ಅದ್ವಿತಿ ಹಿಂದೆ `ಲವ್ ಯು’ ಹಾಡುತ್ತಾ ಓಡಾಡಿದ ರೂಪೇಶ್ ಶೆಟ್ಟಿ

ಕರಾವಳಿ ಭಾಗದ ಪ್ರತಿಭೆ ಹಾಗೂ ಬಿಗ್ಬಾಸ್ ಖ್ಯಾತಿಯ ರಾಕ್ಸ್ಟಾರ್ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ತುಳು ಹಾಗೂ ಕನ್ನಡದ `ಜೈ’ ಸಿನಿಮಾದ ಲವ್ ಎಂಬ ಹಾಡು ರಿಲೀಸ್ ಆಗಿದೆ. ಇದು ಪ್ಯೂರ್ ಲವ್ ಸಾಂಗ್ ಆಗಿರೋದ್ರಿಂದ ನಿಜವಾದ ಪ್ರೇಮಿಗಳು ಹಾಡನ್ನ ಬಿಡುಗಡೆ ಮಾಡಿದ್ದಾರೆ. ಗುರುಕಿರಣ್ ದಂಪತಿ, ನಿರಂಜನ್ ದೇಶಪಾಂಡೆ ದಂಪತಿ, ವಿನಯ್ ಗೌಡ ದಂಪತಿ, ರೂಪೇಶ್ ರಾಜಣ್ಣ ದಂಪತಿ, ಆರ್ಯವರ್ಧನ್ ಗುರೂಜಿ ದಂಪತಿಯಿಂದ ಹಾಡು ರಿಲೀಸ್ ಆಗಿದೆ.

ಲವ್ ಯೂ ಅನ್ನೋ ಹಾಡನ್ನ ಫೈನಲ್ ಮಾಡುವುದಕ್ಕೇನೆ ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. 5 ವರ್ಷನ್ ಕೇಳಿದ ಮೇಲೂ 6ನೇ ವರ್ಷನ್ ಫೈನಲ್ ಮಾಡಲಾಗಿತ್ತು. ಮತ್ತೆ ಮತ್ತೆ ಕೇಳಬೇಕು ಎನ್ನುವಂತ ಫೀಲ್ ಬರಬೇಕು ಎಂಬ ಕಾರಣಕ್ಕೆ ಹಾಡಿನ ಮೇಲೆ ಶ್ರಮ ಹಾಕಲಾಗಿದೆ. ಇಷ್ಟು ಅದ್ಭುತವಾದ ಸಾಹಿತ್ಯಕ್ಕೆ ಧ್ವನಿಯೂ ಅಷ್ಟೇ ಚೆನ್ನಾಗಿ ಕೂಡಿದಾಗ ಹಾಡು ಮತ್ತಷ್ಟು ಖೂಷಿ ಕೊಡುತ್ತದೆ. ಹೀಗಾಗಿ ಹಾಡುವವರ ಹುಡುಕಾಟ ನಡೆಯುತ್ತಿದ್ದಾಗ ರಜತ್ ಹೆಗ್ಡೆ ವಾಯ್ಸ್ ಕಿವಿಗೆ ಬಿದ್ದಿತ್ತು. ಇವರ ಧ್ವನಿ ಪಕ್ಕಾ ಮ್ಯಾಚ್ ಆಗಿತ್ತು. ಹೀಗಾಗಿ ರಜತ್ ಹೆಗ್ಡೆ ಲವ್ ಯೂ ಹಾಡನ್ನ ಹಾಡಿದ್ದಾರೆ.

ಇನ್ನು ಜೈ ಸಿನಿಮಾ ತುಳು ಮತ್ತು ಕನ್ನಡ ಎರಡು ಭಾಷೆಯಲ್ಲೂ ರಿಲೀಸ್ ಆಗ್ತಾ ಇದ್ದು, ತುಳು ಭಾಷೆಯಲ್ಲಿ ರೂಪೇಶ್ ಶೆಟ್ಟಿ ಅವರೇ ಸಾಹಿತ್ಯ ಬರೆದಿದ್ದು, ಕನ್ನಡಕ್ಕೆ ಕೀರ್ತನ್ ಬಂಡಾರಿ ಅವರು ಬರೆದಿದ್ದಾರೆ. ಹಾಗಂತ ತರ್ಜುಮೆ ಮಾಡಿಲ್ಲ, ಹಾಡಿನ ವಿಚಾರಧಾರೆಯನ್ನು ರೆಫರೆನ್ಸ್ ಇಟ್ಟುಕೊಂಡು, ಆ ಭಾವನೆ, ಆ ಮೀನಿಂಗ್ ಎಲ್ಲವನ್ನು ಅಚ್ಚುಕಟ್ಟಾಗಿ ಕಟ್ಟುಕೊಟ್ಟಿದ್ದಾರೆ. ತುಳು ಭಾಷೆಯಲ್ಲಿ ರೂಪೇಶ್ ಶೆಟ್ಟಿ ಅವರು ಕೂಡ ಈ ಹಾಡನ್ನ ಮನಸ್ಸಿಟ್ಟು ಬರೆದಿದ್ದಾರೆ. ಆದ್ರೆ ಬಹಳ ಕಡಿಮೆ ಸಮಯದಲ್ಲಿ ಅದ್ಭುತವಾದ ಪದಗಳು ಬಂದಿದ್ದೇ ರೋಚಕ. ಒಂದೇ ಒಂದು ದಿನದಲ್ಲಿ ಲವ್ ಯೂ ಹಾಡನ್ನು ಬರೆದಿದ್ದಾರೆ.

ಇನ್ನು ರೂಪೇಶ್ ಶೆಟ್ಟಿಗೆ ನಾಯಕಿಯಾಗಿ ನಟಿ ಅದ್ವಿತಿ ಶೆಟ್ಟಿ ತೆರೆಹಂಚಿಕೊಂಡಿದ್ದಾರೆ. ಈ ಸಿನಿಮಾ ಅದ್ವಿತಿಗೆ ಮೊದಲ ತುಳು ಸಿನಿಮಾವಾಗಿದ್ದು, ಅವರ ಮಾತೃಭಾಷೆ ತುಳು ಆಗಿದೆ ಎಂದಿದ್ದಾರೆ. ಈ ಸಿನಿಮಾದಲ್ಲಿ ಜರ್ನಲಿಸ್ಟ್ ಪಾತ್ರದಲ್ಲಿ ನಟಿ ಅದ್ವಿತಿ ಶೆಟ್ಟಿ ನಟಿಸಿದ್ದಾರಂತೆ. ಆರ್.ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ ಚಿತ್ರಕ್ಕೆ ಬಂಡವಾಳ ಹೂಡಿದ್ದು, ದೀಕ್ಷಿತ್ ಸಹ ನಿರ್ಮಾಪಕರಾಗಿದ್ದಾರೆ.

ಒಂದು ಹಾಡನ್ನ ಸ್ಪೆಷಲ್ ಆಗಿ ರಿಲೀಸ್ ಮಾಡಬೇಕು ಅಂತ ಅಂದುಕೊಂಡಿದ್ದೆ. ನಾನು ಯಾರನ್ನೆಲ್ಲ ಕರೆದಿದ್ದೆ ಅವರೆಲ್ಲ ಬಂದು ಇವೆಂಟ್ ಅದ್ಭುತವಾಗಿ ಬರುವಂತೆ ಮಾಡುವ ಮೂಲಕ ಶುಭ ಹಾರೈಸಿದರು. ನನ್ನ ಕಾನ್ಸೆಪ್ಟ್ ಇದ್ದದ್ದೇ ರಿಯಲ್ ಲೈಫ್ ನಲ್ಲಿ ಲವ್ ಗೆ ಉದಾಹರಣೆಯಾಗಿದ್ದವರಿಂದ ಹಾಡನ್ನು ರಿಲೀಸ್ ಮಾಡಬೇಕು ಅನ್ನೋ ಆಸೆ ಇತ್ತು. ಅದು ನೆರವೇರಿದೆ. ಹಾಡು ಕೂಡ ಎಲ್ಲರಿಗೂ ತುಂಬಾ ಇಷ್ಟವಾಗಿದೆ.
ರೂಪೇಶ್ ಶೆಟ್ಟಿ, ನಟ, ನಿರ್ದೇಶಕ

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor