ಚಿತ್ರ ವಿಮರ್ಶೆ – ಗ್ರೀನ್ ಕತ್ತಲಗೊಳಗೊಂದು ಭ್ರಮೆ, ಭ್ರಮೆಯಳೊಗೊಂದು ಕತ್ತಲು,ಕತ್ತಲೆಯಳೊಗೊಬ್ಬ ರಾಕ್ಷಸ
First Review
ಚಿತ್ರ – ಗ್ರೀನ್
ವಿಮರ್ಶೆ – ಮಂಜುರಾಜ್ ಸೂರ್ಯ
ನಿರ್ಮಾಪಕರು – ವಿ. ಎನ್.ಸ್ವಾಮಿ, ರಾಜ್ ವಿಜಯ್
ನಿರ್ದೇಶನ – ರಾಜ್ ವಿಜಯ್
ಛಾಯಾಗ್ರಹಣ – ಮಧು ಸೂಧನ್
ಸಂಗೀತ – ಶಕ್ತಿ
ಕಲಾವಿದರು :- ಗೋಪಾಲ್ ದೇಶ್ ಪಾಂಡೆ, ಬಾಲಾಜಿ ಮನೋಹರ್, RJ ವಿಕ್ಕಿ, ವಿಶ್ವನಾಥ್ ಮಾಂಡಲೀಕ, ಶಿವ ಮಂಜು, ಡಿಂಪಿ ಪದ್ಯ. ಮುಂತಾದವರು.
ಕತ್ತಲಗೊಳಗೊಂದು ಭ್ರಮೆ
ಭ್ರಮೆಯಳೊಗೊಂದು ಕತ್ತಲು
ಕತ್ತಲೆಯಳೊಗೊಬ್ಬ ರಾಕ್ಷಸ
ಅವನು ಬ್ರಹ್ಮ ರಾಕ್ಷಸ, ವಿಜ್ಜಾನದ ರಾಕ್ಷಸ
ಅವನಿರುವುದು ಕತ್ತಲೆಯ ಕಾಡು, ನೆತ್ತರಿನ ಕಾಡು
ಕೂಗಾಟ, ಅಲೆದಾಟ, ಅರಚಾಟ
ಅದೊಂದು ಸ್ವಾತಂತ್ರಕ್ಕಾಗಿ ನಿಗೂಡ ಬದುಕಿನ ಆತಂಕದಿಂದ ಹೊರಬರುವ ಸ್ವಾತಂತ್ರಕ್ಕಾಗಿ ಅದುಕಿನ ಅಸ್ಮಿತೆಗಾಗಿ ಹೋರಾಟ, ತನ್ನೊಳಗೆ ತಾನು ಕಳೆದುಹೋದ ಅನುಭವ
ಅವನು ಸೃಷ್ಠಿಸಿಕೊಂಡ ಪಾತ್ರಗಳ ಭ್ರಮೆಯಲ್ಲಿ ರಾಕ್ಷಸನಿಂದ ದೂರವಿರಬೇಕಾದವನು ಅವನೇ ರಾಕ್ಷಸನಾದ ಭ್ರಮೆ
ಆ ಕಾಡು ಆ ರಾಕ್ಷಸ ಯಾವುದು ನಿಜವಲ್ಲ. ಅದಕ್ಕೆಲ್ಲ ಅವನೇ ಕಾರಣ, ಕಾಡಿನ ಹಸಿರು ಹಸಿರಿನೊಳಗಿನ ಉಸಿರು, ಉಸಿರಿನೊಳಗೊಂದಷ್ಟು ಬಸಿರಿನ ಭ್ರೂಣಗಳು
ಭ್ರೂಣಗಳೊಳಗಿನ ಮಿದುಳು
ಮತ್ತೆ ಮತ್ತೆ ಕಾಡುವ ಭ್ರಮೆಯ ಗೊಂದಲಗಳು
ಕಾಡಿನೊಳಗೆ ತಾಯಿಯ ಹತ್ಯೆ
ಆ ಹುಡುಗ ಅಪ್ಪನನ್ನು ಕೊಂದು ಅಮ್ಮನನ್ನು ರಕ್ಷಿಸಿ ರಾಕ್ಷಸನಾದ ಕಥೆ.
ಇಲ್ಲಿ ಯಾರು ಸರಿ ಇಲ್ಲ,ಯಾರು ಅವನ ಮಾತು ಕೇಳಲ್ಲ
ರಾಕ್ಷಸ ಇದ್ದಾನೆ ಯಾರು ಹೊರಗೆ ಹೋಗಬೇಡಿ ಅಂದ್ರು ಎಲ್ಲಾ ಆಚೆ ಹೋಗುತ್ತಿದ್ದಾರೆ.
ಇದೊಂದು ಸೈಕೋ ಕಥೆಯೊಳಗೆ ಸಿಲುಕಿದ ಸೈಕೋ ವ್ಯಕ್ತಿಯ ವಿಚಿತ್ರ ಅನುಭವದ ಗ್ರೀನ್.
ಮನುಷ್ಯನ ಮಿದುಳಿನ ನರ ಮಂಡಲದೊಳಗಿನ ವಿಸ್ಮಯ, ನಿಗೂಡ ಬೆಳಕು ಕತ್ತಲಿನ ಕುಕೃತ್ಯದ ಮಜಲುಗಳ ಏರಿಳಿತದ ಹಸಿರಿನ ಕಾಡುವ ಕಾಡು
ಈಗಾಗಲೇ ಈ ಚಿತ್ರ 21ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ.
ಗುಣಾಡ್ಯ ಪ್ರೊಡಕ್ಷನ್ಸ್ ನಲ್ಲಿ ಚಿತ್ರ ನಿರ್ಮಾಣವಾಗಿದ್ದು. ರಾಜ್ ವಿಜಯ್ ನಿರ್ದೇಶನದಲ್ಲಿ ಚಿತ್ರ ವಿಭಿನ್ನವಾಗಿ ಮೂಡಿ ಬಂದಿದೆ.
ಮಧುಸೂಧನ್ ಛಾಯಾಗ್ರಹಣದಲ್ಲಿ ಚಿತ್ರ ಚನ್ನಾಗಿ ಮೂಡಿ ಬಂದಿದೆ ಹಾಗೂ ಶಕ್ತಿ ಸಂಗೀತ ಚಿತ್ರಕ್ಕೆ ಶಕ್ತಿ ನೀಡಿದೆ.
ನಿರ್ದೇಶಕರು VFX ನಲ್ಲಿ ತುಂಬಾ ಪರಿಣಿತಿ ಹೊಂದಿರುವುದನ್ನು ಈ ಮೂಲಕ ಸಾಬೀತು ಪಡಿಸಿದ್ದಾರೆ.











