ನಿರ್ದೇಶಕ ಸಿಂಪಲ್‌ ಸುನಿ ‘ದೇವರು ರುಜು ಮಾಡಿದನು’ ಚಿತ್ರದ ಪ್ರಮೋಷನಲ್ ಸಾಂಗ್ ಅನಾವರಣ

ಸಿಂಪಲ್‌ ಸುನಿ ನಿರ್ದೇಶನದ ‘ದೇವರು ರುಜು ಮಾಡಿದನು’ ಚಿತ್ರದ ಹ್ಯಾಪಿ ಬರ್ತಡೇ ಹಾಡಿಗೆ ಯುವ‌ನಟ ವಿರಾಜ್ ಭರ್ಜರಿ ಸ್ಟೆಪ್ಸ್

ಹಾಡಿನಲ್ಲಿ ‘ದೇವರು ರುಜು ಮಾಡಿದನು’..ಹ್ಯಾಪಿ ಬರ್ತಡೇ ಗೀತೆಗೆ ವಿರಾಜ್ ಬಿಂದಾಸ್ ಕುಣಿತ

ಗತವೈಭವ ಸಿನಿಮಾ ಸಕ್ಸಸ್ ಖುಷಿಯಲ್ಲೀಗ ನಿರ್ದೇಶಕ ಸಿಂಪಲ್‌ ಸುನಿ ದೇವರು ರುಜು ಮಾಡಿದನು ಚಿತ್ರ ಕೈಗೆತ್ತಿಗೊಂಡಿದ್ದಾರೆ. ಈ ಚಿತ್ರದ ಮೂಲಕ ರಂಗಭೂಮಿ ಕಲಾವಿದ ವಿರಾಜ್ ಹೀರೋ ಆಗಿ ಚಿತ್ರರಂಗ ಪ್ರವೇಶ ಮಾಡುತ್ತಿದ್ದಾರೆ. ಶೀರ್ಷಿಕೆ ಮೂಲಕ ಕುತೂಹಲ ಹೆಚ್ಚಿಸಿರುವ ದೇವರು ರುಜು ಮಾಡಿದನು ಸಿನಿಮಾದ ಪ್ರಮೋಷನಲ್ ಸಾಂಗ್ ಬಿಡುಗಡೆ ಮಾಡಲಾಗಿದೆ.

ಬೆಂಗಳೂರಿನ ಎಂಎಂಬಿ‌ ಲೆಗಸಿಯಲ್ಲಿ ದೇವರು ರುಜು ಮಾಡಿದನು ಸಿನಿಮಾದ ಹ್ಯಾಪಿ ಬರ್ತಡೇ ಹಾಡು ರಿಲೀಸ್ ಮಾಡಲಾಯಿತು. ಈ ಸಂದರ್ಭದಲ್ಲಿ ಗಾಯಕ ಅಂಥೋನಿ ದಾಸ್ ಸೇರಿದಂತೆ ಇಡೀ ಚಿತ್ರತಂಡ ಉಪಸ್ಥಿತರಿದ್ದರು.

ಹಾಡು ಬಿಡುಗಡೆ ಬಳಿಕ ನಿರ್ದೇಶಕ
ಸಿಂಪಲ್ ಸುನಿ ಮಾತನಾಡಿ, ದೇವರು ರುಜು ಮಾಡಿದನು ಮ್ಯೂಸಿಕಲ್ ಜರ್ನಿ ಸಿನಿಮಾ. ಚಿತ್ರದಲ್ಲಿ ಒಟ್ಟು 12 ಸಾಂಗ್ ಇದೆ. ವಿರಾಜ್ ಅದ್ಭುತ ಡ್ಯಾನ್ಸರ್. ಆಂಥೋನಿ ಸರ್ ನಾನು ನಿಮಗೆ ಋಣಿಯಾಗಿರುತ್ತೇನೆ. ಹಾಡನ್ನು ಪ್ರಮೋಷನ್ ಮಾಡಲು ಇಲ್ಲಿಗೆ ಬಂದಿದ್ದಾರೆ. ನಮಗೆ ಖುಷಿಯಾಗಿದೆ. ಇದಕ್ಕೆ ಹೇಳುವುದು ಸಿನಿಮಾ ದೊಡ್ಡದು. ನಾಗಾರ್ಜುನ್ ಅವರು‌ ಒಳ್ಳೆ ಸಾಹಿತ್ಯ ಕೊಟ್ಟಿದ್ದಾರೆ. ಕೀರ್ತಿ ಅವರು ಅದ್ಭುತ ನಟಿ. ಒಳ್ಳೆ‌ ಕಲಾದಂಡು ಚಿತ್ರದಲ್ಲಿ ಇದೆ ಎಂದರು.

ನಾಯಕ ವಿರಾಜ್ ಮಾತನಾಡಿ, ಸಿನಿಮಾ ಅನ್ನೋದು ಕನಸು, ದಾರಿ,‌ಜೀವನ. ಚಿಕ್ಕ ವಯಸ್ಸಿನಿಂದ ನಾನು ಇದನ್ನೇ ಅಂದುಕೊಂಡು ಬಂದಿದ್ದೇನೆ. ಈಗ ಅದನ್ನೇ ಫಾಲೋ ಮಾಡುತ್ತಿದ್ದೇನೆ. ನಮ್ಮ ಜೀವನದಲ್ಲಿ ಅಂದುಕೊಂಡ ಕೆಲಸ ಆಗುವುದಿಲ್ಲ. ಬೇರೆಯದ್ದೇ ಆಗುತ್ತದೆ. ಇದನ್ನು ದೇವರು ರುಜು ಮಾಡಿರುತ್ತಾನೆ. ಹ್ಯಾಪಿ ಬರ್ತಡೇ ಹಾಡಿಗೆ ಮಾಸ್ ರೂಪ ಕೊಟ್ಟಿದ್ದೇವೆ. ಇದು ಎಲ್ಲರ ಹುಟ್ಟುಹಬ್ಬಕ್ಕೆ ಬೇಕಾಗುವ ಹಾಡು. ಇದನ್ನು ಹೊರತುಪಡಿಸಿ ಬಹಳ ಅದ್ಭುತ ಹಾಡು ನಮ್ಮ ಚಿತ್ರದಲ್ಲಿ ಇದೆ ಎಂದರು.

ಗಾಯಕ ಆಂಥೋನಿ ದಾಸ್ ಹಾಡಿನ‌ ಬಗ್ಗೆ ಮಾಹಿತಿ ಹಂಚಿಕೊಂಡರು. ನಾಯಕ ಕೀರ್ತಿ ಕೃಷ್ಣ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.

ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದ ಹ್ಯಾಪಿ ಬರ್ತಡೇ ಹಾಡಿಗೆ ಖ್ಯಾತ ಗಾಯಕ ಆಂಥೋನಿ ದಾಸ್ ಧ್ವನಿ ನೀಡಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿರಾಜ್ ಭರ್ಜರಿಯಾಗಿ ಹ್ಯಾಪಿ ಬರ್ತಡೇ ಗೀತೆಗೆ ಹೆಜ್ಜೆ ಹಾಕಿದ್ದಾರೆ.

ದೇವರು ರುಜು ಮಾಡಿದನು ಚಿತ್ರದಲ್ಲಿ ವಿರಾಜ್ ಗೆ ಜೋಡಿಯಾಗಿ ಯುವನಟಿಯರಾದ
ಕೀರ್ತಿ ಕೃಷ್ಣ ಹಾಗೂ ದ್ವಿತಾ ರೈ ಅಭಿನಯಿಸುತ್ತಿದ್ದಾರೆ. ಸಿಂಪಲ್ ಸುನಿ ಇಲ್ಲೂ ಎಲ್ಲ ಕೆಲಸ ಮಾಡಿದ್ದಾರೆ. ಕಥೆ-ಚಿತ್ರಕಥೆ-ಸಂಭಾಷಣೆ ಹಾಗೂ ನಿರ್ದೇಶನ ಹೀಗೆ ಎಲ್ಲವನ್ನೂ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ.

ಚಿತ್ರಕ್ಕೆ ಜುಡಾ ಸಂಗೀತ ಕೊಟ್ಟಿದ್ದಾರೆ. ಸಂತೋಷ್ ರೈ ಪಾತಾಜೆ ಕ್ಯಾಮರಾವರ್ಕ್ ಮಾಡುತ್ತಿದ್ದಾರೆ. ಗ್ರೀನ್ ಹೌಸ್ ಮೂವೀಸ್ ಬ್ಯಾನರ್ ನಡಿ ಗೋವಿಂದ್ ರಾಜ್ ಸಿಟಿ ಈ ಚಿತ್ರಕ್ಕೆ ದುಡ್ಡುಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor