ಇಂದಿನಿಂದ(26.9.25) ಮಧ್ಯಾಹ್ನ 12.29ಕ್ಕೆ ಕರ್ನಾಟಕದಾದ್ಯಂತ “ಕಾಂತಾರ ಅಧ್ಯಾಯ 1” ಚಿತ್ರದ ಬುಕ್ಕಿಂಗ್ ಆರಂಭ .

ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ, ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರ್ ಅವರು ನಿರ್ಮಿಸಿರುವ ಹಾಗೂ ರಿಷಬ್ ಶೆಟ್ಟಿ ಅವರ ನಟನೆ ಹಾಗೂ ನಿರ್ದೇಶನದ, ವಿಶ್ವವೇ ಎದುರು ನೋಡುತ್ತಿರುವ, ಬಹು ನಿರೀಕ್ಷಿತ “ಕಾಂತಾರ ಅಧ್ಯಾಯ 1” ಚಿತ್ರದ ಬುಕ್ಕಿಂಗ್(ಟಿಕೆಟ್) ಸೆಪ್ಟೆಂಬರ್ 26 ರ ಶುಕ್ರವಾರ ಮಧ್ಯಾಹ್ನ 12.29 ಕ್ಕೆ ಕರ್ನಾಟಕದಾದ್ಯಂತ ಆರಂಭವಾಗಲಿದೆ ಎಂದು ಹೊಂಬಾಳೆ ಫಿಲಂಸ್ ಸಂಸ್ಥೆ ಮಾಹಿತಿ ನೀಡಿದೆ.
“ಕಾಂತಾರ ಆಧ್ಯಾಯ ೧” ಚಿತ್ರವು ಅಕ್ಟೋಬರ್ 2 ರಂದು ಭಾರತದಾದ್ಯಂತ 7000 ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಕನ್ನಡ ಸೇರಿದಂತೆ ಸಪ್ತ ಭಾಷೆಗಳಲ್ಲಿ ಭಾರತ ಹಾಗೂ ಭಾರತದಾಚೆಗೂ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor