ಪುನೀತ್ ನಿರ್ದೇಶನದ 2ನೇಚಿತ್ರ “ಜಾನ್” ಶೂಟಿಂಗ್ ಪ್ರಾರಂಭ..

ಟೀಸರ್ ನಲ್ಲಿ ಚಿತ್ರದ ಝಲಕ್ !

‌ ನಿರ್ದೇಶಕ ಪುನೀತ್ ಅರಸೀಕೆರೆ ಇದೀಗ ಸದ್ದಿಲ್ಲದೆ ಮತ್ತೊಂದು ಚಿತ್ರವನ್ನು ಪ್ರಾರಂಭಿಸಿದ್ದಾರೆ. ಮಿಸ್ಟ್ರಿ ಥ್ರಿಲ್ಲರ್ ಕಥಾಹಂದರ ಒಳಗೊಂಡ ಆ ಚಿತ್ರದ ಹೆಸರು ಜಾನ್. ಯುವ ಪವರ್ ಪಿಚ್ಚರ್ ಬ್ಯಾನರ್ ನ ಎರಡನೇ ಚಿತ್ರ ಇದಾಗಿದ್ದು, ಇತ್ತೀಚೆಗಷ್ಟೇ ಜಾನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಒಂದು ಮಗು, ಲೇಡಿ ಪೊಲೀಸ್ ಅಧಿಕಾರಿ, ಒಬ್ಬ ಸೈಕೋ ಇಟ್ಟುಕೊಂಡು ನಿರ್ದೇಶಕ ಪುನೀತ್ ಅವರು ಒಂದು ಮಿಸ್ಸಿಂಗ್ ಕೇಸ್ ಕಥೆಯನ್ನು ಹೇಳಹೊರಟಿದ್ದಾರೆಂಬುದು ಇದರಲ್ಲಿ ಕಾಣುತ್ತದೆ.


ಪುನೀತ್ ರ ಮೊದಲ ಚಿತ್ರ ಅಮರಾವತಿ ಪೊಲೀಸ್ ಸ್ಟೇಷನ್ ಚಿತ್ರೀಕರಣ ಮುಗಿದಿದ್ದು, ಚಿತ್ರವೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಮಾರ್ಚ್ ತಿಂಗಳಲ್ಲಿ ಚಿತ್ರವನ್ನು ತೆರೆಕಾಣಿಸುವ ಪ್ರಯತ್ನ ನಡೀತಿದೆ.
ಈ ನಡುವೆಯೇ ಯುವ ಪವರ್ ಪಿಚ್ಚರ್ ಬ್ಯಾನರ್ ಅಡಿಯಲ್ಲಿ ಜಾನ್ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲಾಗಿದೆ. ಈ ಚಿತ್ರದಲ್ಲಿ ಧರ್ಮ ಕೀರ್ತಿರಾಜ್, ಸೌಜನ್ಯ ಧರ್ಮ ಪ್ರಣಮ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಉಳಿದಂತೆ ಹಲವಾರು ಕಲಾವಿದರು ಅಭಿನಯಿಸುತ್ತಿದ್ದಾರೆ. ವೆಂಕಿ ಯುವಿಡಿ ಅವರ ಸಂಕಲನ, ಆರ್ಯ ಅವರ ಸಂಭಾಷಣೆ ಈ ಚಿತ್ರಕ್ಕಿರಲಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor