“ಕರಿಕಾಡ ಚಿತ್ರ ವಿಮರ್ಶೆ” ರಣ ಬೇಟೆಗಾರ ಕರಿಕಾಡನ ಜನ್ಮ ಜನ್ಮಾಂತರದ ಬೇಟೆ
ಚಿತ್ರ – ಕರಿಕಾಡ
ನಿರ್ಮಾಪಕರು – ದೀಪ್ತಿ ದಾಮೋದರ್
ನಿರ್ದೇಶನ – ವೆಂಕಟೇಶ್ ಕೆ.
ಛಾಯಾಗ್ರಹಣ –
ಸಂಗೀತ – ಅತಿಶಯ ಜೈನ್, ಶಶಾಂಕ್ ಶೇಷಗಿರಿ
Rating -3.5/5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು : ಕಾಡ ನಟರಾಜ್,
ನಿರೀಕ್ಷಾ ಶೆಟ್ಟಿ, ಯಶ್ ಶೆಟ್ಟಿ, ಬೇಬಿ ರಿದ್ದಿ ಮುಂತಾದವರು.
ಬೇಟೆಗಾರ ಕರಿಕಾಡನ ಜನ್ಮ ಜನ್ಮಾಂತರದ ಬೇಟೆ

ಏಳೇಳು ಜನ್ಮದ ಲವ್ ಆಗಿಂದ ಇವಳೇನೆ ಡವ್ ಎನ್ನು ಸಾಲಿನಂತೆ ಅದೆಷ್ಟೇ ಜನ್ಮವಾದರೂ ನೀನೇ ಬೇಕು ಎನ್ನುವ ಪ್ರೇಮಿಗಳ ಭಾವನಾತ್ಮಕವಾದ ನುಡಿಗಳನ್ನು ಕೇಳಿದ್ದೇವೆ.
ಆದರೆ ಮತ್ತೆ ಜನ್ಮವೆತ್ತರೂ ನಿನ್ನನ್ನೇ ಕೊಲ್ಲಬೇಕು ಎನ್ನುವುದು ನಿಜಕ್ಕೂ ಅಚ್ಚರಿ ಮತ್ತು ಸೋಜಿಗ ಎನ್ನಬಹುದು.
ನಿಜಕ್ಕೂ ಈ ಕಥೆ ಹೊಸತನದಿಂದ ಕೂಡಿದೆ.
ನಿರ್ದೇಶಕ ವೆಂಕಟೇಶ್ ಒಂದು ಹೊಸ ರೀತಿಯ ವಿಭಿನ್ನ ಕಥೆಗೆ ಆಕ್ಷನ್ ಕಟ್ ಹೇಳಿದ್ದಾರೆ.
ಇದೊಂದು ಆ್ಯಕ್ಷನ್ ಪ್ರಧಾನ ಚಿತ್ರವಾದರೂ, ತಂದೆ ಮಗಳ ಸೆಂಟಿಮೆಂಟ್, ಪ್ರೇಯಸಿಯ ಅಂತರಾಳ, ಜೊತೆಗೆ ಚಿತ್ರದಲ್ಲಿ ಜನ್ಮ ಜನ್ಮಂತರದ ಪ್ರೇಮಿಗಳ ದ್ವೇಷದ ಕಿಚ್ಚು ಆಕ್ಷನ್, ಥ್ರಿಲ್ಲರ್ ಕಥೆಯನ್ನು ನಿಭಾಯಿಸುವಲ್ಲಿ ನಿರ್ದೇಶಕ ವೆಂಕಟೇಶ್ ಗೆದ್ದಿದ್ದಾರೆ ಎನ್ನಬಹುದು.
ಕಾಡ ನಟರಾಜ್‌ಮೊದಲ ಬಾರಿಗೆ ಕರಿಕಾಡನಾಗಿ ಬಣ್ಣ ಹಚ್ಚಿದ್ದಾರೆ ಆದರೆ ಹೊಸ ನಟನಾದರೂ ಅಭಿನಯದಲ್ಲಿ ಯಾವುದೇ ಕೊರತೆಗಳಿಲ್ಲದೇ ಪಾತ್ರಕ್ಕೆ ಜೀವ ತುಂಬಿದ್ದಾರೆ
ಆತ ಕಾಡು ಪ್ರಾಣಿಗಳಿಗೆ ಬಾಣ ಹೂಡುವುದರಲ್ಲಿ ಮಹಾ ಬೇಟೆಗಾರ
ಸದ್ದು ಕೇಳಿದ ಕಡೆಗೆ ಬಾಣ ಬಿಟ್ಟು ಗುರಿ ತಲುಪಿಸಬಲ್ಲ ಶಬ್ಧವೇದಿಯಂತಹ ಚಾಣಾಕ್ಷ.
ಈತನ ಬಂದೂಕಿನ ಗುಂಡು ಗುರಿ ತಪ್ಪಿದ ಉದಾಹರಣೆಯೇ ಇಲ್ಲ.
ಇಂಥ ರಣಬೇಟೆಗಾರನಿಗೆ ಶತ್ರುಗಳು ಯಾರರಂಬುದೇ ಚಿತ್ರದ ಹೈಲೈಟ್.
ಕರಿಕಾಡ ಚಿತ್ರದ ಕಥಾನಾಯಕನಾಗಿ ಕಾಡ ನಟರಾಜ್ ಪಾತ್ತಕ್ಕೆ ಜೀವ ತುಂಬಿದ್ದಾರೆ. ಚಿತ್ರದ ಸಾಹಸಮಯ ಸನ್ನಿವೇಶಗಳಲ್ಲಿ ಯಾವ ಆ್ಯಕ್ಷನ್ ಹೀರೋ ಗಳಿಗೆ ಕಡಿಮೆ ಇಲ್ಲ ಎನ್ನುವಂತೆ ಚಿತ್ರದಲ್ಲಿ ನಟರಾಜ್ ಅಭಿನಯಿಸಿದ್ದಾರೆ.
ಕಥಾ ನಾಯಕಿಯಾಗಿ ನಿರೀಕ್ಷಾ ಶೆಟ್ಟಿ ಕನಕಳ ಪಾತ್ರದ ಹಳ್ಳಿಗಾಡಿನ ಹುಡುಗಿಯಾಗಿ ಒಳ್ಳೆಯ ಅಭಿನಯ ನೀಡಿದ್ದಾರೆ. ಡಿಗ್ಲಾಮರ್ ನಲ್ಲೂ ಪ್ರೇಕ್ಷಕರ ಮನ ಸೆಳೆಯುವಂತೆ ಕಾಣಿಸಿಕೊಂಡಿದ್ದಾರೆ.
ಕಾಡ ಮತ್ತು ಕನಕ ಜೋಡಿ ಬೆಳಿತೆರೆಯ ಮೇಲೆ ಆಕರ್ಷಕವಾಗಿದೆ.
ಅತಿಶಯ್ ಜೈನ್ ಹಾಗೂ ಶಶಾಂಕ್ ಶೇಷಗಿರಿ ನೀಡಿರುವ ಸಂಗೀತ ಕಥೆಯ ಓಟಕ್ಕೆ ಸಹಕಾರಿಯಾಗಿದೆ ಎನ್ನಬಹುದು.
ನಟ ಯಶ್ ಶೆಟ್ಟಿ ಖಳನಟನಾಗಿ ಕರಿಕಾಡನ ಎದುರು ತೊಡೆ ತಟ್ಟಿದ್ದಾರೆ. ತಂದೆ ಭೂಪತಿಯಾಗಿ ಬಲರಾಜ್ ವಾಡಿ ಮಾಡಿದ್ದಾರೆ. ವಿಜಯ್ ಚೆಂಡೂರ್ ಕುತೂಹಲ ಮೂಡಿಸುತ್ತದೆ.
ಒಟ್ಟಿನಲ್ಲಿ ಕುಟುಂಬ ಸಮೇತ ವೀಕ್ಷಿಸ ಬಹುದಾದ ಕಂಟೆಂಟ್ ಓರಿಯಂಟೆಡ್ ಚಿತ್ರ ಇದಾಗಿದ್ದು
ಸಮೇತ ನೋಡಬಹುದಾದ ಸಿನಿಮಾ ಎಂದು ಹೇಳಬಹುದು.











