ಉಸಿರು ಚಿತ್ರ ವಿಮರ್ಶೆ
ಚಿತ್ರ ವಿಮರ್ಶೆ
ಚಿತ್ರ – ಉಸಿರು
ನಿರ್ಮಾಪಕರು – ಲಕ್ಷ್ಮೀ ಹರೀಶ್
ನಿರ್ದೇಶನ – ಪ್ರಭಾಕರ್
ಛಾಯಾಗ್ರಹಣ – ಮೋಹನ್ ರಾಮ್
ಸಂಗೀತ – ನಾರಾಯಣ್
Rating – 2.5/5
ವಿಮರ್ಶೆ – ಮಂಜುರಾಜ್ ಸೂರ್ಯ
ಕಲಾವಿದರು – ತಿಲಕ್, ಪ್ರಿಯಾ ಹೆಗ್ಗಡೆ, ಬಲ ರಾಜವಾಡಿ, ಅಪೂರ್ವ ನಾಗರಾಜ್, ರಾಘು ರಾಮನಕೊಪ್ಪ, ಸಂತೋಷ್ ನಂದಿವಾಡ ಮುಂತಾದವರು.
ಒಂದು ಸಿನಿಮಾ ನಿರ್ಮಾಣ ವಾಗಬೇಕಾದರೆ ಹಣ ಹೂಡುವ ನಿರ್ಮಾಪಕ ಬಹಳ ಮುಖ್ಯವಾಗುತ್ತಾರೆ.
ಹಾಗೆಯೇ ನಿರ್ಮಾಪಕನನ್ನು ಉಳಿಸಿಕೊಳ್ಳುವುದು ಕೂಡ ಒಬ್ಬ ನಿರ್ದೇಶಕನ ಕರ್ತವ್ಯ.
ಈ ವಾರ ತೆರೆ ಕಂಡ ಉಸಿರು ಚಿತ್ರ ಕೆಲವೊಮ್ಮೆ ಉಸಿರು ಬಿಗಿ ಹಿಡಿದು ನೋಡಬೇಕಾಗುತ್ತದೆ.

ಟೈಟಲ್ಲೇ ಹೇಳುವಂತೆ ಪ್ರತೀಯೊಂದು ಉಸಿರಿಗೆ ಮೂಲ ಒಂದು ಹೆಣ್ಣಿನ ತಾಯ್ತನ.
ತಾಯಿ ತನ್ನ ಗರ್ಭಗುಡಿಯಲ್ಲಿ ಮಗುವಿಗೆ ಜನ್ಮ ನೀಡಿ ಜಗತ್ತಿನ ಜೀವರಾಶಿಗೆ ಕಾರಣವಾಗುತ್ತಾಳೆ.
ಅಂತಹ ತಾಯ್ತನದ ತುಟ್ಟ ತುದಿಯಲ್ಲಿರುವ ಗರ್ಭವತಿಯರು ನಿಗೂಡವಾಗಿ ಕೊಲೆಯಾಗುತ್ತಾರೆ. ಆ ಕೊಲೆ ಆಗುವುದು ಯಾಕೆ, ಕೊಲೆ ಮಾಡುವವರು ಯಾರು ಅನ್ನುವುದು ನಿಗೂಡ.
ಆ ನಿಗೂಡದ ಬೆನ್ನತ್ತ ಬೇಕಿದ್ದ ಪೋಲೀಸ್ ಅಧಿಕಾರಿ ತುಂಬಾ ಅಸಡ್ಡೆ ಮತ್ತು ಬೇಜವಾಬ್ಧಾರಿ ಯಿಂದ ನಡೆದುಕೊಳ್ಳುತ್ತಾನೆ. ಯಾವಾಗ ತನ್ನ ಬುಡಕ್ಕೆ ಬರುತ್ತದೋ ಆಗ ಎಚ್ಚೆತ್ತುಕೊಳ್ಳುತ್ತಾನೆ. ಆತನ ಹೆಂಡತಿಯೂ ಗರ್ಭವತಿ ಅವಳ ಹಿಂದೆ ನಿಗೂಡ ವ್ಯಕ್ತಿಯ ಬೆಳಕು ಕತ್ತಲೆಯಾಟ ಶುರುವಾಗುತ್ತದೆ. ಅವಳನ್ನು ಅಪಹರಣ ಮಾಡಲು , ಅವಳನ್ನು ಅಂತ್ಯಗೊಳಿಸಲು ಕೆಲವು ವ್ಯಕ್ತಿಗಳು ಮುಗಿಬೀಳುತ್ತಾರೆ. ಅದನ್ನು ತಪ್ಪಿಸಲು ಪ್ರತೀಬಾರಿ ಪೋಲೀಸ್ ಅಧಿಕಾರಿ ಹಾಜರಾಗುತ್ತಾನೆ. ಸಾರ್ವಜನಿಕರ ಸೇವೆಗಿಂತ ಅವನ್ನು ತನ್ನ ಹೆಂಡತಿಯ ರಕ್ಷಣೆಗೆ ತನ್ನ ಅಧಿಕಾರ ಮುಡಿಪಾಗಿಡುತ್ತಾನೆ. 10 ವರ್ಷಗಳಿಂದ ಕೊಲೆಯಾದ ಗರ್ಭಿಣಿಯರ ಪೈಲ್ ಗಳನ್ನು ದೂಳು ಕೊಡವಿ ಕೈಗೆತ್ತಿಕೊಳ್ಳುತ್ತಾನೆ.

ಮತ್ತೊಬ್ಬ ನಟ ಮತ್ತೊಂದು ತಿರುವಿನಲ್ಲಿ ಬೇರೆಯದೇ ಆಟ ಅಡಲು ಶುರು ಮಾಡುತ್ತಾನೆ. ಮತ್ತೊಬ್ಬ ಸೈಕೋ ಕಿಲ್ಲರ್ ನ ವಿಕೃತಿ ತೆರೆ ಮೇಲೆ ವಿಜ್ರಂಭಿಸಿದೆ. ಎಲ್ಲಾ ನಿಗೂಡ ಅಂದುಕೊಂಡರೆ ಅದು ತಪ್ಪಾಗುತ್ತದೆ. ನಿರ್ದೇಶಕ ಯಾವಾಗ ಯಾವ ಸನ್ನಿವೇಶಗಳಿಗೆ ಪ್ರಾಮುಖ್ಯತೆ ಕೊಡಬೇಕಿತ್ತೋ ಅಲ್ಲಿ ಎಡವಿದ್ದಾರೆ ಅನ್ನಿಸುತ್ತದೆ. ಇದು ಸರಿಯಾಗಿ ಕಥೆಯ ನಿರೂಪಣೆ ಮಾಡಿದ್ದರೆ ಇದೊಂದು ಒಳ್ಳೆಯ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ವಾಗುತಿತ್ತು.
ನಿರ್ದೇಶಕರು ಚಿತ್ರದ ಅಂತಿಮ ದೃಶ್ಯವನ್ನು ಬಹಳ ಘನ ಗೋರವಾಗಿ ಚಿತ್ರಿಸಿದ್ದಾರೆ.
ಒಂದು ರೀತಿಯಲ್ಲಿ ವಿಕೃತಿ ಅತಿರೇಕದ ಎಲ್ಲೆ ಮೀರಿದೆ ಅನ್ನಿಸುತ್ತದೆ.

ಚಿಕ್ಕ ವಯಸ್ಸಿನಲ್ಲಿ ಗರ್ಭಿಣಿಯಾದ ತನ್ನ ತಾಯಿಯ ಕೊಲೆಯಾಗುತ್ತದೆ. ಕೊಲೆ ಮಾಡಿದವನನ್ನು ಮೀಸೆ ಮೂಡದ ಸಣ್ಣ ಹುಡುಗ ಹೊಡೆಯುತ್ತಾನೆ. ಅಲ್ಲಿಂದ ಬಾಲಾಪರಾಧಿಯಾದ ಆ ಒಬ್ಬ ಪೋಲೀಸ್ ಅಧಿಕಾರಿಯ ಸಹಾಯದಿಂದ ಬೇರೆಯದೇ ದಾರಿ ಕಂಡುಕೊಳ್ಳುತ್ತಾನೆ. ಚಿಕ್ಕ ವಯಸ್ಸಿನಿಂದ ಪೋಲೀಸ್ ಅಧಿಕಾರಿಯ ಮಗಳನ್ನು ಪ್ರೀತಿಸುತ್ತಾನೆ, ಆ ಪ್ರೀತಿಗೆ ಪೇಪರ್ ದೋಣಿ ಸಾಕ್ಷಿಯಾಗಿ ನಿಲ್ಲುತ್ತದೆ.
ಪ್ರಿಯಾ ಹೆಗ್ಗಡೆ ಎರಡು ಪಾತ್ರಗಳನ್ನು ನಿಭಾಯಿಸಿದ್ದಾರೆ. ಅದರಲ್ಲೂ ಮಗುವಿಗೆ ಜನ್ಮ ನೀಡಲು ಕೆಲವೇ ದಿನಗಳು ಇದ್ದರೂ ಆಕೆಗೆ ಗರ್ಭಿಣಿಗೆ ಇರಬೇಕಿದ್ದ ಅಭಿನಯವನ್ನು ಮೀರಿಸಿಬಿಟ್ಟಿದ್ದಾರೆ. ಕೆಲವೊಮ್ಮೆ ಆಕೆ ಗರ್ಭಿಣಿ ಹೌದೋ ಅಲ್ಲವೋ ಎನ್ನುವ ಅನುಮಾನ ಪ್ರೇಕ್ಷಕರಲ್ಲಿ ಮೂಡುತ್ತದೆ.
ಒಬ್ಬ ಗರ್ಭವತಿಗೆ ಇರಬೇಕಿದ್ದ ಬಾಡಿ ಲಾಂಗ್ವೇಜ್ ಆಗಾಗ ಮಿಸ್ಸಾಗುತ್ತದೆ.
ಆದರೂ ನಿರ್ದೇಶಕರ ಜಾಣ್ಮೆ ಎಷ್ಟಿದೆಯೆಂದರೆ ಅಪಹರಣಕ್ಕೊಳಗಾದ ಒಬ್ಬ ಹೆಣ್ಣು ಇನ್ನೇನೂ ಮಗುವಿಗೆ ಜನ್ಮ ನೀಡಬೇಕು, ರಕ್ತ ಸ್ರಾವದಿಂದ ಅವಳು ಕಣ್ಣೀರಿಡುತ್ತಿರವಾಗ ಅವಳಿಗೆ ರೇಷ್ಮೇ ಸೀರೆ ಉಡಿಸಿ ಸಿಂಗರಿಸುತ್ತಾರೆ. ಇಂತಹ ದೃಶ್ಯ ನೋಡಲು ಮೈ ಜುಮ್ಮೆನ್ನಿಸುತ್ತದೆ.
ಸೀಮಂತಕ್ಕೆ ರೌಡಿಗಳಿಂದ ಹೆಜ್ಜೆ ಹಾಕಿಸಿ, ಎಣ್ಣೆ ಸಾಂಗ್ ಸೃಷ್ಟಿಸಿದ್ದಾರೆ.
ಈ ಚಿತ್ರದಲ್ಲಿ ತಿಲಕ್ ಪೋಲೀಸ್ ಅಧಿಕಾರಿಯಾಗಿ ಬಣ್ಣ ಹಚ್ಚಿದರೆ, ಪ್ರಿಯಾ ಹೆಗ್ಡೆ ಎರಡೆರಡು ಬಾರಿ ಗರ್ಭಿಣಿಯಾಗಿ ಪಾತ್ರವನ್ನು ನಿಭಾಯಿಸಿದ್ದಾರೆ, ಬಲ ರಾಜವಾಡಿ, ರಾಘು ರಾಮನಕೊಪ್ಪ ಖಾಕಿ ತೊಟ್ಟು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಸಂತೋಷ್ ನಂದಿವಾಡ, ಅಪೂರ್ವ ನಾಗರಾಜ್
ಚಿತ್ರದ ಪ್ರಮುಖ ಪಾತ್ರಕ್ಕೆ ಇನ್ನೂ ಒಗ್ಗಿಕೊಳ್ಳಬೇಕಿದೆ, ಆದರೂ ನಿರ್ದೇಶಕರ ಕಥೆಗೆ ನ್ಯಾಯ ಒದಗಿಸಿದ್ದಾರೆ.
ಮೋಹನ್ ರಾಮ್ ಛಾಯಾಗ್ರಹಣ ಕಣ್ಣಿಗೆ ಮುದ ನೀಡುತ್ತದೆ.
ಹಲವಾರು ಚಿತ್ರಕ್ಕೆ ಸಂಗೀತ ನೀಡಿದ್ದ ಗಣೇಶ್ ನಾರಾಯಣನ್ ಸಂಗೀತ ಈ ಚಿತ್ರದಲ್ಲಿ ಅಷ್ಟೇನೂ ಗಮನ ಸೆಳೆಯುವುದಿಲ್ಲ ಹಿನ್ನೆಲೆ ಸಂಗೀತ ಆಗಾಗ ಕರ್ಕಶ ಅನ್ನಿಸುತ್ತದೆ.
ಬಾಲಾಪರಾಧಿ ದೊಡ್ಡವನಾದ ಮೇಲೆ ಮುಂದೇನಾಗುತ್ತಾನೆ, ತನ್ನ ಪ್ರೀತಿಯನ್ನು ಹೇಗೆ ಮತ್ತೆ ಪಡೆಯುತ್ತಾನೆ, ಅವನ ತಾಯಿಯ ಸಾವಿನ ದ್ವೇಷವನ್ನು ಹೇಗೆ ಕಾಯ್ದುಕೊಳ್ಳುತ್ತಾನೆ, ಗರ್ಭಿಣಿಯರ ಕೊಲೆ ಯಾರು ಮಾಡುತ್ತಾರೆ ಎನ್ನುವ ತರ್ಕಕ್ಕೆ ನಿರ್ದೇಶಕ ಪ್ರಭಾಕರ್ ಮತ್ತೊಂದು ಭಾಗದಲ್ಲಿ ಹೇಳುತ್ತಾರಂತೆ. “ಉಸಿರು” ಚಿತ್ರದ ಎರಡನೇ ಭಾಗ ಬರುವ ವರೆಗೂ ಪ್ರೇಕ್ಷಕರು ಉಸಿರು ಬಿಗಿ ಹಿಡಿದು ಕಾಯಬೇಕಾಗುತ್ತದೆ.











