ಕನ್ನಡ ಚಿತ್ರರಂಗದ ಹಿರಿಯ ಲೆಜೆಂಡರಿ ನಿರ್ದೇಶಕ ಡಾ,, ಸಿದ್ಧಲಿಂಗಯ್ಯ ರವರ ಹೆಸರು ರಾಜಾಜಿನಗರದ ರಸ್ತೆಗೆ ಇಡಲಾಗಿದೆ.
ರಾಜಾಜಿನಗರದ ಆರನೇ ಬ್ಲಾಕ್ ನಲ್ಲಿ ಚಿತ್ರರಂಗದ ಪರ್ವತಗಳೆರಡರ ಸಂಗಮ..
ಸಾಮಾಜಿಕ ಕಳಕಳಿ ಮತ್ತು ಉತ್ತಮ ಸಂದೇಶಗಳಿರುವ ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯು ಹೀಗೆ ಸುಮಾರು 24 ಚಲನಚಿತ್ರಗಳನ್ನು ನಿರ್ದೇಶಿಸಿರುವ ಹೆಸರಾಂತ, ಧೀಮಂತ ಚಲನಚಿತ್ರ ನಿರ್ದೇಶಕರಾದ
ಡಾ. ಸಿದ್ದಲಿಂಗಯ್ಯನವರ ಹೆಸರನ್ನು ರಾಜಾಜಿನಗರದ 6 ನೇ ಬ್ಲಾಕ್ ರಸ್ತೆಯಿಂದ ಹಳೆ ಪೋಲಿಸ್ ಠಾಣೆಯವರೆಗೆ ಡಾ. ಸಿದ್ದಲಿಂಗಯ್ಯರಸ್ತೆ ಎಂದು ಹೆಸರನ್ನಿಟ್ಟು ವಿಜಯನಗರ ವಿಧಾನ ಸಭಾ ಸದಸ್ಯರಾದ M ಕೃಷ್ಣಪ್ಪನವರು ಹಾಗೂ ನೆ.ಲ. ನರೇಂದ್ರಬಾಬು ರವರು ಇಂದು ಕಾರ್ಯಕ್ರಮವನ್ನು ಉದ್ಘಾಟಿಸುವುದರೊಂದಿಗೆ ಯಶಸ್ವಿಯಾಗಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಚಲನ ಚಿತ್ರ ವಾಣಿಜ್ಯಮಂಡಳಿಯ ಮಾಜಿ ಅಧ್ಯಕ್ಷರುಗಳಾದ ಸಾ.ರಾ. ಗೋವಿಂದು, ಹಾಗೂ ಬಾಮಾ ಹರೀಶ್, N.M. ಸುರೇಶ್ ಉಪಸ್ಥಿತರಿದ್ದರು.











