ಜಸ್ಟ್ ಮ್ಯಾರಿಡ್ ಚಿತ್ರ ವಿಮರ್ಶೆ. ಜಸ್ಟ್ ಮದುವೆಯಲ್ಲಿ ಉಂಡವರೇ ಜಾಣರು.

ಚಿತ್ರ – ಜಸ್ಟ್ ಮ್ಯಾರಿಡ್
ನಿರ್ಮಾಪಕರು – ಸಿ.ಆರ್. ಬಾಬಿ, ಅಜನೀಶ್ ಲೋಕನಾಥ್
ನಿರ್ದೇಶನ – ಸಿ.ಆರ್. ಬಾಬಿ
ಛಾಯಾಗ್ರಹಣ – ಪಾರ್ಥಿಬನ್
ಸಂಗೀತ – ಅಜನೀಶ್ ಲೋಕನಾಥ್

Rating – 3/5

ವಿಮರ್ಶೆ – ಮಂಜುರಾಜ್ ಸೂರ್ಯ

ಕಲಾವಿದರು -ಶೈನ್ ಶೆಟ್ಟಿ, ಅಂಕಿತ ಅಮರ್, ದೇವರಾಜ್, ಶೃತಿ,  ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಅನೂಪ್ ಭಂಡಾರಿ, ಶೃಉತಿ ಹರಿಹರನ್ ಮುಂತಾದವರು.

ಅದೊಂದು ತುಂಬು ಕುಟುಂಬ.
ಮಕ್ಕಳು, ಮೊಮ್ಮೊಕ್ಕಳು, ಸೊಸೆಯಂದಿರು ಆ ಮನೆಯ ಹಿರಿಯ ಯಜಮಾನ ಹೀಗೆ‌ಮನೆತುಂಬ ಸಂಬಂಧಗಳ ಸಂಭ್ರಮವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕಿ ಬಾಬಿ.
ಈಗಿನ ಕಾಲಘಟ್ಟದಲ್ಲಿ ತುಂಬಿದ ಸಂಸಾರಗಳಿಗಿಂತ ಹರಿದು ಹಂಚಿಹೊಗಿರುವ ನ್ಯೂಕ್ಲಿಯರ್ ಕುಟುಂಬಗಳೇ ಜಾಸ್ತಿ.
ಅಂತಹುದರಲ್ಲಿ ವಿಶ್ರಾಂತ ಚೀಫ್ ಜಸ್ಟೀಸ್ ಪೂರ್ಣಚಂದ್ರನ ಪಾತ್ರದಲ್ಲಿ ಮನೆಯ ಹಿರಿಯನಾಗಿ ದೇವರಾಜ್ ಅಭಿನಯಿಸಿದ್ದಾರೆ.
ಚಿತ್ರದ ಕೊನೆಯ 10‌ ನಿಮಿಷ ದೇವರಾಜ್ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಸೆಳೆಯುವ ಮೂಲಕ ಕಣ್ಣು ಒದ್ದೆಯಾಗಿಸುತ್ತಾರೆ.


ತುಂಬು ಕುಟುಂಭವಾದರು ಮನೆಯಲ್ಲಿ ಯಾರ ಸಂಸಾರದಲ್ಕೂ ನೆಮ್ಮದಿ, ಪ್ರೀತಿಯ ಕೊರತೆ ಎದ್ದು ಕಾಣುತ್ತದೆ.
ಇದು ಒಂದು ಮದುವೆಯ ಸುತ್ತ ತಿರುಗುವ ಕಥೆ.  ದೇವರಾಜ್ ಮೊಮ್ಮಗ ಸೂರ್ಯನಾಗಿ (ಶೈನ್‍ ಶೆಟ್ಟಿ) ಅಭಿನಯಿಸಿದ್ದಾರೆ.
ಸೂರ್ಯ ಹೇಗೆ ಭ್ರಮಾ ಲೋಕದಲ್ಲಿ ಸಿಲುಕುತ್ತಾನೆ, ಹಾಗೂ ಆ ಭ್ರಮೆಯಿಂದ ಹೇಗೆ ಹೊರ ಬಂದು ತನ್ನ ಕುಟುಂಬದವರ ಸಮಸ್ಯೆಗಳನ್ನು ಶೈನ್ ಶೆಟ್ಟಿ
ಹೇಗೆ ಬಗೆಹರಿಸುತ್ತಾನೆ, ಕುಟುಂಬದ ಯಾರಿಗೂ ಯಾವುದೇ ತೊಂದರೆಯಾಗದಂತೆ
ಸೂರ್ಯ ಹೇಗೆ ಸರಿ ಪಡಿಸುತ್ತಾನೆ ಎಂಬುದು ಚಿತ್ರ ನೋಡಿದಾಗ ಅರಿವಾಗುತ್ತದೆ.

ಶೈನ್‍ ಶೆಟ್ಟಿ ಮೊದಲ ಬಾರಿಗೆ ಪೂರ್ಣಪ್ರಮಾಣದ ನಾಯಕನಾಗಿ ಅಭಿನಯಿಸಿದರು ತಮ್ಮ ಪಾತ್ರವನ್ನು ಚನ್ನಾಗಿ ನಿಭಾಯಿಸಿದ್ದಾರೆ.
ಇನ್ನು ಅಂಕಿತಾ ಅಮರ್‍ ಈ ಹಿಂದೆ ಅಭಿನಯಿಸಿದ ಚಿತ್ರಗಳಲ್ಲೂ ತಮ್ಮ ಸಹಜ ಅಭಿನಯದಿಂದ ಪ್ರೇಕ್ಷಕರ ಮನಸೆಳೆದಿದ್ದರು, ಈಗ ಈ ಚಿತ್ರದಲ್ಲೂ ತಮ್ಮ ಸಹಜ ಅಭಿನಯದಿಂದ ಸಹಜ ಸೌಂಧರ್ಯದಿಂದ ಪ್ರೇಕ್ಷಕರ ಮನಸ್ಸನ್ನು ಸೂರೆಗೊಳ್ಳುತ್ತಾರೆ.

ದೇವರಾಜ್‍ ಮತ್ತು ಶ್ರುತಿ ಚಿತ್ರದ ಜೀವಾಳವಾಗಿದ್ದಾರೆ.
ಹಾಗೂ ಹಿರಿತನವನ್ನು ಮೆರೆದಿದ್ದಾರೆ.
ಅಚ್ಯುತ್‍ ಕುಮಾರ್‍, ಶ್ರುತಿ ಹರಿಹರನ್‍ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

ಅಜನೀಶ್‍ ಲೋಕನಾಥ್ ಸಂಗೀತ ನಿರ್ದೇಶಕನ ಸ್ಥಾನದಿಂದ ನಿರ್ಮಾಪಕನಾಗಿ ಬಡ್ತಿ ಪಡೆದಿದ್ದಾರೆ ಹಾಗೆಯೇ ಚಿತ್ರದ ಸಂಗೀತದ ಜವಾಬ್ಧಾರಿಯನ್ನು ಹೊತ್ತುಕೊಂಡು ಎರಡು ಕಾರ್ಯವನ್ನು ನಿಭಾಯಿಸಿದ್ದಾರೆ.

ಹಾಗೂ ಸಂಗೀತ ನಿರ್ದೇಶಕಿ  ಬಾಬಿ ಮೊದಲ ಬಾರಿಗೆ ಈ ಚಿತ್ರದ ಮೂಲಕ ಆಕ್ಷನ್ ಕಟ್ ಹೇಳಿದ್ದಾರೆ. ಆದರೆ ನಿರ್ದೇಶನದಲ್ಲಿ ಮತ್ತಷ್ಟು ಪಳಗಬೇಕಿದೆ, ಕಥಾ ನಿರೂಪಣೆಯಲ್ಲಿ ಇನ್ನಷ್ಟು ಹೋಮ್ ವರ್ಕ್ ಮಾಡಬೇಕಿತ್ತು ಅನ್ನಿಸುತ್ತದೆ.
ಮನೆಯಲ್ಲಿ ಕೂತು ಧಾರವಾಹಿಗಳಿಗೆ ಜೋತು ಬಿದ್ದಿರುವ ಪ್ರೇಕ್ಷಕರು ಕುಟುಂಭ ಸಮೇತ ಮತ್ತೊಂದು ಮೆಘಾ ಕಥೆಯನ್ನು ಒಂದೇ ಕಂತಿನಲ್ಲಿ ಯಾವುದೇ ಬ್ರೇಕ್ ಇಲ್ಲದೇ ನೋಡಬಹುದು.
ಒಟ್ಟಿನಲ್ಲಿ ಅದ್ದೂರಿ ತಾರಾಗಣದ, ಅದ್ದೂರಿ ನಿರ್ಮಾಣದ, ಒಂದು ಫ್ಯಾಮಿಲಿ ಡ್ರಾಮವನ್ನು ಪಾರ್ಥಿಬನ್ ಕ್ಯಾಮರಾ ಕೈಚಳಕದಲ್ಲಿ ಕಣ್ತುಂಬಿಕೊಳ್ಳಬಹುದು
ಜಸ್ಟ್ ಮ್ಯಾರಿಡ್ ಚಿತ್ರದ ಮೂಲಕ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor