ಬ್ಯ್ರಾಟ್ ಚಿತ್ರ ವಿಮರ್ಶೆ. ಬ್ಯ್ರಾಟ್ ಚಿತ್ರ ಕ್ರಿಕೆಟ್ ಬೆಟ್ಟಿಂಗ್ ದಂಧೆಯೊಳಗೊಂದು ಚಾಲಾಕಿ ಪಯಣ

ಚಿತ್ರ ವಿಮರ್ಶೆ

ವಿಮರ್ಶೆ – ಮಂಜುರಾಜ್ ಸೂರ್ಯ
ಚಿತ್ರ – ಬ್ಯ್ರಾಟ್
ನಿರ್ಮಾಪಕರು – ಮಂಜುನಾಥ್ ಕಂಡಕೂರ್, ಬದ್ರಿನಾಥ್ ಕಂಡಕೂರ್
ನಿರ್ದೇಶನ –  ಶಶಾಂಕ್
ಛಾಯಾಗ್ರಹಣ –  ಅಭಿಲಾಷ್ ಕಲತಿ
ಸಂಗೀತ –   ಅರ್ಜುನ್ ಜನ್ಯ

ಕಲಾವಿದರು :- ಡಾರ್ಲಿಂಗ್ ಕೃಷ್ಣ, ಮನಿಷಾ ಕಂಡಕೂರ್, ಅಚ್ಯುತ್ ಕುಮಾರ್, ರಮೇಶ್ ಇಂದಿರಾ, ಮಾನಸಿ ಸುಧೀರ್, ಡ್ರ್ಯಾಗನ್ ಮಂಜು. ಮುಂತಾದವರು.
Rating – 3.5/5

ಬ್ರ್ಯಾಟ್’
ಈ ಚಿತ್ರ ಆ್ಯಕ್ಷನ್, ಥ್ರಿಲ್ಲರ್, ಸಸ್ಪೆನ್ಸ್, ಬೆಟ್ಟಿಂಗ್ ಪ್ರೇಮಕಥೆ.
ಕೃಷ್ಣ ಅಲಿಯಾಸ್ ಕ್ರಿಸ್ಟಿ (ಡಾರ್ಲಿಂಗ್ ಕೃಷ್ಣ) ಒಬ್ಬ ಡೆಲೆವರಿ ಬಾಯ್ ಆಗಿ ಕೆಲಸ ಮಾಡುತ್ತಿರುತ್ತಾನೆ.
ಬಾಲ್ಯದಲ್ಲೇ ಇಸ್ಪಿಟ್‌ ಆಡಿ ಹಣ ಮಾಡಿದ ಕಿಲಾಡಿ ಅಜ್ಜಿಯ ಚಾಲಾಕಿತನಕ್ಕೆ ಪ್ರೇರಿತನಾದ ಕೃಷ್ಣ ಬೆಟ್ಟಿಂಗ್‌ ಗೀಳಿಗೆ ಬೀಳುತ್ತಾನೆ. ಡೆಲಿವರಿ ಬಾಯ್‌ ಆಗಿ ಕಾರ್ಯ ನಿರ್ವಹಿಸು ತ್ತಿದ್ದವನು ಒಂದು ಘಟನೆಯಿಂದ ತಾನು ಶ್ರೀಮಂತನಾಗಬೇಕೆಂದು  ಬೆಟ್ಟಿಂಗ್‌ ಲೋಕಕ್ಕೆ ಕಾಲಿಡುವಂತೆ ಮಾಡುತ್ತದೆ.


ಬಡತನದಲ್ಲಿ ಹುಟ್ಡಿರುವ ಕೃಷ್ಣ ಅಲಿಯಾಸ್ ಕ್ರಿಸ್ಟಿ ಬಡವನಾಗಿ ಸಾಯಲು ಇಷ್ಟಪಡುವುದಿಲ್ಲ.
ಪ್ರಾಮಾಣಿಕ ಪೋಲೀಸ್ ಮಗನಾಗಿ ಪ್ರಾಮಾಣಿಕವಾಗಿ ಬದುಕಿದರೆ ಬಡವನಾಗೆ ಇರಬೇಕೆಂದು ಒಂದಷ್ಟು ಮೈಂಡ್ ಗೇಮ್ ಗಳೊಂದಿಗೆ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆಯಲ್ಲಿ ತನ್ನದೇ ಹವಾ ಸೃಷ್ಠಿಮಾಡುತ್ತಾನೆ.


ಇದೊಂದು ಹೊಸ ತರದ , ಹೊಸ ಶೈಲಿಯ ಚಿತ್ರವಾಗಿದೆ.
ನಿರ್ದೇಶಕ ಶಶಾಂಕ್ ಈಗಾಗಲೇ ಹಲವಾರು ಯಶಸ್ವಿ ಚಿತ್ರಗಳನ್ನು  ನೀಡಿ ಸೈ ಎನಿಸಿಕೊಂಡಿದ್ದಾರೆ.
ಕೃಷ್ಣ ಮತ್ತು ಶಶಾಂಕ್ ಈ ಇಬ್ಬರ ಕಾಂಬಿನೇಷನ್ ಈಗಾಗಲೇ ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾ ಬಂದಿದ್ದು ಒಂದಷ್ಟು ಜನ ಮೆಚ್ಚುಗೆಯನ್ನು ಪಡೆದಿತ್ತು.

ಬ್ರ್ಯಾಟ್ ಚಿತ್ರದ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಜಗತ್ತಿನ ಒಳಸುಳಿಗಳನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದಾರೆ.
ಇಂದಿನ ಯುವ ಜನತೆಯು ಬೆಟ್ಟಿಂಗ್ ನಿಂದಾಗಿ ಮೊಸ ಹೇಗೆ ಹೋಗುತ್ತಾರೆ, ಅದರ ಹಿಂದಿನ ಶಡ್ಯಂತ್ರಗಳೇನು, ಕಾನೂನಿನ ಚೌಕಟ್ಟಿನ ಕಣ್ಣಳತೆಯಲ್ಲೇ ಈ ಧಂದೆ ಹೇಗೆ ನಡೆಯುತ್ತದೆ ಎಂದು ಆಕ್ಷನ್ ಜೊತೆಗೆ ಹಾಸ್ಯಮಯವಾಗಿ   ಹೇಳುವ ಮೂಲಕ ಜನರನ್ನು ಎಚ್ಚರಿಸಿದ್ದಾರೆ.
ಶಶಾಂಕ್ ರವರ ಕಥೆಗಳೇ ಹಾಗೆ ಪ್ರೇಮವಾಗಲಿ, ಆಕ್ಷನ್ ಆಗಲಿ ವಿಭಿನ್ನವಾಗಿ ಹೇಳುತ್ತಾರೆ.

ಡಾರ್ಲಿಂಗ್ ಕೃಷ್ಣ ಪ್ರೀತಿ, ಪ್ರೇಮ ಪ್ರಣಯದ ಜೊತೆಗೆ ಸಖತ್ ಆಕ್ಷನ್ ಹೀರೋ ಆಗುವುದರೊಂದಿಗೆ ಮೈಂಡ್ ಗೇಮ್ ಪಾತ್ರವನ್ನು ಚನ್ನಾಗಿ ನಿಭಾಯಿಸಿದ್ದಾರೆ.
ಇನ್ನು ನಾಯಕಿಯಾಗಿ ಮನಿಶಾ ಕಂಡಕೂರ್ ಹೊಸ ಮುಖ ಒಬ್ಬ ಇನೋಸೆಂಟ್ ಹುಡುಗಿಯಾಗಿ ಒಂದು ಕಡೆ ಈ ಬೆಟ್ಟಿಂಗ್ ಧಂದೆಗೆ ಸಿಲುಕಿಕೊಳ್ಳುವ ಜೊತೆಗೆ ನಾಯಕನ ಪ್ರೀತಿಯಲ್ಲಿ ತೇಲುವ, ಹಾಗೂ ಆಗಾಗ  ಆತನ ನಡೆವಳಿಕೆಯನ್ನು ಖಂಡಿಸುವ ಪ್ರೇಮಿಯಾಗಿ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ.
ಈಕೆ ನಿರ್ಮಾಪಕರ ಮಗಳಾದರೂ ಕೂಡ ತಮ್ಮ ಅಭಿನಯವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಕನ್ನಡಕ್ಕೊಬ್ಬ ಮುದ್ದಾದ ನಾಯಕಿಯ ಆಗಮನವಾಗಿದೆ.

ಕಥಾನಾಯಕನ ತಂದೆಯಗಿ ಹಾಗೂ ಪ್ರಾಮಾಣಿಕ ಹೆಡ್ ಕಾನ್ಸ್ಟೇಬಲ್ (ಮಹಾದೇವಯ್ಯ) ಆಗಿ ಮತ್ತು ವ್ಯವಸ್ಥೆಯಲ್ಲಿ ನಡೆಯುವ ಕುತಂತ್ರ ಹಾಗೂ ಬೆಟ್ಟಿಂಗ್ ಅನ್ನು ನಿರ್ನಾಮ ಮಾಡಲು  ಮಗನ ವಿರುದ್ಧವೇ ನಿಂತು ಹೋರಾಡುವ ಪಾತ್ರಕ್ಕೆ ಜೀವ ತುಂಬಿದ್ದಾರೆ.
ನಿರ್ದೇಶಕ ಹಾಗೂ ನಟ ರಮೇಶ್ ಇಂದಿರಾ ಯಾವುದೇ ಪಾತ್ರವಾಗಲಿ ಅದರೊಳಗೆ ತಮ್ಮನ್ನು ತಾವು ಆವರಿಸಿಕೊಂಡು ಬಿಡುತ್ತಾರೆ. ಅಷ್ಟು ಲೀಲಾಜಾಲವಾಗಿ  ಅಭಿನಯಿಸುವ ನೈಜ ನಟ ಎನ್ನಬಹುದು ಒಬ್ಬ ಕರೆಪ್ಟೆಡ್ ಪೋಲೀಸ್ ಅಧಿಕಾರಿಯಾಗಿ ಒಮ್ಮೊಮ್ಮೆ, ಕಾಮಿಡಿಯಾಗಿ, ಒಮ್ಮೊಮ್ಮೆ ಸೀರಿಯಸ್ ನಟೋರಿಯಸ್ ಆಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಖಳ ನಟನಾಗಿ ಬೆಟ್ಟಿಂಗ್ ಕರಾಳ ಲೋಕದ ಭೂಗತ ದೊರೆಯಾಗಿ ಡ್ರಾಗನ್ ಮಂಜು ಭಯ ಹುಟ್ಟಿಸುವಂತೆ ಹಾಸ್ಯಾಸ್ಪದವಾಗಿ ಪ್ರೇಕ್ಷಕರನ್ನು ನಗಿಸುತ್ತಾರೆ.
ಹಾಗೂ ಮಾನಸಿ ಸುಧೀರ್ ಕೃಷ್ಣನ ತಾಯಿಯಾಗಿ ಮಗನಿಗೆ ಸಾಥ್ ನೀಡುವ ಪಾತ್ರವನ್ನು ನಿಭಾಯಿಸಿದ್ದಾರೆ.

ಮೊದಲ ಅರ್ಧದಲ್ಲಿ ಕಥೆ ವೇಗವಾಗಿ ಸಾಗುತ್ತದೆ.  ಉತ್ತಮವಾಗಿದೆ ಕೊನೆಯ ಹಂತದಲ್ಲಿ ಸಿಬಿಐ ಭಾಗವನ್ನು ಇನ್ನೂ ಚನ್ನಾಗಿ ಮಾಡಬಹುದಿತ್ತು, ಹಾಗೆಯೇ ಚಿತ್ರದ ಕ್ಲೈಮ್ಯಾಕ್ಸ್ ಇನ್ನೇನೋ ಬೇಕಿತ್ತು ಅನ್ನಿಸುತ್ತದೆ.

“ಗಂಗಿ ಗಂಗಿ” ಮತ್ತು “ನಾನೇ ನೀನಂತೆ” ಹಾಡುಗಳು ಚನ್ನಾಗಿವೆ ಹಾಗೂ ಹಾಡುಗಳು ಸಿನಿಮಾ ಬಿಡುಗಡೆಗೆ ಮುಂಚೆಯೇ ಜನಪ್ರಿಯ ಗೊಂಡಿದ್ದವು. ಅರ್ಜುನ್ ಜನ್ಯ ಸಂಗೀತ ಚಿತ್ರದ ಕಥೆಯ ಓಟಕ್ಕೆ ಸಾಥ್ ನೀಡಿದೆ. ಹಾಗೆಯೇ ಅಭಿಲಾಷ್ ಕಲತಿ ಛಾಯಾಗ್ರಹಣ ಸಿನಿಮಾಗೆ ಒಳ್ಳೆಯ ಅಚ್ಚುಕಟ್ಟಾದ, ಸುಂದರವಾದ ಫ್ರೇಮ್ ಒದಗಿಸಿದೆ ಎನ್ನಬಹುದು.

ನಿರ್ಮಾಪಕ ಮಂಜುನಾಥ್ ಕಡಕೂರ್ ಹಾಗೂ ಬದ್ರಿನಾಥ್ ಕಡಕೂರ್ ಒಂದು ಒಳ್ಳೆಯ ಚಿತ್ರವನ್ನು ನೀಡಿದ್ದಾರೆ. ಸಾಮಾಜಿಕವಾಗಿ ಬೆಟ್ಟಿಂಗ್ ನಲ್ಲಿ ಸಿಲುಕಿ ಆತ್ಮಹತ್ಯೆಗೆ ಸಿಲುಕುವ ಯುವ ಜನತೆಯನ್ನು ಎಚ್ಚರಿಸುವಂತ ಸಿನಿಮಾ ನೀಡಿದ್ದಾರೆ.

ಈ ಹಿಂದೆ ಇವರು “ಫಸ್ಟ್ ರಾಂಕ್ ರಾಜು” ಚಿತ್ರದಂತ ಯಶಸ್ವಿ ಚಿತ್ರವನ್ನು ನಿರ್ಮಾಣ ಮಾಡಿದ್ದರು.
ಒಟ್ಟಿನಲ್ಲಿ ಶಶಾಂಕ್ ನಿರ್ದೇಶನದಲ್ಲಿ ಒಂದು ಒಳ್ಳೆಯ ಚಿತ್ರ ತೆರೆಗೆ ಬಂದಿದೆ. ಶಶಾಂಕ್ ಎಂಥಹ ಕಲಾವಿದರಿಂದಲೂ ನಟನೆ ತೆಗಿಸಬಲ್ಲ ನಿಪುಣರು ಇಲ್ಲೂ ಕೂಡ ಡಾರ್ಲಿಂಗ್ ಕೃಷ್ಣರವರನ್ನು ಮಾಮೂಲಿ ಜಾನರ್ ನ ನಟನೆಯಿಂದ ಹೊರ ತಂದಿದ್ದಾರೆ.

ಕೃಷ್ಣ ಈ ಚಿತ್ರದಲ್ಲಿ ಸ್ವಲ್ಪ ವಿಭಿನ್ನವಾಗಿ ಕಾಣುತ್ತಾರೆ. ಪ್ರೇಕ್ಷಕ ಕೊಟ್ಟ ಹಣಕ್ಕೆ ಮೊಸವಿಲ್ಲ. ಪ್ರೇಕ್ಷಕ ಪ್ರಭುಗಳು ಕೈ ಹಿಡಿದರೆ ಈ ವರ್ಷದ ಯಶಸ್ವಿ ಸಾಲಿನಲ್ಲಿ ಬ್ಯ್ರಾಟ್ ಚಿತ್ರ ನಿಲ್ಲುತ್ತದೆ. ಚಿತ್ರ ತಂಡಕ್ಕೆ ಶುಭವಾಗಲಿ ಎಂಬುದು ನಮ್ಮ ಆಶಯ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor