ಚಿತ್ರ ವಿಮರ್ಶೆ – ಅಂದೊಂದು ಕಾಲದ ನೆನಪುಗಳ ಸಾಗರ

ಚಿತ್ರ ವಿಮರ್ಶೆ

ಚಿತ್ರ – ಅಂದೊಂದಿತ್ತು ಕಾಲ
ನಿರ್ಮಾಪಕರು – ಭುವನ್ ಸುರೇಶ್
ನಿರ್ದೇಶನ – ಕೀರ್ತಿ ಕೃಷ್ಣ
ಛಾಯಾಗ್ರಹಣ – ಅಭಿಷೇಕ್ ಕಾಸರಗೋಡು
ಸಂಗೀತ – ರಾಘವೇಂದ್ರ ವಿ.
Rating – 3/5

ವಿಮರ್ಶೆ – ಮಂಜುರಾಜ್ ಸೂರ್ಯ

ತಾರಾಗಣ: ವಿನಯ್‍ ರಾಜಕುಮಾರ್, ಅದಿತಿ ಪ್ರಭುದೇವ, ನಿಶಾ ರವಿಕೃಷ್ಣನ್, ಜಗ್ಗಪ್ಪ, ಅರುಣಾ ಬಾಲರಾಜ್‍, ಧರ್ಮೇಂದ್ರ ಅರಸ್‍ ಮುಂತಾದವರು.

ಸಿನಿಮಾ ಅನ್ನೋದು ಕೆಲವರಿಗೆ ಮನರಂಜನೆ, ಕೆಲವರಿಗೆ ಫ್ಯಾಷನ್, ಇನ್ನೂ ಕೆಲವರಿಗೆ ಬದುಕು, ಬದುಕಿನೊಳಗಿನ ಕನಸು.
ಅಂತ ಒಂದು ಕನಸನ್ನು ಹೊತ್ತು ಹಳ್ಳಿಯಿಂದ ಬೆಂಗಳೂರಿಗೆ ಬರುವ ಗ್ರಾಮೀಣ ಪ್ರತಿಭೆ ಬೆಂಗಳೂರಿನ ಗಾಂಧೀನಗರಕ್ಕೆ ಕಾಲಿಟ್ಟು, ಚಿತ್ರ ಜಗತ್ತಿಗೆ ತನ್ನನ್ನು ತಾನು ತೆರೆದು ಕೊಳ್ಳುವ ಹಾಗೂ ಸಿನಿಮಾವೊಂದನ್ನು ನಿರ್ದೇಶಿಸುವ ಸಾಹಸಕ್ಕೆ ಕೈ ಹಾಕುವ ಕಾಯಕಕ್ಕೆ ನಟ ವಿನಯ್ ರಾಜಕುಮಾರ್ ಬಣ್ಣ ಹಚ್ಚುವ ಮೂಲಕ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.


ಈ ಚಿತ್ರ ಅದೆಷ್ಟೋ ನಿರ್ದೇಶಕರ ಸಮಸ್ಯೆಗಳನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ ನಿರ್ದೇಶಕ ಕೀರ್ತಿಕೃಷ್ಣ.
ಸಿನಿಮಾ ನಿರ್ದೇಶಕರಾಗುವ ಕನಸ್ಸನ್ನು ಹೊತ್ತು ಬರುವವರು ಏನೆಲ್ಲಾ ಕಷ್ಟ ಪಡಬೇಕು, ಕೆಲವು ನಿರ್ದೇಶಕರ ಕೈ ಕೆಳಗೆ ಕೆಲಸ ಕಲಿಯಲು ಬರುವವರನ್ನು ಹೇಗೆಲ್ಲಾ ಬಳಸಿಕೊಳ್ಳುತ್ತಾರೆ, ಹಾಗೆ ಒಂದು ಸಿನಿಮಾ ಮಾಡಲು ನಿರ್ಮಾಪಕರನ್ನು ಒಪ್ಪಿಸುವುದು ಹೇಗೆ, ಒಂದು ಸಿನಿಮಾ ತಯಾರಾಗಲು ಏನೆಲ್ಲಾ ಸವಾಲುಗಳು ಬರುತ್ತವೆ ಎನ್ನುವುದನ್ನು ಮನಮುಟ್ಟುವಂತೆ ತೋರಿಸಲಾಗಿದೆ.
ವಿನಯ್ ರಾಜಕುಮಾರ್ ಮೂರು ಶೇಡ್ ಗಳಲ್ಲಿ ಪಾತ್ರ ನಿರ್ವಹಣೆಯನ್ನು ಚನ್ನಾಗಿ ನಿಭಾಯಿಸಿದ್ದಾರೆ.
ಜೊತೆಗೆ ನಾಯಕಿಯಾಗಿ ಅಧಿತಿ ಪ್ರಭುದೇವ ಸಾಥ್ ನೀಡಿದ್ದಾರೆ.


ಹಾಗೆಯೇ ನಿಶಾ ರವಿಕೃಷ್ಣನ್ ಕೂಡ ಮೊದಲರ್ಧದಲ್ಲಿ ವಿನಯ್ ಗೆ ಜೊತೆಯಸಗಿ ಮಿಂಚಿದ್ದಾರೆ.
ಮಗನ ಏಳಿಗೆಗಾಗಿ ಶ್ರಮಿಸುವ ಹಾಗೂ ನಿರ್ದೇಶಕನೇ ಆಗಬೇಕು ಎಂದು ಬೆಂಗಳೂರಿಗೆ ಮಗನನ್ನು ಕಳಿಸುವ ತಾಯಿಯಾಗಿ ಅರುಣಾ ಬಾಲರಾಜ್ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುತ್ತಾರೆ.

ಮುಂಗಾರು ಮಳೆಯಲ್ಲಿ ಒಂದು ಸಾಂಗ್ ಚಿತ್ರ ಬಿಡುಗಡೆಗೂ ಮುಂಚೆಯೇ ಒಳ್ಳೆಯ ಸದ್ದು ಮಾಡಿತ್ತು ಅದು ಬಿಟ್ಟರೆ ಚಿತ್ರದೊಳಗೆ ಯಾವುದು ಗಮನ ಸೆಳೆಯುವಂತ ಹಾಡುಗಳಿಲ್ಲ.
ಸಂಗೀತ ನಿರ್ದೇಶಕ ರಾಘವೇಂದ್ರ ರವರು ಇನ್ನಷ್ಟು ಒಳ್ಳೆಯ ಹಾಡುಗಳನ್ನು ನೀಡಬಹುದಿತ್ತು.
ಇನ್ನು ಅಭಿಷೇಕ್ ಕಾಸರಗೋಡು ತಮ್ಮ ಕ್ಯಾಮೆರಾ ಕಣ್ಣುಗಳಿಂದ ಪ್ರೇಕ್ಷಕರ ಕಣ್ಣುಗಳಿಗೆ ಒಳ್ಳೆಯ ದೃಶ್ಯಗಳನ್ನು ಸೆರೆ ಹಿಡಿದು ಬೆಳ್ಳಿ ಪರದೆಯ ಮೇಲೆ  ಮೂಡಿಸಿದ್ದಾರೆ.

ಕಥಾನಾಯಕ ಕಷ್ಟಪಟ್ಟು ಸಿನಿಮಾ ಮಾಡಿ ಯಶಸ್ಸನ್ನು ಕಂಡಾಗ ಅದನ್ನು ರವಿಚಂದ್ರನ್ ವೀಕ್ ಎಂಡ್ ವಿತ್ ರವಿಚಂದ್ರನ್ ಕಾರ್ಯಕ್ರಮದ ರೂವಾರಿಯಾಗಿ ಚಿತ್ರದ ಕ್ಲೈಮ್ಯಾಕ್ಸ್ ಗೆ ಅತಿಥಿಯಾಗಿ ನಟಿಸಿದ್ದಾರೆ.
ಬಾಲ್ಯದ ನೆನಪುಗಳು, ಬಾಲ್ಯದ ಗ್ರಾಮೀಣ ಆಟಗಳನ್ನು ಸವಿಯಲು, ತಾಯಿಮಗನ ಸೆಂಟಿಮೆಂಟಿನ ಮನ ಮಿಡಿಯುವ ಹಾಡನ್ನು ಸವಿಯಲು ಸಿನಿಮಾದೊಳಗೊಂದು ಸಿನಿಮಾ ನೋಡಲು ಅಂದೊಂದಿತ್ತು ಕಾಲ ನೋಡಬಹುದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor