ಉದಯ Tvಯಲ್ಲಿ ಇಂದಿನಿಂದ ಮಾಂಗಲ್ಯ ಧಾರವಾಹಿ ಪ್ರಸಾರ.

ಕೆಲವು ದಿನಗಳಿಂದ ಸದ್ದು ಮಾಡುತ್ತಾ ಸುದ್ದಿಯಾಗುತ್ತಿರುವ ಉದಯ ಟಿವಿ ಹೊಸ ಧಾರವಾಹಿ ಮಾಂಗಲ್ಯ ವೀಕ್ಷಕರಿಗೆ ಉಣಬಡಿಸಲು ಸಜ್ಜಾಗಿದೆ. ದುರ್ಗಾಪುರದ ಬಡತನದಲ್ಲಿ ಬೆಳೆದ ಮಯೂರಿ, ಮನೆ ಮಗನಂತೆ ಶ್ರೀಮಂತ ಕುಟುಂಬದಲ್ಲಿ ಎಲ್ಲಾ ಜವಬ್ದಾರಿ ನಿಭಾಯಿಸುವಂತ ದಿಟ್ಟ ಹುಡುಗಿ. ಆ ಶ್ರೀಮಂತ ಮನೆಯ ಕುಲಪುತ್ರ ತಾರಾಕ್. ಅಮ್ಮನ ಅಹಂಕಾರದ ವರ್ತನೆಗಳು ಅವನಿಗೆ ಹಿಡಿಸುತ್ತಿರುವುದಿಲ್ಲ. ಕಾರಣಾಂತದಿಂದ ಮದ್ಯವ್ಯಸನಿಯಾಗಿರುತ್ತಾನೆ. ಒಳ್ಳೆ ಮನಸ್ಸಿನ ಕುಡುಕ ಒಂದು ಸಂದರ್ಭದಲ್ಲಿ ಅಮ್ಮನ ಅಹಂಕಾರವನ್ನು ಮುರಿಯಲು ಮಯೂರಿಗೆ ತಾಳಿ ಕಟ್ಟುತ್ತಾನೆ. ಅಲ್ಲಿಂದ ಆಕೆಯ ಜೀವನದ ಹೊಸ ಪಯಣ ಶುರುವಾಗುತ್ತದೆ.

ಗಾಂಧಾರಿ, ಲಕ್ಷಣ, ಶ್ರೀಗೌರಿ ಧಾರವಾಹಿಗಳಲ್ಲಿ ಹೆಸರು ಮಾಡಿರುವ ಬಿಗ್‌ಬಾಸ್‌ನ ಜಗನ್ ನಾಯಕನ ಪಾತ್ರ ನಿಭಾಯಿಸುವುದರ ಜತೆಗೆ ನಿರ್ದೇಶನ ಮತ್ತು ನಿರ್ಮಾಣ ಮಾಡುತ್ತಿದ್ದಾರೆ. ಅನುರೂಪ, ಗಿರಿಜಾ ಕಲ್ಯಾಣ, ಸರ್ವ ಮಂಗಳ ಮಾಂಗಲ್ಯೆ, ಸುಂದರಿ ಧಾರವಾಹಿಗಳು, ಹಾಗೂ ಸಂತು ಸ್ಟ್ರೈಟ್ ಫಾರ್ವಡ್, ಶ್ರೀಕಂಠ ಸಿನಿಮಾಗಲ್ಲಿ ನಟಿಸಿರುವ ಐಶ್ವರ್ಯ ಪಿಸ್ಸೆ ಇದರಲ್ಲಿ ಗಂಡನನ್ನು ಸರಿದಾರಿಗೆ ತರುವ ಪಾತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಜಾನ್ಸಿ, ಬಿ.ಎಂ.ವೆಂಕಟೇಶ್, ಇಂಚರ, ದಿಶಾ, ಹನುಮಂತು, ಜಯಬಾಲು, ಚಿತ್ರಾ, ರೂಪೇಶ್, ದಾಮಿನಿ ಮುಂತಾದವರು ಅಭಿನಯಿಸುತ್ತಿದ್ದಾರೆ.

ನವೀನ್ ಸೋಮನಹಳ್ಳಿ ಸಂಚಿಕೆ ನಿರ್ದೇಶನವಿದೆ. ಛಾಯಾಗ್ರಹಣ ಮಂಜು, ಸಂಕಲನ ಧನು ಅವರದಾಗಿದೆ. ಇಂದು ಮಂಗಳವಾರದಿಂದ ಸಂಜೆ 7 ಗಂಟೆಗೆ ನಂತರ ಪ್ರತಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 7 ಗಂಟೆಗೆ ಉದಯ ಟಿವಿದಲ್ಲಿ ಪ್ರಸಾರವಾಗಲಿದೆ

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor