the Rise of Ashoka movie review. ಅಶೋಕ ಚಿತ್ರದ ವಿಮರ್ಶೆ – “ಕೂದಲ ಎಳೆಯೊಳಗೊಂದು ಮಾಫಿಯಾ”

ಚಿತ್ರ –  The Rise of  ಅಶೋಕ
ನಿರ್ಮಾಪಕರು – ವರ್ಧನ್ ಹರಿ, ಸತೀಶ್ ನೀನಾಸಮ್
ನಿರ್ದೇಶನ –  ವಿನೋದ್ ವಿ. ದೋಂಡಲೆ
ಛಾಯಾಗ್ರಹಣ – ಲವಿತ್
ಸಂಗೀತ – ಪೂರ್ಣಚಂದ್ರ ತೇಜಸ್ವಿ
ಸಂಕಲನ –  ಮನು ಶೇದ್ಗರ್

Rating -3/5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು : ಸತೀಶ್ ನೀನಾಸಮ್, ಸಪ್ತಮಿಗೌಡ, ಬಿ. ಸುರೇಶ್,  ರವಿಶಂಕರ್, ಗೋಪಾಲ್ ಕೃಷ್ಣ ದೇಶಪಾಂಡೆ, ಯಶ್ ಶೆಟ್ಟಿ, ಸಂಪತ್ ಮೈತ್ರೆಯಾ, ಮುಂತಾದವರು.

ಕೂದಲ ಬುಡದಲ್ಲಿ ಅಡಗಿದ್ದ ಘನಗೋರ ಸತ್ಯವನ್ನು ಅಶೋಕ ಚಿತ್ರ ಹೊರಗೆಳದಿದೆ.
1971ರಲ್ಲಿ ನಂಜನಗೂಡಿನಲ್ಲಿ ನಡೆದ ಒಂದು ಸತ್ಯ ಘಟನೆಯನ್ನು ಆದರಿಸಿ ಅಶೋಕ ಚಿತ್ರ ನಿರ್ಮಾಣವಾಗಿದೆ.


ಯಾವುದೇ ಊರಿನಲ್ಲಿ ಒಂದು ಪುಣ್ಯ ಕ್ಷೇತ್ರ ಇದೆ ಅಂದ ಮೇಲೆ ಅಲ್ಲಿ ಪೂಜೆ ಪುನಸ್ಕಾರ, ಆಚಾರ ವಿಚಾರಗಖ ಹರಕೆಗಳು ಇರುತ್ತವೆ. ಕೆಲವರು ಹುಂಡಿಗೆ ಹಣ ಹಾಕುತ್ತಾರೆ, ಇನ್ನು ಕೆಲವರು ದೇವರಿಗೆ ಒಡವೆ, ವಸ್ತ್ರ ನೀಡಿ ಕೃತಾರ್ಥರಾಗುತ್ತಾರೆ. ಹಾಗೆಯೇ ಇನ್ನೂ ಕೆಲವರು ದೇವರಿಗೆ ಮುಡಿಕೊಟ್ಟು ಹರಕೆ ತೀರಿಸುತ್ತಾರೆ. ಈ ತಲೆ ಕೂದಲು ಮುಡಿಕೊಟ್ಟ ನಂತರ ಆ ಕೂದಲಿನ ಹಿಂದೆ ಒಂದು ದೊಡ್ಡ ಶಡ್ಯಂತರ ಇದೆ. ಅದರ ಹಿಂದೆ ಒಂದು ಮಾಫಿಯಾ ಇದೆ ಅನ್ನೋದು ಅದೆಷ್ಟೋ ಜನಕ್ಕೆ ತಿಳಿದೇ ಇಲ್ಲ. ಅದನ್ನು ಈ ಚಿತ್ರದ ಮೂಲಕ ನಿರ್ದೇಶಕ ವಿನೋದ್ ಜನರ ಮುಂದಿಟ್ಟಿದ್ದಾರೆ.

ಅಶೋಕ (ಸತೀಶ್ ನೀನಾಸಮ್) ಕ್ಷೌರಿಕ ಜನಾಂಗದ ಕುಟುಂಬದಲ್ಲಿ ಹುಟ್ಟಿದ್ದರು ಅವನ ತಂದೆ ಗಂಗಣ್ಣ (ಬಿ. ಸುರೇಶ್ ) ನಾಲ್ಕಾಣೆಗೆ ಕ್ಷೌರ ಮಾಡುವ (ಬಿ. ಸುರೇಶ್) ತನ್ನ ಮಗ ಒಬ್ಬ ಸರ್ಕಾರಿ ಅಧಿಕಾರಿಯಾಗಬೇಕೆಂದು ತನ್ನ ಕುಲ ಕಸುಬಿನ ಗಾಳಿಯೂ ಆತನ ಮೇಲೆ ಸೋಕದಂತೆ ಪಟ್ಟಣದಲ್ಲಿ ಕಷ್ಟ ಪಟ್ಟು, ಜನರ ಕೂದಲು ತೆಗೆಯುವ ಕಾಯಕದಲ್ಲಿ ಬಂದ ಹಣದಿಂದ ಓದಿಸುತ್ತಾರೆ.
ಓದು ಮುಗಿಸಿ ಊರಿಗೆ ಬಂದ ಅಶೋಕ ಇನ್ನೇನು ಕೆಲಸಕ್ಕೆ ಆರ್ಡರ್ ಬರಬೇಕು ಅಂತ ಕಾಯುತಿದ್ದಂತೆ ಆ ಊರಿನಲ್ಲಿ ನಡೆಯುತ್ತಿರುವ ತಮಿಳು ಮೂಲದ ಕುಟ್ಟಿ ಬಾಬ್ಜಿಯ ( ಸಂಪತ್ ಮೈತ್ರೇಯ)  ಅನ್ಯಾಯ, ಕ್ರೂರತೆ,  ಆ ಊರಿನ ದೇವಾಲಯದಲ್ಲಿ ನಡೆವ ಮುಡಿ ಕಾಣಿಕೆಯ ಕೂದಲ ಹಿಂದಿನ ರಕ್ತಪಾತ ನೋಡಿ ಅವನ ಮನಸ್ಸು ಕುದಿಯುತ್ತದೆ. ಆತನಿಗೆ ಸರ್ಕಾರಿ ಕೆಲಸದ ಆರ್ಡರ್ ಬಂದರೂ ಸಹ ಆತ ತನ್ನ ಜನರಿಗಾಗುವ ಅನ್ಯಾಯವನ್ನು ಸರಿ ಪಡಿಸಲು ಬೇರೆಯದೇ ಕಾರ್ಯಕ್ಕೆ ಕೈ ಹಾಕುತ್ತಾನೆ.


55 ವರ್ಷಗಳ ಹಿಂದೆ ನಡೆದಿದ್ದ ಈ ಘೋರ ಕೃತ್ಯ ಹೇಗಿರಬಹುದು,..? ಅಶೋಕ ಸರ್ಕಾರಿ ಅಧಿಕಾರಿ ಯಾಗಬೇಕಿದ್ದವನು ಏನಾಗುತ್ತಾನೆ..?
ಕೂದಲ ಹಿಂದಿನ ರಹಸ್ಯ ಏನು..? ತಾನು ಪ್ರೀತಿಸಿದ ಹುಡುಗಿಯನ್ನು ಮದುವೆ ಮಾಡಲು ಅವರ ಮನೆಯವರು ಒಪ್ಪದೇ ಇರುವ ಕಾರಣವಾದ್ರು ಏನು..? ಅಂತ ತಿಳಿಯ ಬೇಕಾದ್ರೆ ಈ ಚಿತ್ರ ನೋಡಲೇಬೇಕು.

ಈ ಚಿತ್ರದ ಕಥೆಯೇ ವಿಭಿನ್ನ ಮತ್ತು ಹೊಸತು.
ಇದು ಎಪ್ಪತ್ತರ ದಶಕದ ಕಥೆಯಾಗಿದ್ದು. ಆ ಕಾಲದ ಸನ್ನಿವೇಶಗಳನ್ನು ಚನ್ನಾಗಿ ಕಟ್ಟಿಕೊಟ್ಟಿದ್ದಾರೆ.

70ರ ದಶಕ. ಆವರತ್ತಿ ಎಂಬ ಗ್ರಾಮದಲ್ಲಿ ತಮಿಳು ಮೂಲದ
‘ಕುಟ್ಟಿಬಾಬ್ಜಿ'(ಸಂಪತ್ ಮೈತ್ರೇಯ) ಎಂಬಾತ ದೇವಸ್ಥಾನದಲ್ಲಿ ಹರಕೆಯಾಗಿ
ಕೊಡುವ ತಲೆಕೂದಲಿನ ವ್ಯಾಪಾರದ ದಂಧೆಯನ್ನು‌ ನಡೆಸುತ್ತಿರುತ್ತಾನೆ.



ಪದವಿ ಪಡೆದು ಊರಿಗೆ ಮರಳುವ ‘ಅಶೋಕ’ನಿಗೆ
‘ಕುಟ್ಟಿಬಾಬಿ’ಯ ದಬ್ಬಾಳಿಕೆ, ತನ್ನ ಸಮುದಾಯ ಎದುರಿಸುತ್ತಿರುವ
ಅಸ್ಪೃಶ್ಯತೆ, ದೌರ್ಜನ್ಯದ ಜೊತೆಗೆ ಸದ್ದಿಲ್ಲದೇ ಜೀವ ಕಳೆದುಕೊಳ್ಳುತ್ತಿರುವ ಅಮಾಯಕರ ಸಾವು ಆತನನ್ನು ದೃತಿಗೆಡಿಸುತ್ತದೆ.
ಇದರ ನಡುವೆ ಪಕ್ಕದ ಊರಿನ ‘ಅಂಬಿಕಾ’ಳ(ಸಪ್ತಮಿ
ಗೌಡ) ಜೊತೆ ಪ್ರೀತಿ ಅರಳುತ್ತದೆ. ಇನ್ನೇನು ಮನೆಯವರ ಆಸೆಯಂತೆ ಮದುವೆ ಆಗಬೇಕೆನ್ನುವಷ್ಟರಲ್ಲಿ ಕ್ರಾಂತಿಯ ಹಾದಿಯಲ್ಲಿ ‘ಅಶೋಕ’ ಹೆಜ್ಜೆ
ಇಟ್ಟಾಗ ಕಥೆ ಬೇರೆಯದೇ ರೀತಿಯಲ್ಲಿ ತೆರೆದುಕೊಳ್ಳುತ್ತದೆ.
ಮೊದಲ ಭಾಗದಲ್ಲಿ ಸ್ವಲ್ಪ ನಿಧಾನಗತಿಯಲ್ಲಿ ಕಥೆ ಸಾಗಿದರೂ ಅಶೋಕನ ಎಂಟ್ರಿ, ಅಪ್ಪನ ಕನಸು, ತಾನೂ ಇಷ್ಟಪಟ್ಟ ಹುಡುಗಿ, ಅಪ್ಪ ನೋಡಿದ ಹುಡುಗಿ ಎರಡರ ನಡುವಿನ ಗೊಂದಲ ಸೃಷ್ಠಿ, ಹಾಸ್ಯ, ಪ್ರೇಮಗೀತೆ ಕೂದಲು ರಕ್ಕಸನ ಒಂದೊಂದೆ ಮುಖದ ಅನಾವರಣದಿಂದ ಮೊದಲರ್ಧ ಸಾಗುತ್ತದೆ.
ದ್ವಿತಿಯಾರ್ಧದಲ್ಲಿ ಅಶೋಕನ ಕ್ರಾಂತಿಕಾರಿ ಹೆಜ್ಜೆಯೊಂದಿಗೆ ಚಿತ್ರದ ಕಥೆಯ ದಿಕ್ಕೆ ಬದಲಾಗುತ್ತದೆ. ತನ್ನ ಜನರಿಗಾಗಿ ಹೋರಾಡುವ, ಸಿಕ್ಕ ಸಿಕ್ಕ ದುಷ್ಟರನ್ನು ಸದೆ ಬಡೆಯುವ, ಕಳೆದು ಹೋದ ಪ್ರೀತಿಯನ್ನು ಮರಳಿ ಪಡೆಯುವ, ಮುಡಿ ಕೊಡುವ ತಲೆ ಕೂದಲು ಟೆಂಡರ್ ನಲ್ಲಿ ಹೊಸ ಬದಲಾವಣೆ ತರವಲ್ಲಿ, ಹಾಗೂ ಜಾತೀಯತೆಯ ಸಿದ್ಧ ಸೂತ್ರದಲ್ಲಿ ಕಥೆ ಮುಗಿಯುವುದು ಮಾಮೂಲಿಯಾದರೂ ಮೊದಲೇ ಹೇಳಿದಂತೆ ಕಥೆಯ ತಿರುಳು ಹೊಸತನದಿಂದ ಕೂಡಿದೆ.
ಸತೀಶ್ ನೀನಾಸಮ್ ಒಂದು ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾಗೂ ಬೇರೆಯ ರೀತಿಯ ಮ್ಯಾನರೀಸಂ ನಲ್ಲಿ ಸತೀಶ್ ಮಿಂಚಿದ್ದಾರೆ.
ಜಾತೀಯತೆ ಮತ್ತು ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತುವಂತ ಪಾತ್ರವನ್ನು ಮೊದಲಬಾರಿಗೆ ಸತೀಶ್ ನಿಭಾಯಿಸಿದ್ದಾರೆ.

ಇನ್ನು ಸಪ್ತಮಿಗೌಡ ಒಬ್ಬ ಸಾಧಾರಣ ಹಳ್ಳಿಯ ಸವಿತಾ ಸಮಾಜದ ಹೆಣ್ಣುಮಗಳಾಗಿ, ಅಶೋಕನ ಪ್ರೇಮಿಯಾಗಿ ಮಡದಿಯಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ದೊಡ್ಡ ಹೈಲೈಟ್ ಅಂದ್ರೆ  ಸಂಪತ್ ಮೈತ್ರೇಯ ಕುಟ್ಟಿ ಬಾಬ್ಜಿಯಾಗಿ ವಿಚಿತ್ರ ಮ್ಯಾನರಿಸಮ್ ನಲ್ಲಿ ತಮಿಳು ಮೂಲದ ಕೂದಲು ದಂಧೆಯ ಖಳನಟನಾಗಿ ಸ್ಕೋರ್ ಮಾಡಿದ್ದಾರೆ, ಹಾಗೆಯೇ ಯಶ್ ಶೆಟ್ಟಿ ಕುಟ್ಟಿ ಬಾಬ್ಜಿಯ ಮಗನಾಗಿ ಅಪ್ಪನ ಕ್ರೌರ್ಯವನ್ನು ಮುಂದುವರೆಸಿದ್ದಾರೆ.
ಮತ್ತು ಚಿತ್ರದ ಮತ್ತೊಂದು ಪ್ರಮುಖ ಪಾತ್ರವೆಂದರೆ ಅಪ್ಪನಾಗಿ ಬಿ. ಸುರೇಶ್  ಕೋಪ, ತಾಪ, ತ್ಯಾಗ,ಪ್ರೀತಿ ನಂಬಿಕೆ, ಅಸಹಾಯಕಥೆಯ ಪ್ರತಿರೂಪವಾಗಿ ಪಾತ್ರದೊಳಗೆ ಜೀವಿಸಿ ಆ ಪಾತ್ರಕ್ಕೆ ಒಂದು ಕಳೆಯನ್ನು ತಂದುಕೊಟ್ಟಿದ್ದಾರೆ.
ರವಿಶಂಕರ್ ರವರು ಒಬ್ಬ ಒಳ್ಳೆಯ ಅಧಿಕಾರಿಯಾಗಿ ಅತಿಥಿ ನಟನಾಗಿ ಅಭಿನಯಿಸಿದ್ದಾರೆ.
ಗೋಪಾಲ್ ಕೃಷ್ಣ ದೇಶಪಂಡೆ ಹಳ್ಳಿಯಲ್ಲಿ ಜನರ ಪರವಾಗಿ , ಜನರ ಹಕ್ಕಿಗಾಗಿ ಹೋರಾಡುವ ಕ್ರಾಂತಿಕಾರಿಯಾಗಿ ಪಾತ್ರ ನಿಭಾಯಿಸಿದ್ದಾರೆ.
ಒಟ್ಟಿನಲ್ಲಿ ಯಾವುದೇ ಗೊಂದಲಗಳಿಲ್ಲದ, ಮುಜುಗರವಿಲ್ಲದೆ ಚಿತ್ರ ನೋಡಬಹುದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor