ಚಿತ್ರ ವಿಮರ್ಶೆ – ರಿಪ್ಪನ್ ಮತ್ತು ಸ್ವಾಮಿಯ ಕಥೆಯ ಸುತ್ತಾ ಹೆಣಗಳ ವ್ಯಥೆ.

ಚಿತ್ರ – ರಿಪ್ಪನ್ ಸ್ವಾಮಿ
ನಿರ್ಮಾಪಕರು – ಪಂಚಾನನ ಫಿಲಂಸ್
ನಿರ್ದೇಶನ – ಕಿಶೂರ್ ಮೂಡಬಿದ್ರೆ
ಛಾಯಾಗ್ರಹಣ – ರಂಗನಾಥ್
ಸಂಗೀತ – ಸ್ಯಾಮ್ಯುಯಲ್ ಅಭಿ

Rating – 3/5

ವಿಮರ್ಶೆ – ಮಂಜುರಾಜ್ ಸೂರ್ಯ

ಕಲಾವಿದರು – ವಿಜಯ ರಾಘವೇಂದ್ರ, ಅಶ್ವಿನಿ ಚಂದ್ರಶೇಖರ್, ವಜ್ರಧೀರ್, ಪ್ರಕಾಶ್ ತುಮ್ಮಿನಾಡು, ಯಮುನಾ ಶ್ರೀನಿಧಿ, ಕೃಷ್ಣಮೂರ್ತಿ ಕವತ್ತಾರ್. ಮುಂತಾದವರು.

ರಿಪ್ಪನ್‍ ಸ್ವಾಮಿ ಪಾತ್ರದಲ್ಲಿ ವಿಜಯರಾಘವೇಂದ್ರ ಅವಶ್ಯಕಥೆಗಿಂತ ಹೆಚ್ಚಾಗಿ ಅಬ್ಬರಿಸಿದ್ದಾರೆ.

ವಿಜಯ್ ರಿಪ್ಪನ್ ಸ್ವಾಮಿಯಾಗಿ ವಿಚಿತ್ರ, ವಿಲಕ್ಷಣ, ಕೊಳಕ, ನಿಗೂಡ ಹಂತಕ, ಮಾನವೀಯತೆಯೇ ಇಲ್ಲದ ಕ್ರೂರಿ, ಹೆಂಡತಿಗೆ ಇಷ್ಟವಿಲ್ಲದಿದ್ದರೂ ಮಂಚಕ್ಕೆ ಎಳೆದು ವಿಕೃತ ಪೌರುಷ ಮೆರೆಯುವ ವ್ಯಕ್ತಿ.
ಯಾರಿಗೂ ಕನಿಕರ ತೋರದ, ಪ್ರೀತಿ ತೋರದ ಸದಾ ಗರ್ವ ದುರಾಂಕಾರಿಯ ಪಾತ್ರದಲ್ಲಿ ಮೊದಲ ಬಾರಿಗೆ ಅಭಿನಯಿಸಿದ್ದಾರೆ.


ಚಿತ್ರದ ಪ್ರಾರಂಭದಲ್ಲೇ ರಿಪ್ಪನ್ ಸ್ವಾಮಿ ಸತ್ತು ಹೋಗಿರುತ್ತಾನೆ ಆತ ಹೇಗೆ ಸತ್ತ ಎನ್ನುವುದನ್ನು ನಿರ್ದೇಶಕರು ಎಳೆ ಎಳೆಯಾಗಿ ಪ್ರೇಕ್ಷಕರ ಮುಂದೆ ತೆರೆದಿಡುತ್ತಾರೆ.
ಅದೊಂದು ಕಾಫಿ ಎಷ್ಟೇಟ್ ಅದರ ಮಾಲಿಕರು ರಿಪ್ಪನ್ ಸ್ವಾಮಿ ಮತ್ತು ಅವನ ಅಣ್ಣ.
ಜೊತೆಗೆ ಹಂದಿ ಫಾರಮ್ ನಡೆಸುತ್ತಾನೆ.
ಆಗಾಗ ಹಂದಿಯನ್ನು ಕೊಂದನಾ, ಮನುಷ್ಯರನ್ನು ಕೊಂದನಾ ಎನ್ನುವುದೇ ನಿಗೂಡ.
ಅವನಿಗೊಬ್ಬ ಹೆಂಡತಿ ಮದುವೆಯಾದಾಗಿ ಮೂರು ವರ್ಷವಾದರೂ ಮನೆಯ ಹೊಸ್ತಿಲು ದಾಟದ ನತದೃಷ್ಟೆ‌.
ಎಲ್ಲದಕ್ಕೂ ಸ್ವಾಮಿಯ ಕೃಪೆಯಾಗಬೇಕು, ಸ್ವಾಮಿಗೆ ಕಾಮದ ಮೂಡು ಬಂದರೆ ಏಕಾಏಕಿ ಹಾಸಿಗೆಗೆ ಎಳೆಯುತ್ತಾನೆ ಅಲ್ಲೂ ಪ್ರೀತಿಯಿಲ್ಲ,
ಭಾವನೆಗಳಿಲ್ಲ, ಅವಳನ್ನು ಅನುಭವಿಸಿದ ಅಂಕಾರ ಕಣ್ಣಲ್ಕಿ ಕಾಣುತ್ತದೆ.
ಆರುವರೆ ಅಡಿಯ ಅಜಾನುಬಾಹು ರಿಪ್ಪನ್ ಎಂಬ ವ್ಯಕ್ತಿಯನ್ನು ಹೆದರಿಸಿ ಊರು ಬಿಡಿಸಿರುತ್ತಾನೆ ಸ್ವಾಮಿ ಆಗಿಂದ ಅವನ ಹೆಸರಿನ ಜೊತೆಗೆ ತಳುಕು ಹಾಕಿಕೊಂಡಿದ್ದು ರಿಪ್ಪನ್ ಎಂಬ ಹೆಸರು ಅದರಿಂದಾಗಿ ಸ್ವಾಮಿ ರಿಪ್ಪನ್ ಸ್ವಾನಿಯಾಗಿ ಬದಲಾಗುತ್ತಾನೆ.
ಅವನ ಅಪ್ಪ ಹೆಣ್ಣುಬಾಕ ಅವನ ಕಾಮ ತೃಷೆಗೆ ಬಳಕೆಯಾದ ಮನೆ ಕೆಲಸದವಳ ಮಗ ಸ್ವಾಮಿಯ ಜೊತೆಗೆ ಇರುತ್ತಾನೆ. ಅವನು ನಿಗೂಡವಾಗಿ ಕಾಣೆಯಾಗುತ್ತಾನೆ. ಅವನ ಹೆಣದ ಸುತ್ತ ತಿರುಗುವ ಕಥೆ ರಿಪ್ಪನ್ ಸ್ವಾಮಿಯ ಹಲವು ಅಸಲಿ ಮುಖಗಳನ್ನು ಬಯಲು ಮಾಡುತ್ತಾರೆ ಊರಿಗೆ ಹೊಸದಾಗಿ ಬಂದ ಬುಸುಗುಡುವ ನಾಗಿಣಿ ಪೋಲಿಸ್ ಅಧಿಕಾರಿ.
ಆಕೆ ಆ ಊರಿನಲ್ಲಿ ನಡೆದ ಹಲವು ನಿಗೂಡತೆಯ ಬಗ್ಗೆ ತನಿಕೆ ನಡೆಸುತ್ತಿದ್ದಂತೆ ಯಾರು, ಏಅಜೆ, ಏನು ಅನ್ನುವಷ್ಟರಲ್ಲಿ ರಿಪ್ಪನ್ ಸ್ವಾಮಿಯ ಹೆಣ ಬೀಳುತ್ತದೆ. ರಿಪ್ಪನ್ ಸ್ವಾಮಿಯ ಹೆಣ ಬೀಳಲು ಯಾರು ಕಾರಣ, ರಿಪ್ಪನ್ ಸ್ವಾಮಿ ಆತ್ಮಹತ್ಯೆಯಾಯ್ತಾ, ಅನ್ನುವುದು ನಿಗೂಡ, ವಿಸ್ಮಯ ಮತ್ತು ವಿಚಿತ್ರ.
ವಿಜಯ್ ಈ ತರದ ಪಾತ್ರವನ್ನು ಮಾಡಬಲ್ಲರು ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಅಶ್ವಿನಿ ಚಂದ್ರಶೇಖರ್‍ ಮೊದಲ ಬಾರಿಗೆ ಇಪ್ಪನ್ ಸ್ವಾಮಿಯ ಹೆಂಡತಿಯಾಗಿ ಪ್ರೇಕ್ಷಕರ ಗಮನ ಗಮನಸೆಳೆಯುತ್ತಾರೆ, ಅವರ ಕಿರುನಗೆ ಇಷ್ಟವಾಗುತ್ತದೆ.

ಮಿಕ್ಕಂತೆ ಪ್ರಕಾಶ್‍ ತುಮಿನಾಡು,
ಕೃಷ್ಣಮೂರ್ತಿ ಕವತ್ತಾರ್, ಯಮುನಾ ಶ್ರೀನಿಧಿ, ವಜ್ರಧೀರ್ ಜೈನ್, ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಛಾಯಾಗ್ರಾಹಕ ರಂಗನಾಥ್ ಮಲೆನಾಡಿನ ಸೌಂದರ್ಯವನ್ನು ಚನ್ನಾಗಿ ಸೆರೆಹಿಡಿದಿದ್ದಾರೆ.

ಸ್ಯಾಮ್ಯುಯಲ್‍ ಅಭಿ ಸಂಗೀತದಲ್ಲಿ ಜೇನು ಕುರುಬರ ಹಾಡುಗಳು ಚೆನ್ನಾಗಿ ಮೂಡಿಬಂದಿದೆ.
ಹಿನ್ನೆಲೆ ಸಂಗೀತ ಕೂಡ ಚಿತ್ರಕ್ಕೆ ಪೂರಕವಾಗಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor