ನಿರ್ಮಾಪಕ, ಹಂಚಿಕೆದಾರ, ಸಾಹಿತಿ ಹಾಗೂ ಉದ್ಯಮಿ B.K. ಶ್ರೀನಿವಾಸ ರವರಿಗೆ ಇಂದು ಜನ್ಮ ದಿನದ ಸಂಭ್ರಮ.

ನಿರ್ಮಾಪಕ, ಹಂಚಿಕೆದಾರ, ಸಾಹಿತಿ ಹಾಗೂ ಉದ್ಯಮಿ B.K. ಶ್ರೀನಿವಾಸ ರವರಿಗೆ ಇಂದು ಜನ್ಮ ದಿನದ ಸಂಭ್ರಮ.

ಮಂದಾಕಿನಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕನಾಗಿ ಎಂಟ್ರಿ ಕೊಟ್ಟ ಬಿ.ಕೆ. ಶ್ರೀನಿವಾಸ ರವರು ನಂತರದ ದಿನಗಳಲ್ಲಿ ಹೊಸಬರಿಗೆ ಅವಕಾಶಗಳನ್ನು ನೀಡಿ ಅಲೆಮಾರಿ ಚಿತ್ರದ ಮೂಲಕ ಹರಿ ಸಂತು ಅಥವಾ ಅಲೆಮಾರಿ ಸಂತು ಎಂಬ ನಿರ್ದೇಶಕನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಹೆಗ್ಗಳಿಕೆ ಇವರದ್ದು.


ಕನ್ನಡ ಹೋರಾಟಗಾರ ಡಾ,, ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಸಾರಾ ಗೋವಿಂದು ರವರ ಮಗನನ್ನು ಸಿನಿಮಾಲೋಕಕ್ಕೆ “ಡವ್” ಚಿತ್ರದ ಮೂಲಕ ಪರಿಚಯಿಸಿದ್ದು ಇವರೆ.
ಹಿರಿಯ ಸಾಹಿತಿ, ಬರಹಗಾರ, ನಿರ್ದೇಶಕ ಬರಗೂರು ರಾಮಚಂದ್ರಪ್ಪನವರ ನಿರ್ದೇಶನದಲ್ಲಿ ಭಾಗೀರತಿ, ಅಂಗುಲಿ ಮಾಲ ಚಿತ್ರದ ನಿರ್ಮಾಪಕರಾಗಿ ಹೀಗೆ ಹತ್ತು ಹಲವಾರು ಸಾಮಾಜಿಕ ಕಳಕಳಿಯಿರುವ, ನೇರ ನುಡಿಯ, ಅಂದು ಕೊಂಡಿದ್ದನ್ನು ಸಾಧಿಸುವ ಛಲಗಾರ ರಾದ ಶ್ರೀನಿವಾಸ ಸಾಹಿತಿಯಾಗಿ “ಬೆಂಕೋಶ್ರೀ”  ಎಂದು ಗುರುತಿಸಿಕೊಂಡಿದ್ದಾರೆ.

ಹಾಗೆಯೇ ಅಂಕಣಕಾರರಾಗಿ ಪತ್ರಿಕೆಯಲ್ಲಿ ತಮ್ಮ ಅಕ್ಷರ ಕೃಷಿಯನ್ನು ಮಾಡಿದ ಹೆಗ್ಗಳಿಕೆ ಇವರದ್ದು.
ತುಂಬಾ ಕಡು ಬಡತನದಿಂದ ಬಂದ ಇವರು ಇಂದು ಅನೇಕರ ಬದುಕಿಗೆ ಸ್ಪೂರ್ತಿಯಾಗಿ, ಕೊಡುಗೈ ದಾನಿಯಾಗಿ, ದಾರಿ ದೀಪವಾಗಿದ್ದಾರೆ.


ಇಂತಹ ಸಹೃದಯಿ ಬೆಂಕೋಶ್ರೀಯವರಿಗೆ ಜನ್ಮದಿನದ ಶುಭಾಶಯಗಳು .
ದೇವರು ಇವರಿಗೆ ಆಯಸ್ಸು, ಆರೋಗ್ಯ, ಐಶ್ವರ್ಯವನ್ನು ನೀಡಲಿ ಎಂದು ಪ್ರಾರ್ಥಿಸೋಣ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor