Kite Brothers movie review. ಚಿಕ್ಕ ಮಕ್ಕಳ ಬಾನಗಲದ ಬಣ್ಣ ಬಣ್ಣದ ದೊಡ್ಡ ಚಿಂತನೆಗಳು
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಚಿತ್ರ – ಕೈಟ್ ಬ್ರದರ್ಸ್
ನಿರ್ಮಾಪಕರು – ಮಂಜುನಾಥ್ BS., ರಜನಿಕಾಂತ್ ರಾವ್ ದಳವಿ
ನಿರ್ದೇಶನ – ವಿರೇನ್ ಸಾಗರ್ ಭಗಾಡೆ
ಛಾಯಾಗ್ರಹಣ – ಅಶೋಕ್ ಕಶ್ಯಪ್
ಸಂಗೀತ – ಅನೀಶ್ ಚೆರಿಯನ್
ಸಂಕಲನ – ಸಂತೋಷ್ ರಾಧಾಕೃಷ್ಣನ್
ಕಲಾವಿದರು :- ಪ್ರನೀಲ್ ನಾಡ್ಗಿರ್, ವಿನೋದ್ ಭಗಾಡೆ, ಸಮರ್ಥ್ ಆಶೀ, ಶ್ರೇಯಾ ಹರಿಹರ್, ಅಭುಷೇಕ್ ಮುದರಡ್ಡಿ. ಮುಂತಾದವರು.
ಚಿಕ್ಕ ಮಕ್ಕಳ ಬಾನಗಲದ ಬಣ್ಣದ ದೊಡ್ಡ ಕನಸುಗಳು
ಸರ್ಕಾರಿ ಶಾಲೆಗಳ ಕಬ್ಬಿಣದ ಬೀಗಗಳ ಕಥೆ ವ್ಯಥೆ
ಅದೊಂದು ಉತ್ತರ ಕರ್ನಾಟಕದ ಹಳ್ಳಿ, ಆ ಹಳ್ಳಿಯ ಜನ ಜೀವನದಲ್ಲಿ ಸರ್ಕಾರಿ ಶಾಲೆ ಒಂದು ಮುಖ್ಯ ಅಂಶ. ಸರ್ಕಾರಿ ಶಾಲೆಯಲ್ಲಿ ಓದುವ ಹುಡುಗರ ಬದುಕಿನ ಸುತ್ತಾ ಆಟ ಪ, ತುಂಟಾಟ, ತರಲೆಗಳನ್ನು ನಿರ್ದೇಶಕರು ನೈಜವಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರ ನೋಡುವವರುಗೆ ತಮ್ಮ ಬಾಲ್ಯದ ಆಟಪಾಠಗಳು ನೆನಪಾಗಿಸುವಂತ ದೃಶ್ಯಗಳು ಚಿತ್ರದಲ್ಲಿದೆ.

ಜಾತೀಯತೆ ಮೇಲು, ಕೀಳು ಭಾವನೆಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಬಾರದು ಎಂಬುದನ್ನು ಬಹಳ ನಾಜೂಕಾಗಿ ಹೇಳಿದ್ದಾರೆ.
ಸರ್ಕಾರಿ ಶಾಲೆಗಳು ಮುಚ್ಚುತ್ತುರುವುದು ಹೊಸದೇನಲ್ಲ ಹಾಗೆಯೇ ಅದರ ಕುರಿತು ಸಿನಿಮಾಗಳು ಬರುತ್ತಿರುವುದು ಕೂಡ ಹೊಸದೇನಲ್ಲ. ಎನ್ನಬಹುದು.
ಆದರೆ ಇಲ್ಲಿ ವಿಷಯ ಹಳೆಯದಾದರು ಹೊಸದಾಗಿ ಹೇಳಿದ್ದಾರೆ.
ರಾಮ-ಹನುಮ ಇಬ್ಬರು ಗೆಳೆಯರು ಯಾವುದೇ ವಿಷಯವಾದರೂ, ಯಾವುದೇ ಸಂದರ್ಭವಾದರು ಒಬ್ಬರಿಗೊಬ್ಬರು ಹೆಗಲುಕೊಟ್ಟು ಜೊತೆ ನಿಲ್ಲುವಂತ ಸ್ನೇಹಿತರು.
ಇವರಿಬ್ಬರು ಗಾಳೀಪಟ ಹಾರುಸುವಲ್ಲಿ ನಿಸ್ಸೀಮರು. ಇವರು ಗಾಳೀಪಟ ಆಗಸದಲ್ಲಿ ಹಾರುಸಲು ನಿಂತರೇ ಊರಿನ ಹುಡುಗರ ಯಾವ ಗಾಳೀಪಟಕ್ಕೂ ಉಳಿಗಾಲವಿಲ್ಲ.
ರಾಮ ಮೇಲು ಜಾತಿಯ ಯಜಮಾನನ ಮಗನಾಗಿ ಖಾಸಗಿ ಶಾಲೆಗೆ ಹೋದರು, ಅವನಿಗಿಂತ ಕೆಳವರ್ಗದ, ಗಾಳಿಪಟ ಮಾಡಿ ಮಾರವವನ ಮಗನಾದ, ಸರ್ಕಾರಿ ಶಾಲೆಗೆ ಹೋಗುವ ಹನುಮನ ಜೊತೆ ಗೆಳೆತನ.
ಈ ಇಬ್ಬರೂ ಹುಡುಗರು ಬಹಳ ಚನ್ನಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ, ಹಾಗೆಯೇ ಚಿತ್ರದ ಎಲ್ಲಾ ಪಾತ್ರಗಳು ನೈಜವಾಗಿ ಮೂಡಿಬಂದಿವೆ.
ಅದೊಂದು ದಿನ ಸುರಿದ ಜೋರು ಮಳೆಯಿಂದ ಸರ್ಕಾರಿ ಶಾಲೆ ಕುಸಿದು ಬೀಳುತ್ತದೆ. ಅಲ್ಲಿಂದ ಎಳೆ ಮನಸ್ಸುಗಳ ಮೇಲೆ ಆತಂಕದ ಛಾಯೆ ಮೂಡುತ್ತದೆ.
ಶಾಲೆಯ ಮೇಸ್ಟ್ರು ಊರ ಯಜಮಾನನ ಸಹಾಯದಿಂದ ಸರಿಮಾಡಿಸಲು ಪ್ರಯತ್ನ ಪಟ್ಟರೆ ಯಾವುದೇ ಪ್ರಯೋಜನ ವಾಗುವುದಿಲ್ಲ. ಹನುಮಾನ ಅಪ್ಪ ಅಮ್ಮ ಊರು ಬಿಟ್ಟು ಬೆಂಗಳೂರಿಗೆ ಹೋಗಲು ತೀರ್ಮಾನಿಸುತ್ತಾರೆ ಊರ ಯಜಮಾನ ರಾಮನ ತಂದೆ, ತಾಯಿ ಅವರಿಗೆ ಬುದ್ದಿ ಹೇಳಿ ಊರು ಬಿಡದಿರಲು ಮನವಿ ಮಾಡುತ್ತಾರೆ ಆದರೆ ಯಾವುದೇ ಪ್ರಯೋಜನ ವಾಗುವುದಿಲ್ಲ.
ಜೀವದ ಗೆಳೆಯರಾದ ರಾಮ, ಹನುಮ ಇಬ್ಬರು ಕಣ್ಣೀರುಡುತ್ತಾರೆ. ಒಬ್ಬರನೊಬ್ಬರು ಬಿಟ್ಟು ದೂರವಾಗ ಬೇಕಲ್ಲ ಎಂದು ಚಡಪಡಿಸುತ್ತಾರೆ. ಮಕ್ಕಳ ಮನಸ್ಸು ಗಾಳೀಪಟದಂತೆ ತೂರಾಡುತ್ತದೆ.
ಅಷ್ಟರಲ್ಲಿ ರಾಮ ಪತ್ರಿಕೆಯ ಜಾಹಿರಾತನ್ನು ನೋಡುತ್ತಾನೆ ಅದು ಅಹಮದಾಬಾದಿನಲ್ಲಿ ಗಾಳೀಪಟ ಹಾರಿಸುವ ಸ್ಪರ್ಧೆ. ಅದನ್ನು ನೋಡಿದ ಇಬ್ಬರಲ್ಲೂ ಹಿಸ ಬೆಳಕೊಂದು ಮೂಡುತ್ತದೆ.
ಮನೆಯವರಿಗೆ ಹೇಳದೆ ಕೇಳದೆ ರಾಮ ಮತ್ತು ಹನುಮ ಊರು ಬಿಟ್ಟು ಮೊದಲು ಬೆಂಗಳೂರಿಗೆ ಬಂದು ಸೇರುತ್ತಾರೆ ಬೆಂಗಳೂರೆಂಬ ಮಾಯಾನಗರದ ಬಣ್ಣದ ಜಗತ್ತನ್ನು ನೋಡಿ ನಿಬ್ಬೆರಗಾಗುತ್ತಾರೆ. ಅಲ್ಲಿ ಒಬ್ಬ ಸಾಹಿತಿಯ ಪರಿಚಯವಾಗಿ ಅವರು ಇವರ ಗಾಳೀಪಟ ಹಾರುಸುವ ಸ್ಪರ್ಧೆಯ ಕನಸ್ಸಿಗೆ ದಾರಿ ತೋರುತ್ತಾರೆ.
ಈ ಹುಡುಗರು ಸ್ಪರ್ಧೆಯಲ್ಲಿ ಗೆಲ್ಲುತ್ತಾರಾ, ಗೆದ್ದು ಊರಿನ ಶಾಲೆಯನ್ನು ಕಟ್ಟಿಸುತ್ತಾರಾ,
ಊರು ಬಿಟ್ಟ ಈ ಹುಡುಗರ ಪಾಡೇನು, ಮಕ್ಕಳನ್ನು ಕಳೆದು ಕೊಂಡಿರುವ ತಾಂದೆ ತಾಯಿಯರ ಪಾಡೇನು ಈ ಎಲ್ಲಾ ಪ್ರಶ್ನೆಗಳಿಗೆ ಸಿನಿಮಾ ನೋಡಬೇಕಾಗುತ್ತದೆ.
ನಿರ್ದೇಶಕ ವಿರೇನ್ ಸಾಗರ ಭಗಾಡೆ ಇಂದಿನ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಬೆಳಕು ಚಲ್ಲಿದ್ದಾರೆ. ಹಾಗೆಯೇ ಗ್ರಾಮೀಣ ಬದುಕಿನ ಜೊತೆಗೆ ಮರೆತು ಹೋದ ಮಕ್ಕಳ ಬಾಲ್ಯದ ಆಟ ಪಾಠಗಳನ್ನು ಚಿತ್ರಿಸಿ, ಚಿತ್ರ ನೋಡುಗರಿಗೆ ತಮ್ಮ ಬಾಲ್ಯದ ದಿನಗಳನ್ನು ನೆನಪಿಸುತ್ತಾರೆ.
ಮಂಜುನಾಥ್ BS. ಮತ್ತು ರಜನಿಕಾಂತ್ ರಾವ್ ದಳವಿ ಸಾಮಾಜಿಕ ಜವಾಬ್ಧಾರಿಯಿಂದ ಒಂದು ಅರ್ಥಪೂರ್ಣ ಕಾಳಜಿಯ ಚಿತ್ರವನ್ನು ನಿರ್ಮಿಸಿದ್ದಾರೆ.
ಹಿರಿಯ ಛಾಯಾಗ್ರಾಹಕ ಅಶೋಕ್ ಕಶ್ಯಪ್ ರವರು
ಚಿತ್ರದ ಛಾಯಾಗ್ರಹಣವನ್ನು ಸುಂದರ ಪರಿಸರವನ್ನು ಯತಾವತ್ತಾಗಿ ಪ್ರೇಕ್ಷಕರಿಗೆ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಗೇ ಅನೀಶ್ ಚೆರಿಯನ್ ಸಂಗೀತ ಕೂಡ ಕಥೆಗೆ ತಕ್ಕಂತೆ ಸಾಥ್ ನೀಡಿದೆ ಎನ್ನಬಹುದು.
ಇಂದಿನ ಕಮರ್ಷಿಯಲ್ ಚಿತ್ರಗಳ ಭರಾಟೆಯಲ್ಲಿ ಒಂದು ಸಾಮಾಜಿಕ ಕಾಳಜಿಯುಳ್ಳ, ಎಳೆ ಮಕ್ಕಳ ಕನಸ್ಸಿನ ಚಿತ್ತಾರಗಳ ಚಿತ್ರ ಕೈಟ್ ಬರ್ದರ್ಸ್ ಚಿತ್ರ ಇದೇ ಶುಕ್ರವಾರ ನವಂಬರ್ 14ರಂದು ಮಕ್ಕಳ ದಿನಾಚರಣೆಯ ಅಂಗವಾಗಿ, ಮಕ್ಕಳಿಂದ, ಮಕ್ಕಳಿಗಾಗಿ ತೆರೆಗೆ ಬರಲಿದೆ. ಇಂತಹ ಚಿತ್ರಗಳು ಗೆದ್ದರೆ ನಿಜ ಬದುಕಿನ ಕಥೆಯ ಚಿತ್ರಗಳು ಮತ್ತಷ್ಟು ಮನಸ್ಸಿಗೆ ಹಿತವೆನಿಸುವ ಚಿತ್ರಗಳು ಬರುವಲ್ಲಿ ಸಂಶಯವಿಲ್ಲ.











