ಫಸ್ಟ್ ಸ್ಯಾಲರಿ ಕಿರು ಚಿತ್ರದ ಅನಾವರಣ

ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಪ್ರಚಾರಕರ್ತರ ಹುದ್ದೆಯನ್ನು ಹುಟ್ಟುಹಾಕಿ, ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ಹುಟ್ಟುಹಾಕಿ, ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸಿದಂತಹ ಶ್ರೀಯುತ ಸುಧೀಂದ್ರ ಚಿತ್ರ ರಂಗದ ಘತ ವೈಭವಕ್ಕೆ ಸಾಕ್ಷಿಯಾಗಿದ್ದಾರೆ. ಅವರು ಗತಿಸಿದ ನಂತರ ಅವರ ಮಕ್ಕಳಾದ ಸುನೀಲ್ ಸುಧೀಂದ್ರ, ವೆಂಕಟೇಶ್, ವಾಸುದೇವ್ ಈ ಮೂವರು ಈ ಸಂಸ್ಥೆಯನ್ನು ಡಿ.ವಿ. ಸುಧೀಂದ್ರ ರವರ ಹೆಸರಿಗೆ ಚ್ಯುತಿ ಬಾರದಂತೆ ನಡೆಸಿಕೊಂಡು ಬರುತಿದ್ದಾರೆ.
ಈಗ ಮೂರನೇ ತಲೆಮಾರು ವೆಂಕಟೇಶ್ ರವರ ಮಗ ಪವನ್ ವೆಂಕಟೇಶ್ ಈ ಸಂಸ್ಥೆಯಲ್ಲಿ ಕೆಲಸ ಮಾಡಲು ಶುರು ಮಾಡಿದ್ದಾನೆ.


ಹಾಗೆ ಸಿನಿಮಾದಲ್ಲಿ ಆಸಕ್ತಿ ಹೊಂದಿರುವ ಪವನ್ ಮೊದಲ ಬಾರಿಗೆ  ಕಿರುಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದು “ಫಸ್ಟ್ ಸ್ಯಾಲರಿ” ಕಿರುಚಿತ್ರವನ್ನು ನಿರ್ದೇಶನ ಮಾಡಲಾಗಿದ್ದು. ಇತ್ತೀಚೆಗೆ ಅದರ ಅನಾವರಣ ಕಾರ್ಯ ನಡೆಯಿತು.
ಈಗಾಗಲೇ ಡಿ.ವಿ. ಸುಧೀಂದ್ರರವರು ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಮೂಲಕ ಸುಮಾರು 6 ಚಿತ್ರಗಳನ್ನು ಪಾಲುದಾರಿಕೆಯಲ್ಲಿ ನಿರ್ಮಾಣ ಮಾಡಿದ್ದಾರೆ.


ಈಗ  ವೆಂಕಟೇಶ್ ಹಾಗೂ ಸುನೀಲ್ ರವರು ಇದೇ ಬ್ಯಾನರ್ ನಲ್ಲಿ “ಫಸ್ಟ್ ಸ್ಯಾಲರಿ” ಕಿರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ವೇದಿಕೆಯಲ್ಲಿ ಮಾತಾಡಿದ ಪವನ್ ವೆಂಕಟೇಶ್ ಇದು ವಿಜಯ್ ಶಿವಕುಮಾರ್ ಬರೆದ ಕಥೆ. ನಮ್ಮಪ್ಪನಿಗೆ ಹೇಳಿದೆ ಅದಕ್ಕೆ ಅವರು ನಾನು ಏನು ಮಾಡ್ಬೇಕು ಅಂದ್ರು ನಾನು ದುಡ್ಡು ಬೇಕು ಎಂದೆ ಸರಿ ಅಂತ ಹಣ ನೀಡಿದರು ಹಾಗಾಗಿ ಈ ಕಿರುಚಿತ್ರ ನಿರ್ಮಾಣ ಆಯ್ತು. ಎಂದರು.

ಈ ಫಸ್ಟ್ ಸ್ಯಾಲರಿ ಕಿರು ಚಿತ್ರಕ್ಕೆ ಹರಿಣಿ ಶ್ರೀಕಾಂತ್, ಯತಿರಾಜ್, ತ್ರಿಶೂಲ್, ಸ್ನೇಹಶ್ರೀ, ರಕ್ಷಿತ್ ನಟಿಸಿದ್ದಾರೆ. ವಿಜಯ್ ಹರಿತ್ಸ ಸಂಗೀತ ನೀಡಿದ್ದಾರೆ. ಹಾಗೂ

ರಿಚರ್ಡ್ ಡ್ಯಾನಿಯಲ್ ಛಾಯಾಗ್ರಹಣ ಹಾಗೂ ಸಂಕಲನ ಮಾಡಿದ್ದಾರೆ. ಮನೋಜ್ ಕುಮಾರ್ ಮತ್ತು ರವಿ ಸಾಸನೂರು ಸಹ ನಿರ್ದೇಶಕರಾಗಿ ಸಾಥ್ ನೀಡಿದ್ದಾರೆ.

ಈ ಚಿತ್ರ ತಾಯಿ ಮಗನ ಭಾಂದವ್ಯದಿಂದ ಕೂಡಿದ್ದು, ಮನೆಗೆ ಮಗನ ಜವಾಬ್ಧಾರಿ ಏನೆಂಬುದಕ್ಕೆ ಈ ಕಿರುಚಿತ್ರ ಸಾಕ್ಷಿಯಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಕೆಲಸ ಮಾಡುತ್ತಿರುವ ವಿಜಯ್ ಕುಮಾರ್ ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ಅಭಿನಯಿಸುವುದರ ಜೊತೆಗೆ ಈ ಕಿರು ಚಿತ್ರಕ್ಕೆ ಕಥೆಯನ್ನು ಬರೆದಿದ್ದಾನೆ.

ತಾನು ಕಣ್ಣಾರೆ ಕಂಡ ಅನೇಕ ಸನ್ನಿವೇಶಗಳಿಂದ ಸ್ಪೂರ್ತಿಗೊಂಡು ಈ ಕಥೆ ಬರೆದೆ, ಈ ಕಥೆ ಕೇಳಿದ ಪವನ್ ಕಥೆ ಚೆನ್ನಾಗಿದೆ ನಾನೇ ನಿರ್ದೇಶನ ಮಾಡುತ್ತೇನೆ ಎಂದರು. ಸುಧೀಂದ್ರ ವೆಂಕಟೇಶ್ ಅವರು ನಿರ್ಮಾಣ ಮಾಡಿದರು. ನಮ್ಮ ಈ ಮೊದಲ ಪ್ರಯತ್ನಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು. ನಟ, ಕಥೆಗಾರ ವಿಜಯ್ ಕುಮಾರ್.


ಇದೊಂದು ಒಳ್ಳೆಯ ಸಂದೇಶ ಇರುವಂತ ಕಥೆಯಾಗಿದ್ದು, ಕಥೆಯಲ್ಲಿ ಗಟ್ಟಿತನವಿದೆ. ಕಿರು ಚಿತ್ರವನ್ನು ನೋಡಿದವರಿಗೆ ಕಣ್ಟಂಚಿನಲ್ಲಿ ನೀರು ಬರುವುದರಲ್ಲಿ ಎರಡು ಮಾತಿಲ್ಲ.
ನಟಿ ಹರಿಣಿ ತಾಯಿಯ ಪಾತ್ರದಲ್ಲಿ ಪ್ರೇಕ್ಷಕರ ಮನಸ್ಸಿಗೆ ಇಷ್ಟವಾಗುವಂತ, ಹೃದಯ ತಟ್ಠುವಂತೆ ಅಭಿನಯಿಸಿದ್ದಾರೆ.
ಪತ್ರಕರ್ತ, ನಟ, ನಿರ್ದೇಶಕ ಯತಿರಾಜ್ ಕೂಡ ಚಿತ್ರದಲ್ಲಿ ವೈದ್ಯನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಹೊಸಬರ ತಂಡಕ್ಕೆ ಸಾಥ್ ನೀಡಿದ್ದಾರೆ.
ಸುಧೀಂದ್ರ ವೆಂಕಟೇಶ್ ಈ ಕಿರುಚಿತ್ರಕ್ಕೆ ಹಣ ಹಾಕುವುದರ ಮೂಲಕ ಮೊದಲ ಬಾರಿಗೆ ನಿರ್ಮಾಪಕನ ಸ್ಥಾನವನ್ನು ಅಲಂಕರಿಸಿದ್ದಾರೆ.

ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧಕರಾದ ಶ್ರೀ ಕಮಲಾಕರ್ ಗುರುಗಳ ದಿವ್ಯ ಸಾನಿಧ್ಯದಲ್ಲಿ ಹಿರಿಯ ನಟಿ ಶೃತಿ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ರವರ ಸಹಯೋಗದಲ್ಲಿ ಈ ಕಿರುಚಿತ್ರ ಅನಾವರಣಗೊಂಡಿತು. ಚಿತ್ರ ನೋಡಿದ ನಂತರ ಮಾತಾಡಿದ  ಗುರುಗಳಾದ ಕಮಲಾಕರ್ ರವರು ಶುಭವನ್ನು ಹಾರೈಸಿದರು.
ನಂತರ ಶೃತಿರವರು ಕೂಡ ರಾಘವೇಂದ್ರ ಚಿತ್ರವಾಣಿಯ ಸಂಸ್ಥಾಪಕರಾದ ಶ್ರೀ ಸುಧೀಂದ್ರ ರವರನ್ನು ನೆನಪಿಸಿ ಕೊಂಡರು. ಹಾಗೆ ಇದು ಮೂರನೇ ತಲಮಾರಿನ  ಈ ಕಾರ್ಯಕ್ಕೆ ಶುಭಕೋರಿ ಬೆನ್ತಟ್ಟಿದರು.


ನಂತರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ರವರು ಸುಧೀಂದ್ರ ರವರ ಅಂದಿನ ಕಾಲದ ಕಾರ್ಯವೈಕರಿಯನ್ನು ನೆನಪಿಸುವ ಜೊತೆಗೆ ವೆಂಕಟೇಶ್ ರವರ ಪಿಆರ್.ಓ. ಕೆಲಸದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುವುದರ ಮೂಲಕ ಪವನ್ ವೆಂಕಟೇಶ್ ಹಾಗೂ ಕಿರು ಚಿತ್ರ ತಂಡಕ್ಕೆ ಶುಭಕೋರಿದರು. ಚಿತ್ರ ರಂಗದಲ್ಲಿ ತಾಳ್ಮೆ ಮುಖ್ಯ ಪ್ರತೀಯೊಬ್ಬರು ತಾಳ್ಮೆಯಿಂದ ಮುನ್ನೆಡೆಯಿರಿ ಒಳ್ಳೆ ಸಮಯ ಬರುತ್ತದೆ ಎಂದು ಎಲ್ಲಾ ಚಿತ್ರರಂಗದ ಎಲ್ಲಾ ನಿರ್ದೇಶಕರಿಗೆ ಕಿವಿ ಮಾತು ಹೇಳಿದರು.
ನಂತರ ಪವನ್ ವೆಂಕಟೇಶ್ ಕಿರು ಚಿತ್ರವನ್ನು ಮೆಚ್ಚಿ ಗೌರವ ಧನವನ್ನು ನೀಡಿ ಪ್ರೋತ್ಸಾಹ ನೀಡಿದರು.


ಪಿ.ಆರ್.ಓ. ಸುಧೀಂದ್ರ ವೆಂಕಟೇಶ್ ಮಾತಾಡಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ನಂತರ ಅವರ ಚಿಕ್ಕಪ್ಪನವರು ಸಿನಿಮಾ ನಿರ್ಮಾಣ ಮಾಡಿದ್ದನ್ನು ಸ್ಮರಿಸಿಕೊಂಡರು. ಮಗ ಒಂದು ಕಿರು ಚಿತ್ರ ಮಾಡುತ್ತೇನೆ ಎಂದಾಗ ಒಪ್ಪಿ ಹಣ ನೀಡಿದೆ ಇವತ್ತು ಚಿತ್ರ ತೆರೆ ಮೇಲೆ ಬಂದಿದೆ. ಚಿತ್ರ ನೋಡಿದವರಿಗೆ ಕಣ್ಣಲ್ಲಿ ನೀರು ಬರುತ್ತೆ ಎಂದು ಖುಷಿಯಿಂದ ಚಿತ್ರ ತಂಡವನ್ನು ಶ್ಲಾಘಿಸಿದರು.

ಕಿರುಚಿತ್ರದಲ್ಲಿ ನಟಿಸಿರುವ ಹರಿಣಿ ಶ್ರೀಕಾಂತ್, ಯತಿರಾಜ್, ತ್ರಿಶೂಲ್ ಸಹ ನಿರ್ದೇಶಕರಾದ ಮನೋಜ್ ಕುಮಾರ್, ರವಿ ಸಾಸನೂರ್ ಹಾಗೂ ಸಂಗೀತ ನಿರ್ದೇಶಕ ವಿಜಯ್ ಹರಿತ್ಸ ಮುಂತಾದವರು “ಫಸ್ಟ್ ಸ್ಯಾಲರಿ” ಬಗ್ಗೆ ಮಾತನಾಡಿದರು. ನಿರ್ಮಾಪಕ ಸುರೇಶ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಒಟ್ಟಿನಲ್ಲಿ “ಫಸ್ಟ್ ಸ್ಯಾಲರಿ” ಚಿತ್ರ ತಂಡ ಒಂದು ಒಳ್ಳೆಯ ಪ್ರಯತ್ನ ಮಾಡಿದೆ. ಈ ಸಂಸ್ಥೆಯಿಂದ ಇನ್ನೂ ಒಳ್ಳೆಯ ಚಿತ್ರಗಳು ಹೊರ ಬರಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor