“ನಾನು ಮತ್ತು ಗುಂಡ 2” “ಗುಂಡನ ಜೊತೆ ಜನ್ಮ ಜನ್ಮದ ಅನುಬಂಧ”
ಚಿತ್ರ ವಿಮರ್ಶೆ – ಮಂಜುರಾಜ್ ಸೂರ್ಯ
“ಗುಂಡನ ಜೊತೆ ಜನ್ಮ ಜನ್ಮದ ಅನುಬಂಧ”
ಚಿತ್ರ – ನಾನು ಮತ್ತು ಗುಂಡ 2
ನಿರ್ಮಾಪಕರು – ರಘು ಹಾಸನ್
ನಿರ್ದೇಶನ – ರಘು ಹಾಸನ್
ಛಾಯಾಗ್ರಹಣ – ತನ್ವಿಕ್ G.
ಸಂಗೀತ – R.P. ಪಟ್ನಾಯಕ್
Rating – 3/5
ಕಲಾವಿದರು – ರಾಕೇಶ್ ಅಡಿಗ, ರಚನಾ ಇಂದರ್, ಸಾಧುಕೋಕಿಲ, ಗೋವಿಂದೇ ಗೌಡ, ಅವಿನಾಶ್ , ನಯನ, ಗಿರಿಶ್ ಶಿವಣ್ಣ, ಮಂಜು ಪಾವಗಡ ಮುಂತಾದವರು.
ಮನುಷ್ಯನಿಗೆ ಮಾತ್ರ ಏಳೇಳು ಜನ್ಮದ ಅನುಭಂದ ಅಂತಾರೆ, ಹಾಗೆಯೇ ಪೂರ್ವ ಜನ್ಮ, ಪುನರ್ ಜನ್ಮ ಅಂತ ಹೇಳುತ್ತಾರೆ.
ಆದರೆ ಇಲ್ಲಿ ಶ್ವಾನಕ್ಕೂ ಜನ್ಮ ಜನ್ಮಾಂತಾರದ ಸಂಭಂದಗಳಿರುತ್ತವೆ, ಮತ್ತೆ ತನ್ನವರಿಗಾಗಿ ಜನ್ಮವತಳೆದು ಮತ್ತೆ ಈ ಜನ್ಮದಲ್ಲೂ ಬೇಟಿಯಾಗುವ ಗುಂಡನ ಕಥೆ ನಿಜಕ್ಕೂ ವಿಭಿನ್ನ.
ನಾನು ಮತ್ತು ಗುಂಡ ಮೊದಲ ಚಿತ್ತದಲ್ಲಿ ಶಿವು ಕೆ.ಆರ್. ಪೇಟೆ ನಾಯಕನಾಗಿ ಗುಂಡನ (ಶ್ವಾನ) ಮಾಲೀಕನಾಗಿ ಅಭಿನಯಿಸಿದ್ದರು. ಅವರಿಬ್ಬರ ಕೆಮಿಷ್ಟ್ರಿ ಚನ್ನಾಗಿ ವರ್ಕ್ ಔಟ್ ಆಗಿತ್ತು.
ಶಂಕರನ ಪಾತ್ರದಲ್ಲಿ ಅಭಿನಯಿಸಿದ್ದ ಕೆ.ಆರ್. ಪೇಟೆ. ಕಾಯಿಲೆಗೆ ತುತ್ತಾಗಿ ಸತ್ತು ಹೋಗಿರುತ್ತಾರೆ ಆದರೆ ಗುಂಡ (ಶ್ವಾನ) ಬದುಕಿರುತ್ತದೆ.
ಆತನ ಯಜಮಾನ ಸತ್ತಾಗಿನಿಂದ ಅವನ ಸಾಮಾಧಿಯ ಬಳಿ ಸದಾ ಅಳುತ್ತಾ ಮಲಗಿರುವ ಗುಂಡನಿಗೆ ತನ್ನ ಯಜಮಾನನ ಮಗು ಜನ್ಮ ತಾಳಿದ್ದು ತಿಳಯುತ್ತದೆ. ಅಲ್ಲಿಂದ ತನ್ನ ನಿಷ್ಠೆಯನ್ನು ತನ್ನ ಯಜಮಾನನ ಮಗನಿಗೆ ತೋರುತ್ತದೆ.
ಇದೇ ನಾನು ಮತ್ತು ಗುಂಡ 2 ಚಿತ್ರ.
ಇಲ್ಲಿ ಯಜಮಾನನ ಮಗನಿಗೆ (ಯುವನ್ ಸಾಯಿ) ಗುಂಡನ ಕಂಡರೆ ಇಷ್ಟ ಇರುವುದಿಲ್ಲ. ಎಲ್ಲಿ ಹೋದರು ಹಿಂದೆ ಬರುತ್ತಾನೆ ಎಲ್ಲರೂ ನನ್ನ ಆಡಿ ಕೊಳ್ಳುತ್ತಾರೆ ನನ್ನಿಂದೆ ಬರಬೇಡ ಎಂದು ರೇಗುತ್ತಾನೆ. ಅವನನ್ನು ಸಾಕಿದ ಅಪ್ಪನಾಗಿ ಅಭಿನಯಿಸಿರುವ ಗೋವಿಂದೆಗೌಡ ಆ ಹುಡುಗ ಶಂಕರನಿಗೆ ಬುದ್ಧಿ ಹೇಳುತ್ತಾನೆ.
ಗುಂಡನ ಸಂಭಂದದ ಹಿನ್ನೆಲೆಯನ್ನು ಅವನಿಗೆ ತಿಳಿ ಹೇಳಿದ ನಂತರ ಶಂಕರ ಗುಂಡನನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾನೆ. ಆದರೆ ವಿಧಿವಶಾತ್ ಗುಂಡ ಕಾಯಿಲೆಗೆ ಸಿಲುಕಿ ಸತ್ತು ಹೋಗುತ್ತದೆ.
ಅಲ್ಲಿಂದ ಆ ಹುಡುಗ ಪ್ರತೀನಿತ್ಯ ಕೊರಗಿ ಕೊರಗಿ ಗುಂಡನಿಗಾಗಿ. ಪರಿತಪಿಸುತ್ತಿರುತ್ತಾನೆ.
ನಂತರ ಅದೇ ಗುಂಡ ಮತ್ತೆ ತಮಿಳುನಾಡಿನ ಊಟಿಯಲ್ಲಿ ಜನ್ಮ ಪಡೆಯುತ್ತದೆ.
ಹಾಗೆಯೇ ಇಲ್ಲಿ ಶಂಕರ ಬೆಳೆದು ದೊಡ್ಡವನಾಗುತ್ತಾನೆ.
ಊಟಿಯಲ್ಲಿರುವ ಗುಂಡ ಜನ್ಮ ತಾಳಿದ್ದು ಕನಸ್ಸಿನ ಮೂಲಕ ತಿಳಿಯುತ್ತದೆ ಶಂಕರ ದೊಡ್ಡವನಾದ ಪಾತ್ರವನ್ನು ರಾಕೇಶ್ ಅಡಿಗ ನಿಭಾಯಿಸಿದ್ದಾರೆ.
ಶಂಕರ (ರಾಕೇಶ್ ಅಡಿಗ) ತನ್ನ ಗುಂಡನನ್ನು ಹೇಗೆ ಪತ್ತೆ ಹಚ್ಚುತ್ತಾನೆ, ಎನ್ನುವುದೇ ಚಿತ್ರದ ಹೈಲೈಟ್.
ಊಟಿಯಲ್ಲಿ ಶ್ವಾನ ಪ್ರಿಯೆಯಾಗಿ ದೊಡ್ಡ ಕೋಟ್ಯಾಧೀಶರನ ಪುತ್ರಿಯಾಗಿ ರಚನಾ ಇಂದರ್ ಅಭಿನಯಿಸಿದ್ದಾರೆ.
ರಾಕೇಶ್ ಮತ್ತು ರಚನಾ ಇಂದರ್ ಇಬ್ಬರ ಕಾಂಭಿನೇಷನ್ ನಲ್ಲಿ ಗುಂಡನ ಕಥೆ ಒಂದಷ್ಟು ಹಾಸ್ಯದೊಂದಿಗೆ ಒಂದಷ್ಟು ಎಮೋಷನಲ್ ನೊಂದಿಗೆ ಸಾಗುತ್ತದೆ.
ಹಲವಾರು ವರ್ಷಗಳಿಂದ ಗುಂಡನಿಗಾಗಿ ಕಾದಿದ್ದ ರಾಕೇಶ್ ಗೆ ಗುಂಡ ಸಿಗುತ್ತಾನಾ.?, ರಚನಾ ಇಂದರ್ ಮತ್ತು ರಾಕೇಶ್ ಗೆ ಏನು ಸಂಭಂದ.?, ಗುಂಡ ತನ್ನ ಯಜಮಾನನನ್ನು ಈ ಜನ್ಮದಲ್ಲಿ ಹೇಗೆ ಗುರುತಿಸುತ್ತಾನೆ.? ಇವೆಲ್ಲವೂ ಚಿತ್ರ ನೋಡಿದರೆ ತಿಳಿಯುತ್ತದೆ.
ಇವರ ಜೊತೆಗೆ ಅವಿನಾಶ್ ಕಥಾನಾಯಕಿ ರಚನಾಳ ಬಿಲೇನಿಯರ್ ಅಪ್ಪನಾಗಿ ತಮ್ಮ ಪಾತ್ರದ ಗತ್ತನ್ನು ಕಾಪಾಡಿಕೊಂಡಿದ್ದಾರೆ.
ರಚನಾ ಇಂದರ್ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ಇಲ್ಲೂ ಕೂಡ ಬಿಲೇನಿಯರ್ ಮಗಳಾಗಿದ್ದರೂ ತನ್ನ ಕಾಲ ಮೇಲೆ ನಿಂತು ಸ್ವಂತ ಸಂಪಾದನೆಯ ಜೊತೆಗೆ ನಾಯಿ ಮರಿಯನ್ನು ಸಾಕುವುದರ ಮೂಲಕ ಒಂದಷ್ಟು, ಹಾಸ್ಯ ಮತ್ತು ಭಾವನಾತ್ಮಕವಾಗಿ ಅಭಿನಯಿಸಿದ್ದಾರೆ. ಹಾಗೆಯೇ ಸ್ಟೈಲಿಶ್ ಆಗಿ ಕಾಣುತ್ತಾರೆ.
ರಾಕೇಶ್ ಅಡಿಗ ತುಂಬಾ ದಿನಗಳ ನಂತರ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಅವರ ಸಹಜ ಅಭಿನಯದಿಂದ ಪ್ರೇಕ್ಷಕರಿಗೆ ಹತ್ತಿರವಾಗುತ್ತಾರೆ.
ಜೊತೆಗೆ ಶಂಕರನ ಪಾತ್ರದಲ್ಲಿ ಗುಂಡನಿಗಾಗಿ ಪರಿತಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಲ್ಲಾ ಪಾತ್ರಗಳು ಚನ್ನಾಗಿ ಎಷ್ಟು ಬೇಕೋ ಅಷ್ಟರಮಟ್ಟಿಗೆ ಮೂಡು ಬಂದಿದೆ.
ನಿರ್ದೇಶಕ ರಘು ಹಾಸನ್ ನಾನು ಮತ್ತು ಗೂಂಡ 2ನೇ ಭಾಗವನ್ನು ಭಾವನಾತ್ಮಕದ ಸೆಲೆಯಲ್ಲಿ ಎಣೆದಿದ್ದಾರೆ.
ಶ್ವಾನ ಪ್ರಿಯರಿಗೆ ತುಂಬಾ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.
R.P. ಪಟ್ನಾಯಕ್ ಬಹಳ ವರ್ಷಗಳ ನಂತರ ಮತ್ತೆ ಕನ್ನಡದ ನಾನು ಮತ್ತು ಗುಂಡ 2 ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿ ಒಳ್ಳೆಯ ಗೀತೆಗಳನ್ನು ನೀಡಿದ್ದಾರೆ.
ಪ್ರಾಣಿ ಮತ್ತು ಮನುಷ್ಯನ ಭಾವನಾತ್ಮಕ ಹಾಗೂ ಅನುಭಂದದ ಕಥೆಯನ್ನು ಶ್ವಾನ ಪ್ರಿಯರು ಮತ್ತು ಪ್ರೇಕ್ಷಕರು
ನಿರಾಳವಾಗಿ ನೋಡಬಹುದು.











