ಚಿತ್ರಕಲಾ ಪರಿಷತ್ತಿನಲ್ಲಿ ಮೇರೋತ್ಸವ.

ಚಿತ್ರಕಲಾ ಪರಿಷತ್ತಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಮೇರೋತ್ಸವ ಕಾರ್ಯಕ್ರಮದಲ್ಲಿ ಮೇರು ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳು ಬಿಡಿಸಿದಂತ ಮೈಸೂರು ಪೇಂಟಿಂಗ್ಸ್ ಮತ್ತು ತಂಜಾವೂರು ಪೈಂಟಿಂಗ್ಸ್ ಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿನ್ನೆಲೆ ಗಾಯಕಿ ಶಮಿತಾ ಮಲ್ನಾಡ್, ನಟಿ ಅನು ಪ್ರಭಾಕರ್, ಚಿತ್ರ ಕಲಾವಿದೆ ನೀಲಪಂಚ್, ಚಿತ್ರ ಕಲಾವಿದ ಡಾ,, ದುಂಡಿರಾಜ್ ಅಂಕಣಕಾರರಾದ ಶ್ರೀಕಂಠ ಬಾಳಗಂಚಿ ಮತ್ತು ಮತ್ತು ಚಿತ್ರ ನಿರ್ದೇಶಕರಾದ ಕೆ ರಾಮ್ ನಾರಾಯಣ್ ರವರು ಆಗಮಿಸಿದ್ದರು


ಮೇರು ಚಿತ್ರಕಲಾ ಶಾಲೆಯ ಸಂಸ್ಥಾಪಕರು ಹಾಗೂ ಚಿತ್ರಕಲಾವಿದೆಯಾದ ತಿರುಮಲ ಶ್ರೀಕಾಂತ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯ
ವೈಭವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮದು ಹಾಗಾಗಿ ಮೇರು ಚಿತ್ರಕಲೆ ಶಾಲೆಯ ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ ಚಿತ್ರಗಳನ್ನು ಚಿತ್ರಕಲಾ ಪರಿಷತ್ತಿನ ದೇವರಾಜ್ ಅರಸ್ ಗ್ಯಾಲರಿಯಲ್ಲಿ ದಿನಾಂಕ ಜನವರಿ 9 ,10 ಮತ್ತು 11 ರಂದು ಮೂರು ದಿನಗಳು ಸಾರ್ವಜನಿಕರ ಪ್ರದರ್ಶನಕ್ಕಾಗಿ ಮೇರೋತ್ಸವವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ನಟಿ ಅನುಪ್ರಭಾಕರ್ ರವರು ಚಿಕ್ಕಂದಿನಲ್ಲಿ ನನ್ನಲ್ಲೂ ಚಿತ್ರ ಕಲಾವಿದೆ ಆಗಬೇಕೆಂಬ ಆಸಕ್ತಿ ಇತ್ತು ಎಂದು ತಮ್ಮ ಭಾವನೆಗಳನ್ನು ಹಂಚಿಕೊಂಡರು.
ಹಾಗೆ ಗಾಯಕಿ ಶಮಿತಾ ಮಲ್ನಾಡ್ ರವರು ತಾವು ಬೆಟ್ಟ ಗುಡ್ಡ ಮರಗಳನ್ನು ಬರೆಯುತ್ತಿದ್ದೆವು ಈಗ ಈ ಚಿತ್ರಗಳನ್ನು ನೋಡುವಾಗ ನಮಗೂ ಇಂತಹ ಚಿತ್ರಗಳನ್ನು ಕಲಿತು ಬರೆಯಬೇಕೆಂಬ ತಮ್ಮ ಆಸೆಯನ್ನು ವ್ಯಕ್ತಪಡಿಸಿದರು .


ಶ್ರೀಮತಿ ನೀಲ ಪಂಚ್ ರವರು ಎಲ್ಲ ವಿದ್ಯಾರ್ಥಿಗಳನ್ನು ಹಾರೈಸಿ ಹೊಗಳಿದರು.. ಮತ್ತು ಅಂಕಣಕಾರರಾದ ಶ್ರೀಕಂಠ ಬಳಗುಂಚಿ ರವರು ಗುರು ಪರಂಪರೆಯನ್ನು ಮುಂದುವರೆಸಿ ಎನ್ನುವ ಮಾತುಗಳಾಡಿದರು.. ಮತ್ತು ಡಾಕ್ಟರ್ ಜೆ ದುಂಡರಾಜ್ ರವರು ತನ್ನ ಶಿಷ್ಯೆ ಯಾದಂತ ತಿರುಮಲ ಶ್ರೀಕಾಂತ್ ಇಂದು ದೊಡ್ಡಮಟ್ಟದ ಮೇರೋತ್ಸವ ಕಾರ್ಯಕ್ರಮ ಮಾಡುತ್ತಿರುವುದನ್ನು ಕಂಡು ಹೆಮ್ಮೆಯಾಗುತ್ತಿದೆ ಎಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು..
ಹಾಗೂ ಚಿತ್ರ ನಿರ್ದೇಶಕರಾದ ರಾಮನಾರಾಯಣ್ ಅವರು ತನ್ನ ಒಡಹುಟ್ಟಿದ ತಂಗಿಯಾದ ತಿರುಮಲ ಶ್ರೀಕಾಂತ್ ಸಾಮಾನ್ಯ ಗೃಹಣಿಯಾಗಿದ್ದು ತನ್ನ ಹವ್ಯಾಸದ ಚಿತ್ರಕಲೆಯನ್ನು ಇಂದು ಇಷ್ಟು ದೊಡ್ಡ ಮಟ್ಟದ ಮೇರೋತ್ಸವ ವನ್ನಾಗಿಸಲು ಅವಳ ಶಿಸ್ತು ಮತ್ತು ಶ್ರದ್ದೆಯೇ ಈ ಸಾಧನೆಗೆ ಕರಣ ಎಂದು ತಿಳಿಸಿದರು

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor