ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಚಿತ್ರ ವಿಮರ್ಶೆ. ಪಕ್ಕಾ ಕಾಮಿಡಿ, ಲವ್ ಸೆಂಟಿಮೆಂಟ್, ಅಡ್ವೆಂಚರ್ ಎಂಟರ್ಟೈನ್ ಮೆಂಟ್ ಚಿತ್ರ.
ಚಿತ್ರ – ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ
ನಿರ್ಮಾಪಕರು – H.K. ಪ್ರಕಾಶ್
ನಿರ್ದೇಶನ – ಅಭಿಷೇಕ್ ಮಂಜುನಾಥ್
ಛಾಯಾಗ್ರಹಣ – ಅಭಿಷೇಕ್ ಕಾಸರಗೋಡ್
ಸಂಗೀತ – ಜ್ಯೂಡಾಸ್ಯಾಂಡಿ
ಸಂಕಲನ – ತೇಜಸ್ ಗೌಡ
Rating -3.5/5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು :- ದೀಕ್ಷಿತ್ ಶೆಟ್ಟಿ, ಬೃಂದಾ ಆಚಾರ್ಯ, ಗೋಪಾಲ್ ಕೃಷ್ಣ ದೇಶಪಾಂಡೆ, ಸಾಧುಕೋಕಿಲ, ಮುಂತಾದವರು
ಈ ವಾರ ತೆರೆ ಕಂಡ “ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ” ಇದೊಂದು ಕಾಮಿಡಿ ಕ್ರೈಂ ಥ್ರಿಲ್ಲರ್ ಚಿತ್ರ.
ಅದೊಂದು 6ಜನರ ಖದಿಮ ಕಾಮಿಡಿ ಚಿಕ್ಕ ಕಳ್ಳರ ಗುಂಪು, ಅದರ ನಾಯಕ ಟೈಗರ್ (ದೀಕ್ಷಿತ್ ಶೆಟ್ಟಿ) ಅವನೊಂದಿಗೆ 5 ಜನರ ಗುಂಪು
ಆ ಏರಿಯಾಗೆ ಬಂದ ಹೊಸ ಪೊಲೀಸ್ ಇನ್ಸ್ಪೆಕ್ಟರ್ (ಸಾಧುಕೋಕಿಲ) ಏರಿಯಾದ ಎಲ್ಲಾ ಕಳ್ಳರನ್ನು ಕರೆದು ವಿಚಾರಣೆ ಮಾಡುತ್ತಾರೆ. ಅದರ ಎಲೆಕ್ಷನ್ ಸಮಯ ಅದಕ್ಕಾಗಿ ಎಲ್ಲರಿಗೂ ಲಾಠಿ ರುಚಿ ತೋರಿಸಿ ವಾರ್ನಿಂಗ್ ಕೊಟ್ಟು ಕಳಿಸುತ್ತಾರೆ.
ಈ ಟೈಗರ್ ಗ್ಯಾಂಗ್ ಎಲ್ಲವನ್ನು ಕಾಮಿಡಿ ಮಾಡಿಕೊಂಡೆ ನಿಮಗೆ ಸಸ್ಪೆಂಡ್ ಮಾಡೋ ಹಾಗೆ ಏನಾದರು ದೊಡ್ಡ ಕಳ್ಳತನ ಮಾಡ್ತೀವಿ ಅಂತ ಚಾಲೆಂಜ್ ಮಾಡಿ
ಏನಾದರು ದೊಡ್ಡದ್ದುಮಾಡುವ ಸಲುವಾಗಿ ಬ್ಯಾಂಕ್ ದರೋಡೆಗೆ ಸ್ಕೆಚ್ ಹಾಕುತ್ತಾರೆ.
ಭಾಗ್ಯಲಕ್ಷ್ಮೀ ಎನ್ನುವ ಕೋಆಪರೇಟಿವ್ ಬ್ಯಾಂಕ್ ಗೆ ಐದು ಮಂದಿ ದರೋಡೆಕೋರರು ನುಗ್ಗುತ್ತಾರೆ.

ಆಗಾಗ ಕೆಲಸ ಮಾಡುವ ಗನ್ ತೋರಿಸಿ ಎಲ್ಲರನ್ನು ಹೆದರಿಸಿ,
ಒಳಗಡೆ ಇರುವ ಸಿಬ್ಬಂದಿ ಮತ್ತು ಗ್ರಾಹಕರ ಸಮೇತವಾಗಿ ಶಟರ್ ಹಾಕಿ ಕ್ಲೋಸ್ ಮಾಡುತ್ತಾರೆ.
ಆದರೆ ಶಟರ್ ಸರಿ ಇಲ್ಲದ ಕಾರಣ ಹೊರಗಿನಿಂದ ಲಾಕ್ ಆಗುತ್ತದೆ.
ಎಲ್ಲರೂ ಒಳಗಡೆಯೇ ಸಿಕ್ಕಿ ಬೀಳುತ್ತಾರೆ.
ಬ್ಯಾಂಕಿನಲ್ಲಿ ಸಿಗುವುದು ಚಿಲ್ಲರೆ ದುಡ್ಡು
ಆದರೆ ಅದರ ಹಿಂದೆ ಒಂದು ಎಲೆಕ್ಷನ್ ದುಡ್ಡು ಅಡಗಿರುತ್ತದೆ. ಅದನ್ನು ಹಿರಗೆ ತೆಗೆದು ಹೊರಗಿನ ಪೋಲೀಸ್ ಕಣ್ತಪ್ಪಿಸಿ ಕದಿಯುವುದೇ ದೊಡ್ಡ ಸವಾಲು.
ಇಲ್ಲಿ ನಿರ್ದೇಶಕರ ಜಾಣ್ಮೆ ಮೆಚ್ಚಲೇಬೇಕು. ಏಕೆಂದರೆ
ಕಳ್ಳ ರಾಜಕರಣಿಗಳ ಹಣ ಹೇಗೆ ಬ್ಯಾಂಕುಗಳಲ್ಲಿ ಮುಚ್ಚಿಟ್ಟಿರುತ್ತಾರೆ ಅನ್ನುವುದನ್ನು ಬಹಳ ಚನ್ನಾಗಿ ಜನರ ಮುಂದಿಟ್ಟುದ್ದಾರೆ. ಜೊತೆಗೆ ಕದಿಯಲು ಬಂದ ಹುಡುಗರು ಹೇಗೆ ಅವರ ಮನ ಪರಿವರ್ತನೆಯಾಗಿ ಕೊನೆಯಲ್ಲಿ ಆ ಹಣದಿಂದ ಬಡವರಿಗೆ ಸಹಕಾರಿಯಾಗುವಲ್ಲಿ ಯೋಚಿಸುತ್ತಾರೆ ಎಂಬುದನ್ನು ಬಹಳ ನಾಜೂಕಾಗಿ ಬಿಂಬಿಸಿದ್ದಾರೆ.

ಚಿತ್ರ ಬಹುತೇಕ ಬ್ಯಾಂಕಿನ ಒಳಗೆ ನಡೆಯುತ್ತದೆ. ದರೋಡೆ ಕೋರರು ಒಳಗಿದ್ದರೆ, ಹೊರಗೆ ಫೋಲೀಸ್ ಮತ್ತು ಮಿಲಿಟರಿ ಪಡೆ ಕಾರ್ಯಕ್ಕಿಳಿಯುತ್ತದೆ.
ಆ ಹಣ ಇಟ್ಟ ರಾಜಕರಣಿಗಳು ಅದನ್ನು ಉಳಿಸಿಕೊಳ್ಳಲು ಹೇಗೆ ಕಾರ್ಯತಂತ್ರ ರೂಪಿಸುತ್ತಾರೆ ಎನ್ನುವುದು ಬಹಳ ರೋಮಾಂಚನವಾಗಿದೆ. ಈ ರಾಜಕರಣಿಗಳ ತಂಡದ ತಂತ್ರಗಾರಿಕೆಯ ಮುಖ್ಯಸ್ಥಳಾಗಿ ಶೃತಿ ಹರಿಹರನ್ ಪಾತ್ರ ನಿಭಾಯಿಸಿದ್ದಾರೆ.
ಬ್ಯಾಂಕ್ ಒಳಗೆಯೇ ಬ್ಯಾಂಕ್ ಉದ್ಯೋಗಿಯಾಗಿ ಬೃಂದಾ ಆಚಾರ್ಯ ಕಥಾನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರವನ್ನು ನಿರ್ದೇಶಕರು ಚನ್ನಾಗಿ ಸೃಷ್ಟಿಸಿದ್ದಾರೆ. ಹಾಗೂ ಆ ಪಾತ್ರಕ್ಕೆ ಬಹಳ ಪ್ರಾಮುಖ್ಯತೆಯನ್ನು ಕೂಡ ನೀಡಿದ್ದಾರೆ. ಚಿತ್ರದ ದ್ವಿತೀಯಾರ್ಧದಲ್ಲಿ ಕಥೆ ಬೇರೆಯದೇ ಟ್ವಿಸ್ಟ್ ತೆಗೆದುಕೊಳ್ಳುವುದೇ ನಾಯಕಿಯಿಂದ.
ಅಸಾಹಯಕ ಅಬಲೆಯಾಗಿ, ಬದುಕಿನ ಅರ್ಥದ ಕಣ್ತೆರೆಸುವ, ದರೋಡೆಕೋರರ ನಾಯಕನಲ್ಲಿ ಪ್ರೀತಿ ಅರಳಿಸುವ ಹಾಗೂ ಅವನ ಮನ ಪರಿವರ್ತನೆ ಮಾಡುವಲ್ಲಿ ಬೃಂದಾ ಯಶಸ್ವಿಯಾಗಿದ್ದಾರೆ.

ಬ್ಯಾಂಕ್ ಒಳಗಿನಿಂದಲೇ ಒಂದು ಅರ್ಥಪೂರ್ಣ ಹಾಡಿಗೆ ಜೀವ ನೀಡಲಾಗಿದೆ. ಈ ಹಾಡು ಎಲ್ಲರ ಕಣ್ತೆರೆಸುವಂತ ಅತ್ಯುತ್ತಮ ಗೀತೆ ಎನ್ನಬಹುದು. ಈ ಗೀತೆಗೆ ಪಾತ್ರದಾರಿಯಾಗಿ ಜಾನಪದ ಶೈಲಿಯಲ್ಲಿ ಉಷಾ ಭಂಡಾರಿಯವರು ಜೀವ ತುಂಬಿದ್ದಾರೆ.
ಹಾಗೂ ಬ್ಯಾಂಕ್ ನಲ್ಲಿ ಕದಿಯಲು ಬಂದವನಿಗೆ ಬೃಂದಾ ಆಚಾರ್ಯಳ ಮೇಲೆ ಪ್ರೇಮಾಂಕುರವಾಗಿ ಅಲ್ಲೊಂದು ಕನಸಿನ ಪ್ರೇಮ ಗೀತೆಯನ್ನು ನೋಡಬಹುದು.
ಬ್ಯಾಂಕಿನ ಹೊರಗೆ ಪತ್ರಕರ್ತನಾಗಿ
ಕೇಶವಾದಿತ್ಯನ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಪತ್ರಕರ್ತರ ಪರ ಧ್ವನಿಯಾಗಿದ್ದಾರೆ.
ತಿಪ್ಪೇಸ್ವಾಮಿಯಾಗಿ ವಿಜಯ್ ಚೆಂಡೂರ್ ನಗಿಸುತ್ತಾರೆ.
ಇಡೀ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಇನ್ಸ್ಪೆಕ್ಟರ್ ಅಜಿತ್ ಪಾತ್ರಧಾರಿ ಕೂಡ ಚಿತ್ರದ ಭಾಗವಾಗಿದ್ದಾರೆ.
ಜುಡಾ ಸ್ಯಾಂಡಿ ಸಂಗೀತದಲ್ಲಿ ಮೂಡಿರುವ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಚಿತ್ರಕ್ಜೆ ಸಾಥ್ ನೀಡಿದೆ.
ಅಭಿಷೇಕ್ ಕಾಸರಗೋಡು ಛಾಯಾಗ್ರಹಣವನ್ನು ಮೆಚ್ಚಲೇಬೇಕು.
ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿನ ಗ್ರಾಫಿಕ್ಸ್ ಎಫೆಕ್ಟ್ ಮತ್ತು ಅದರ ಪರಿಕಲ್ಪನೆ ಅದ್ಬುತ ಎನ್ನಬಹುದು.
ನಿರ್ಮಾಪಕರಾದ H.K. ಪ್ರಕಾಶ್ ಈಗಾಗಲೇ ರಂಗಿತ ರಂಗ, ಅವನೇ ಶ್ರೀಮನ್ನಾರಾಯಣ, ಕಥಾಸಂಗಮ, ಸ್ಪೂಕಿ ಕಾಲೇಜ್ ನಂತಹ ಚಿತ್ರಗಳನ್ನು ಕನ್ನಡದ ಪ್ರೇಕ್ಷಕರಿಗೆ ನೀಡಿದವರು. ಈಗ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿಯನ್ನು ತೆರೆಯ ಮೇಲೆ ಮೂಡಿಸಲು ಹಣ ಹರಿಸಿದ್ದಾರೆ.ಭಾಗ್ಯಲಕ್ಷ್ಮಿ ಅವರಿಗೂ ಹಣ ಹರಿದು ಬರುವಂತೆ ಮಾಡಲಿ ಎಂಬುದು ನಮ್ಮ ಆಶಯ.
ಒಟ್ಟಿನಲ್ಲಿ ಒಂದೊಳ್ಳೆಯ ಅಡ್ವೆಂಚರ್ ಹಾಗೂ ಮಾನವೀಯತೆಯ ಸೆಲೆಯಲ್ಲಿ ಸಂದೇಶದ ಜೊತೆಗೆ ನಗುವಿನ ಕಚಗುಳಿ ಜೊತೆಗೆ ಮನೋರಂಜನೆಯ ಚಿತ್ರ ಬ್ಯಾಂಕ್ ಆಫ್ ಭಾಗ್ಯ ಲಕ್ಷ್ಮಿಯನ್ನು ನೋಡಬಹುದು.











