‘ಗಾಡ್ ಪ್ರಾಮಿಸ್’ಗೆ ಸಿಕ್ಕರು ನಾಯಕಿ…ಸೂಚನ್ ಶೆಟ್ಟಿಗೆ ಜೂಹಿ ಜಯಕುಮಾರ್ ನಾಯಕಿ

ಸೂಚನ್ ಶೆಟ್ಟಿ ‘ಗಾಡ್ ಪ್ರಾಮಿಸ್’ ಸಿನಿಮಾಗೆ ಜೂಹಿ ಜಯಕುಮಾರ್ ನಾಯಕಿ

ನವ ನಿರ್ದೇಶಕ ಸೂಚನ್ ಶೆಟ್ಟಿ ಕಲ್ಪನೆಯಲ್ಲಿ ಮೂಡಿ ಬರ್ತಿರುವ ಸಿನಿಮಾ ಗಾಡ್ ಪ್ರಾಮಿಸ್. ಟೈಟಲ್ ನಿಂದ ಕುತೂಹಲ ಹೆಚ್ಚಿಸಿರುವ ಈ ಚಿತ್ರದಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಗಾಡ್ ಪ್ರಾಮಿಸ್ ಸಿನಿಮಾಗೀಗ ನಾಯಕಿ ಸಿಕ್ಕಿದ್ದಾರೆ. ಕೇರಳ ಮೂಲದ ಮಲಯಾಳಂ ಚಿತ್ರಗಳಲ್ಲಿ ಮಿಂಚಿರುವ ಜೂಹಿ ಜಯಕುಮಾರ್ ನಾಯಕ ಸೂಚನ್ ಅವರಿಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ.

ಪವಿ ಕೇರ್ ಟೇಕರ್, ತಲೈವಾ ತಲೈವಿ ಹಾಗೂ ಸುಮತಿ ಒಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ಮಾಡಿರುವ ಜೂಹಿ ಈಗ ಗಾಡ್ ಪ್ರಾಮಿಸ್ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಕನ್ನಡಿಗರಿಗೆ ಪರಿಚಯವಾಗುತ್ತಿದ್ದಾರೆ. ಜೂಹಿ ಜಯಕುಮಾರ್ ಅವರನ್ನು ಚಿತ್ರತಂಡ ಆಡಿಷನ್ ಮೂಲಕ ಆಯ್ಕೆ ಮಾಡಿದೆ.

ಕುಂದಾಪುರ ಹಾಗೂ ಬೆಂಗಳೂರು ಎರಡು ಕಡೆ ಆಡಿಷನ್ ನಡೆಸಲಾಯಿತು. ಆನ್ ಲೈನ್ ಹಾಗೂ ಆಫ್ ಲೈನ್ ಎರಡು ವಿಧದಲ್ಲಿ ಆಡಿಷನ್ ನಡೆಸಲಾಗಿದೆ. 4 ಸಾವಿರಕ್ಕೂ ಹೆಚ್ಚು‌ ಆನ್ ಲೈನ್ ನಲ್ಲಿ ಹಾಗೂ ಆಫ್ ಲೈನ್ ಆಡಿಷನ್ ನಲ್ಲಿ 1ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಇಷ್ಟು ಜನರ ಪೈಕಿ ಪಾತ್ರಕ್ಕೆ ಜೂಹಿ ಜಯಕುಮಾರ್ ಸೂಕ್ತರಾಗಿದ್ದಾರೆಂದು ಚಿತ್ರತಂಡ ಅವರನ್ನು ಆಯ್ಕೆ ಮಾಡಿದೆ. ಆಯ್ಕೆ ಬಳಿಕ ಜೂಹಿ ಅವರಿಗಾಗಿ ವರ್ಕ್ ಶಾಪ್ ನಡೆಸಲಾಯಿತು. ಈ ವೇಳೆ ಅವರು ತಮ್ಮ ಕಲಾ ಕೌಶಲ್ಯವನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿದರು.

ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಜೂಹಿ ಜಯಕುಮಾರ್, “ಗಾಡ್ ಪ್ರಾಮಿಸ್ ಸಿನಿಮಾದಲ್ಲಿ ತಮ್ಮ ಪಾತ್ರಕ್ಕೆ ಚಿತ್ರದಲ್ಲಿ ಒಳ್ಳೆ ಸ್ಕೋಪ್ ಇದೆ. ಮರ ಸುತ್ತವ ಪಾತ್ರವಲ್ಲ. ಬದಲಿಗೆ ತೂಕ ಇರುವಂತಹ ಪಾತ್ರದಲ್ಲಿ ತಾವು ಅಭಿನಯಿಸಿದ್ದೇನೆ.‌‌ ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿರುವ ಖುಷಿ ಇದೆ. ನಿರ್ದೇಶಕ ಸೂಚನ್ ಶೆಟ್ಟಿ ಹೊಸತನಕ್ಕೆ ತುಡಿತ ಹೊಂದಿರುವ ನಿರ್ದೇಶಕರು.‌ ಗಾಡ್ ಪ್ರಾಮಿಸ್ ಪ್ರೇಕ್ಷಕರಿಗೆ ಮನರಂಜನೆಯನ್ನು ಉಣಬಡಿಸಲಿದೆ” ಎಂದರು.

ಪಾಂಚ ಜನ್ಯ ಫಿಲ್ಮ್ ಪ್ರೊಡಕ್ಷನ್ ನಡಿ ಮಹೇಂದ್ರ ಶೆಟ್ಟಿ ನಿರ್ಮಿಸುತ್ತಿರುವ ಸಿನಿಮಾಗೆ ಗುರುಪ್ರಸಾದ್ ನರ್ನಾಡ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಭರತ್ ಮಧುಸೂದನ್ ಅವರ ಸಂಗೀತ, ನವೀನ್ ಶೆಟ್ಟಿ ಅವರ ಸಂಕಲನ ಈ ಚಿತ್ರಕ್ಕೆ ಇರಲಿದೆ.

ಈಗಾಗಲೇ 40ರಷ್ಟು ಶೂಟಿಂಗ್ ನ್ನು ಚಿತ್ರತಂಡ ಮುಕ್ತಾಯಗೊಳಿಸಿದೆ. ಏಪ್ರಿಲ್ ಅಂತ್ಯಕ್ಕೆ ಚಿತ್ರೀಕರಣ ಮುಗಿಸಿ, ಈ ಈ ವರ್ಷಕ್ಕೆ ತೆರೆ ಮೇಲೆ ತರುವ ಯೋಜನೆಯನ್ನು ಸೂಚನ್ ಶೆಟ್ಟಿ ಅಂಡ್ ಟೀಂ ಮಾಡಿಕೊಂಡಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor