್ಣ ಸಣ್ಣ ವಿಷಯಕ್ಕೆಲ್ಲಾ ಬ್ರೇಕಪ್ ಅಂತ ಹೊರಟು ಹೋಗೋದು ಮಾಮೂಲಿ. ಅವನ ಹತ್ತುರ ಹಣ ಇದೆಯೋ, ಇಲ್ವೋ ಅಂತ ನೋಡದೇ ಚನ್ನಾಗಿ ಪೀಕುತ್ತಾರೆ. ಹುಡುಗರು ಹುಡುಗಿ ಮುಂದೆ ಹಣ ಇಲ್ಲ ಅಂತ ಹೇಳಿಕೊಂಡರೆ ಮರ್ಯಾದೆ ಹೋಗುತ್ತೆ ಅಂತ  ಅವರಿವರ ಹತ್ತಿರ, ಸ್ನೇಹಿತರ ಜೊತೆ ಸಾಲ ತಂದು ತಂದೆ ತಾಯಿಯರಿಗೆ ಸುಳ್ಳು ಹೇಳಿ ಹಣ ಸಿದ್ದಪಡಿಸಿ ಹುಡುಗಿಯರ ಮನಸ್ಸನ್ನ ಖುಷಿ ಪಡಿಸ್ತಾರೆ. ಆದ್ರೆ ಬ್ರೇಕಪ್ ಮಾಡಕೊಂಡು ಹೋಗೋರಿಗೆ ಚಿತ್ರದಲ್ಲಿ ಪಾಠ ಕಲಿಸುವ ತಂತ್ರವನ್ನು ನಿರ್ದೇಶಕರು ಚನ್ನಾಗಿ ಎಣೆದಿದ್ದಾರೆ.
ಚಿತ್ರ ಪ್ರಾರಂಭದಿಂದ ಕೊನೆಯವರೆಗೂ ನಗುವಿನ ಹಂದರದಲ್ಲಿ ಸಾಗುತ್ತದೆ.


ಈಗಾಗಲೇ ಅಮೃತಾಂಜನ್ ನಂತಹ ಕಾಮಿಡಿ ಕಥೆಗಳೊಂದಿಗೆ ಯೂಟ್ಯೂಬ್ ನಲ್ಲಿ ಜನಪ್ರಿಯವಾಗಿದ್ದ ಈ ತಂಡ ಮೊದಲ ಬಾರಿಗೆ ಬೆಳ್ಳಿತೆರೆಯ ಮೇಲೆ ರಾರಾಜಿಸಿದ್ದಾರೆ.
ಪ್ರೇಕ್ಷಕರು ಚಿತ್ರದ ಮೊದಲ ದೃಶ್ಯದಿಂದ ಕೊನೆಯವರೆಗೂ ನಗುತ್ತಲೇ ಇರುತ್ತಾನೆ ಜೊತೆಗೆ ಚಿತ್ರ ನೋಡಿ ಬರುವಾಗ ನಗುವಿನ ಜೊತೆಗೆ ಒಂದಷ್ಟು ಬದುಕಿನ ಪಾಠವನ್ನು ತೆಗೆದು ಕೊಂಡು ಹೋಗುತ್ತಾನೆ.
ನಿರ್ದೇಶಕ ಜ್ಯೋತಿ ರಾವ್ ಮೋಹಿತ್ ಪ್ರೇಕ್ಷಕರನ್ನು ನಗಿಸುತ್ತಲೇ ಕೊನೆಗೆ ಮಕ್ಕಳನ್ನು ಹೇಗೆ ಸಾಕಬೇಕು, ಅತಿಯಾದ ಐಶಾರಾಮಿ ಜೀವನದಿಂದ ಮಕ್ಕಳು ಹೇಗೆ ಹಾಳಾಗುತ್ತಾರೆ. ಎನ್ನುವುದನ್ನು ಸಮಾಜಕ್ಕೆ ತಿಳಿ ಹೇಳಿದ್ದಾರೆ.

ಜೀವನದಲ್ಲಿ ಸೋತವರೇ ಇತಿಹಾಸ ಸೃಷ್ಠಿಮಾಡಿರೋದು ಅನ್ನೋದು ಕಥೆಯ ಮೂಲ ತಾತ್ಪರ್ಯ

ಕಲಾವಿದರಾದ ಕಥಾನಾಯಕ ಕಾಲೇಜಿನಲ್ಲಿ ಓದುವಾಗ ಅಕಸ್ಮಾತ್ತಾಗಿ ಪರಿಚಯವಾಗುವ ನಾಯಕಿ ಉರಿ (ಪಾಯಲ್ ಚಂಗಪ್ಪ) ಯೊಂದಿಗೆ ಆಕಸ್ಮಿಕ ಪರಿಚಯವಾಗಿ, ಪರಿಚಯ ಪ್ರೀತಿಯಾಗಿ, ಅದು ಖಂಡಿಷನಲ್ ಲವ್, ಮೊದಲ ದಿನವೇ ನಾಯಕಿ ಹುಟ್ಟಿದ ದಿನಾಂಕ, ಹೆಸರು, ಆಧಾರ್ ಕಾರ್ಡ್ ನಂ ಎಲ್ಲಾ ತೆಗೆದುಕೊಂಡು ಪೇಪರ್ ಮೇಲೆ ಪ್ರೀತಿಗಾಗಿ ಅಗ್ರಿಮೆಂಟ್ಗೆ ಸಹಿ ಪಡೆದು ನಂತರ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಡುತ್ತಾಳೆ.
ಆದರೆ ಆ ಗ್ರೀನ್ ಸಿಗ್ನಲ್ ಅವನ ಪಾಲಿಗೆ ಏನೆಲ್ಲಾ ತೊಂದರೆಗಳನ್ನು ತಂದು ಕೊಡುತ್ತದೆ, ಪ್ರೇಯಸುಯ ಆಸೆಗಳನ್ನು ಈಡೇರಿಸಲು ಏನೆಲ್ಲಾ ಕಷ್ಟ ಪಡುತ್ತಾನೆ. ಸಣ್ಣ ಸಣ್ಣ ವಿಷಯಕ್ಕೂ ಮುನಿಸಿಕೊಂಡು ಉರಿದು ಬೀಳುವ  ನಾಯಕಿ ಉರಿಗೆ ಹೇಗೆ ಬುದ್ಧಿ ಕಲಿಸುತ್ತಾನೆ ಅನ್ನೋದೆ. ಅಮೃತಾಂಜನ್ ಚಿತ್ರ.
ಚಿತ್ರದಲ್ಲಿ ಸುಮಂತ್ ಆಚಾರ್ಯ ರವರ ಛಾಯಾಗ್ರಹಣ ಹಾಗೂ ರೋಹಿತ್ ಸೋವೆರ್ ರವರ ಸಂಗೀತ ಚನ್ನಾಗಿದೆ. ಕಿರಣ್ ಕುಮಾರ್ ಕಥೆಗೆ ಎಷ್ಟು ಬೇಕೋ ಅಷ್ಟು ಕತ್ತರಿ ಆಡಿಸಿ ಎಡಿಟ್ ಮಾಡಿದ್ದಾರೆ.
ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಇನ್ನು ನಾಯಕನ ಪಾತ್ರದಲ್ಲಿ ಅಭಿನಯಿಸಿರುವ ಸುಧಾಕರ್ ಗೌಡ ಹಾಗೂ ಪಾಯಲ್ ಚಂಗಪ್ಪ ಇಬ್ಬರು ಈ ಕಥೆಯನ್ನು ಹೆಗಲ ಮೇಲೆ ಹೊತ್ತಿ ನಡೆಸಿದ್ದಾರೆ.
ಸುಧಾಕರ್ ಗೌಡ ಹುಡುಗರಿಗೆ ಖುಷಿಕೊಡುವಂತ ಡೈಲಾಗ್ ಹೊಡೆದು ಹುಡುಗಿಯರಿಗೆ ಬುದ್ದಿ ಕಲಿಸುವ ಪಾತ್ರ ಚನ್ನಾಗಿ ನಿಭಾಯಿಸಿದ್ದಾರೆ.
ಪಾಯಲ್ ಚಂಗಪ್ಪ ಮುದ್ದು ಮುದ್ದಾಗಿ ಮಾತಾಡುತ್ತಾ ಎದೆಗೆ ಉರಿ ಹತ್ತಿಸುತ್ತಾ, ಮುದ್ದು ಬೊಂಬೆಯಂತೆ ಕಾಣಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ “ಸು ಫ್ರಮ್ ಸೋ” ಚಿತ್ರದ ನಂತರ ಫುಲ್ ಕಾಮಿಡಿ ಚಿತ್ರ ಇದಾಗಿದೆ. ಕೊಟ್ಟ ಹಣಕ್ಕೆ ಯಾವುದೇ ಮೋಸವಿಲ್ಲ ಎನ್ನಬಹುದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor